»   » ಪುನೀತ್, ಪಾರ್ವತಿ ಜೋರ್ಡಾನ್ ಗೆ ಜೂಟ್

ಪುನೀತ್, ಪಾರ್ವತಿ ಜೋರ್ಡಾನ್ ಗೆ ಜೂಟ್

Posted By:
Subscribe to Filmibeat Kannada

ಪಾರ್ವತಿ ಮೆನನ್ ಜೊತೆ ಪುನೀತ್ ರಾಜ್ ಕುಮಾರ್ ಜೋರ್ಡಾನ್ ಗೆ ಜೂಟ್ ಹೇಳಲಿದ್ದಾರೆ! ಇದೇನಪ್ಪಾ ಇದು ಸುದ್ದಿ ಎಂದು ಗಾಬರಿಯಾಗಬೇಡಿ. ಅವರಿಬ್ಬರೂ ಹಾಗೆ ಜೂಟ್ ಹೇಳುತ್ತಿರುವುದು ಪೃಥ್ವಿ ಚಿತ್ರದ ಚಿತ್ರೀಕರಣಕ್ಕಾಗಿ. ಎರಡು ಹಾಡುಗಳನ್ನು ಚಿತ್ರೀಕರಿಸಿಕೊಂಡು ಬರಲು ಪುನೀತ್ ಜತೆ ಪಾರ್ವತಿ ಜೋರ್ಡಾನ್ ವಿಮಾನ ಹತ್ತಲು ಸಿದ್ಧರಾಗಿದ್ದಾರೆ.

ಈ ಹಿಂದೆ ಚೆಲುವೆಯೆ ನಿನ್ನೇ ನೋಡಲು ಚಿತ್ರಕ್ಕಾಗಿ ಶಿವರಾಜ್ ಕುಮಾರ್ ಜೋರ್ಡಾನ್ ಗೆ ಹೋಗಿ ಬಂದಿದ್ದರು. ಇದೀಗ ಆ ಸರದಿ ಪುನೀತ್ ರದ್ದು. ಫೆಬ್ರವರಿ 1ರಂದು ಪುನೀತ್ ಜೋರ್ಡಾನ್ ವಿಮಾನ ಹತ್ತಲಿದ್ದಾರೆ ಎಂದು ಪೃಥ್ವಿ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

65 ದಿನಗಳ ಕಾಲ ಚಿತ್ರೀಕರಣ ನಡೆದಿರುವ ಪೃಥ್ವಿ ಚಿತ್ರ ಶೇ.80ರಷ್ಟು ಚಿತ್ರೀಕರಣ ಮುಗಿಸಿಕೊಂಡಿದೆ. ಈಗಾಗಲೇ ಮೈಸೂರು, ಸೇಲಂ, ವಿಶಾಖಪಟ್ಟಣಂಗಳಲ್ಲಿ ಪೃಥ್ವಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಎಂಟು ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರಕ್ಕೆ ಖರೀದಿದಾರರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಸೂರಪ್ಪ ಬಾಬು.

ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ಕವಿರಾಜ್, ಕಲ್ಯಾಣ್ ಸಾಹಿತ್ಯ, ರಾಜಶೇಖರ್ (ನಾಡೋಡಿಗಳ್, ಪೊರತ್ತಿವೀರನ್) ಸಾಹಸವಿದ್ದು, ಚಿತ್ರವನ್ನು ಯುವ ನಿರ್ದೇಶಕ ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿದ್ದಾರೆ.ತಾರಾಗಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪಾರ್ವತಿ ಮೆನನ್, ಶ್ರೀನಿವಾಸ ಮೂರ್ತಿ, ಸತ್ಯಪ್ರಿಯ, ರಮೇಶ್ ಭಟ್, ಪದ್ಮಜಾ ರಾವ್, ಅವಿನಾಶ್, ಶಿವಾಜಿರಾವ್ ಜಾಧವ್, ಜಾನ್ ವಿಜಯ್, ಜಾನ್ ಅನೀಸ್ ಕುಕ್ಕಿನ್ (ಬಾಲಿವುಡ್ ಖ್ಯಾತಿ) ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada