»   »  ತೆಲುಗು ಮೋಹಕ ತಾರೆ ಇಲಿಯಾನಾ ಕನ್ನಡಕ್ಕೆ?

ತೆಲುಗು ಮೋಹಕ ತಾರೆ ಇಲಿಯಾನಾ ಕನ್ನಡಕ್ಕೆ?

Subscribe to Filmibeat Kannada
Actress Ileana
ತೆಲುಗು ಚಿತ್ರರಂಗದ ಮೋಹಕ ನಟಿ ಇಲಿಯಾನಾ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. 'ಬಿಂದಾಸ್' ನಿರ್ಮಾಪಕ ಚಂದ್ರಶೇಖರ್ ತಮ್ಮ ಮುಂದಿನ ಚಿತ್ರಕ್ಕೆ ಇಲಿಯಾನಾರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಎಲ್ಲಾ ಸರಿ ಹೋದರೆ ಇಲಿಯಾನಾಗೆ ನಾಯಕನಾಗುವ ಅದೃಷ್ಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ಒಲಿಯಲಿದೆ. ಗಣೇಶ್ ಈಗ 'ಉಲ್ಲಾಸ ಉತ್ಸಾಹ' ಚಿತ್ರೀಕರಣರದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಂತರ ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ಆನಂತರ ಇಲಿಯಾನಾ ನಾಯಕಿಯಾಗಿರುವ ಹೊಸ ಚಿತ್ರ ಆರಂಭವಾಗಲಿದೆ.

ಮುರಳಿ ಮತ್ತು ರಮ್ಯಾ ಅಭಿನಯದ 'ಕಂಠಿ' ಚಿತ್ರವನ್ನು ನಿರ್ದೇಶಿಸಿದ್ದ ಭರತ್ ಈ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕಂಠಿ ಚಿತ್ರದ ನಂತರ ಭರತ್ ನಿರ್ದೇಶನದಲ್ಲಿ ಯಾವುದೇ ಚಿತ್ರ ಬಂದಿರಲಿಲ್ಲ. ಈಗ ಗಣೇಶ್ ಮತ್ತು ಇಲಿಯಾನಾರಿಗೆ ಆಕ್ಷನ್, ಕಟ್ ಹೇಳುವ ಅವಕಾಶ ಹುಡುಕಿಕೊಂಡು ಬಂದಿದೆ.

ಇಲಿಯಾನಾ ಹುಟ್ಟಿದ್ದು ಮುಂಬೈನಲ್ಲಿ. ತಂದೆ ರೋಮನ್ ಕ್ಯಾಥೋಲಿಕ್, ತಾಯಿ ಮುಸ್ಲಿಂ. ವಯಸ್ಸು ಇನ್ನೂ 22 ವರ್ಷ. ತೆಲುಗಿನ 'ದೇವದಾಸು' ಮೂಲಕ ಇಲಿಯಾನಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ಫೇರ್ ಅಂಡ್ ಲವ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತೆಲುಗಿನ 'ಪೋಕಿರಿ' ಇಲಿಯಾನಾಗೆ ಉತ್ತಮ ಹೆಸರು ತಂದುಕೊಟ್ಟಂತಹ ಚಿತ್ರ. ನಂತರ ಹಲವಾರು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಬಾಲಿವುಡ್ ನಲ್ಲೂ ಅವಕಾಶ ಹುಡುಕಿಕೊಂಡು ಬಂದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!
ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ
ತಮಿಳು ಚಿತ್ರರಂಗಕ್ಕೆ ವಿಶಾಲ್ ಹೆಗಡೆ ಪಲಾಯನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada