»   »  ಐಪಿಸಿ ಸೆಕ್ಷನ್ 300ಕ್ಕೆ ಮಾತಿನ ಚಿತ್ರೀಕರಣ ಪೂರ್ಣ

ಐಪಿಸಿ ಸೆಕ್ಷನ್ 300ಕ್ಕೆ ಮಾತಿನ ಚಿತ್ರೀಕರಣ ಪೂರ್ಣ

Subscribe to Filmibeat Kannada
Vijay Raghavendra
ಪ್ರೇಮಿಗಳಾದ ಮೇಲೆ ಸಿನೆಮಾ, ಹೋಟಲ್, ಇತ್ಯಾದಿ ಅಂತ ಸುತ್ತಾಡುವುದು ಮಾಮೂಲು. ಹೀಗೆ ಯುವ ಪ್ರೇಮಿಗಳಿಬ್ಬರಲ್ಲಿ ಸಿನೆಮಾಗೆ ಹೋಗೋಣ ಎಂಬ ಮಾತುಕಥೆ ನಡೆದಿರುತ್ತದೆ. ಪ್ರಿಯಕರನಿಗಿಂತ ಮೊದಲು ಬಂದ ಪ್ರೇಯಸಿ ನಲ್ಲನ ಬರುವಿಕೆಗೆ ಕಾಯುತ್ತಿರುತ್ತಾಳೆ. ಆ ಸಮಯಕ್ಕೆ ಬ್ಲಾಕ್ ಟಿಕೇಟ್ ಮಾರುತ್ತಿದ್ದ ಒಬ್ಬ ವ್ಯಕ್ತಿ ಈಕೆಯ ಬಳಿ ಬಂದು ಟಿಕೇಟ್ ಬೇಕೆ ಎನ್ನುತ್ತಾನೆ. ಆತನ ಮಾತಿನಿಂದ ಸಿಡಿಮಿಡಿಗೊಂಡ ಆಕೆ, 'ನೀನೇನು ದೊಡ್ದ ಹೀರೋನಾ? ಅಥವಾ ಅಮೀರ್‌ಖಾನಾ? ಎಂದು ಕೇಳುತ್ತಿದ್ದ ಸಮಯಕ್ಕೆ ಆಕೆಯ ಪ್ರಿಯಕರನ ಆಗಮನವಾಗುತ್ತದೆ.

ಈ ಮೇಲಿನ ಸನ್ನಿವೇಶವನ್ನು 'ಐ.ಪಿ.ಸಿ ಸೆಕ್ಷನ್ 300' ಚಿತ್ರಕ್ಕಾಗಿ ನಿರ್ದೇಶಕ ಶಶಿಕಾಂತ್ ಚಿತ್ರೀಕರಿಸಿಕೊಂಡರು. ವಿಜಯ್ ರಾಘವೇಂದ್ರ ಹಾಗೂ ಪ್ರಿಯಾಂಕ ಪ್ರೇಮಿಗಳ ಪಾತ್ರದಲ್ಲಿ ಕಾಣಿಸಿಕೊಂಡರೆ, ಟಿಕೇಟ್ ಮಾರುವವನ ಪಾತ್ರದಲ್ಲಿ ಬುಲೆಟ್ ಪ್ರಕಾಶ್ ಅಭಿನಯಿಸಿದ್ದಾರೆ. ಈ ಸನ್ನಿವೇಶದ ಚಿತ್ರೀಕರಣದೊಂದಿಗೆ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದೆ ಎಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ.

ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಐ.ಪಿ.ಸಿ ಸೆಕ್ಷನ್ 300 ಚಿತ್ರಕ್ಕೆ ಶಶಿಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀರ್ ಸಮರ್ಥ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿದೆ. ವಿಜಯ್ ರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಶಂಕರ್, ಮುನಿ, ರವೀಂದ್ರನಾಥ್ ಚಿತ್ರದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!
ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ
ಬಿಬಿಎಂಪಿ ಚುನಾವಣಾ ಕಣಕ್ಕೆ ನಿರ್ಮಾಪಕ ಸುರೇಶ್!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada