»   »  ಓಂ ಪ್ರಕಾಶ್, ಪುನೀತ್ ಕಾಂಬಿನೇಷನಲ್ಲಿ ಹೊಸ ಚಿತ್ರ

ಓಂ ಪ್ರಕಾಶ್, ಪುನೀತ್ ಕಾಂಬಿನೇಷನಲ್ಲಿ ಹೊಸ ಚಿತ್ರ

Posted By:
Subscribe to Filmibeat Kannada
Puneeth Rajkumar
ಪಕ್ಕಾ ಮಾಸ್ ನಿರ್ದೇಶಕ ಎಂದೇ ಖ್ಯಾತರಾದ ಓಂ ಪ್ರಕಾಶ್ ರಾವ್ ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಗೆ ಆಕ್ಷನ್, ಕಟ್ ಹೇಳಲಿದ್ದಾರೆ. ದರ್ಶನ್, ದೇವರಾಜ್, ರವಿಚಂದ್ರನ್, ಸುದೀಪ್, ಶಿವರಾಜ್ ಕುಮಾರ್, ಮಾಲಾಶ್ರೀ ಅವರ ಚಿತ್ರಗಳನ್ನು ನಿರ್ದೇಶಿಸಿ ಓಂ ಪ್ರಕಾಶ್ ಸೈ ಎನ್ನಿಸಿಕೊಂಡಿದ್ದಾರೆ. ಈಗ ಪುನೀತ್-ಓಂ ಪ್ರಕಾಶ್ ಹೊಸ ಕಾಂಬಿನೇಷನಲ್ಲಿ ಚಿತ್ರ ಬರಲಿದೆ.

ಕನಕಪುರದ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪುನೀತ್ ನಟಿಸುತ್ತಿರುವ 'ರಾಮ್' ಚಿತ್ರೀಕರಣ ಮುಗಿದ ಬಳಿಕ ಇನ್ನೂ ಹೆಸರಿಡದ ಓಂ ನಿರ್ದೇಶನದ ಚಿತ್ರ ಆರಂಭವಾಗಲಿದೆ. ಜೂನ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ. ಉಳಿದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.

ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದ ಪುನೀತ್ ಅಭಿನಯದ 'ಮಯೂರ' ಚಿತ್ರ ನಿರ್ದೇಶಕ ಶೋಭನ್ ಅವರ ಅಕಾಲಿಕ ಮರಣದಿಂದ ನಿಂತುಹೋಗಿತ್ತು. ಈಗ 'ಮಯೂರ' ಡೇಟ್ಸ್ ನಲ್ಲೇ ಪುನೀತ್ ಈ ಚಿತ್ರವನ್ನು ಮಾಡಿಕೊಡುತ್ತಿದ್ದಾರೆ. ಮಯೂರ ಸೆಟ್ಟೇರುವ ಹೊತ್ತಿಗೆ ಪುನೀತ್ ಬೇರೆ ಬೇರೆ ಸಿನಿಮಾಗಳಿಗೆ ಕಮಿಟ್ ಆಗಿದ್ದರು. ಹಾಗಾಗಿ ಕನಕಪುರ ಶ್ರೀನಿವಾಸ್ ಅವರ ಮತ್ತೊಂದು ಪ್ರಾಜೆಕ್ಟ್ ಗೆ ಡೇಟ್ಸ್ ಹೊಂದಾಣಿಕೆಯಾಗಿರಲಿಲ್ಲ. ಹಾಗಾಗಿ ಸುದೀರ್ಘಎರಡು ವರ್ಷ ಶ್ರೀನಿವಾಸ್ ಕಾಯಬೇಕಾಯಿತು.

ಈ ವರ್ಷವೇ ಶ್ರೀನಿವಾಸ್ ಅವರಿಗೆ ಚಿತ್ರವೊಂದನ್ನು ಮಾಡಿಕೊಡುವುದಾಗಿ ಪುನೀತ್ ಸಹ ಹೇಳಿದ್ದರು. ಅವರ ಮಾತು ನಿಜವಾಗಿದ್ದು ಕನಕಪುರ ಶ್ರೀನಿವಾಸ್ ಖುಷಿಯಾಗಿದ್ದಾರೆ. ಶಿವರಾಜ್ ಕುಮಾರ್ ಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಓಂ ಪ್ರಕಾಶ್ ಅವರದು. ಈಗ ಪುನೀತ್-ಓಂ ಪ್ರಕಾಶ್ ಕಾಂಬಿನೇಷನ್ ಚಿತ್ರ ಹೇಗೆ ಬರುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೇ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ರಾಮು ವಿಷಾದ
ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್
ಪುನೀತ್ ಅಭಿಮಾನಿಗಳ ಸಂಘಕ್ಕೆ ವಿದ್ಯುಕ್ತಚಾಲನೆ
ಬಾಕ್ಸಾಫೀಸ್ ಕಿಂಗ್ ಅಪ್ಪುಗೆ ಹುಟ್ಟುಹಬ್ಬದ ಸಂಭ್ರಮ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada