»   » ಜ.22ರಿಂದ ವಾಯುಪುತ್ರನ 'ಗಂಡೆದೆ' ಆರಂಭ

ಜ.22ರಿಂದ ವಾಯುಪುತ್ರನ 'ಗಂಡೆದೆ' ಆರಂಭ

Posted By:
Subscribe to Filmibeat Kannada

ಅದ್ದೂರಿ ಚಿತ್ರಗಳಿಗೆ ಹೆಸರಾಗಿರುವ ರಾಮು ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ 'ಗಂಡೆದೆ'. ಈ ಚಿತ್ರ ಜನವರಿ 22ರಿಂದ ಆರಂಭವಾಗಲಿದೆ. ರಾಮು ಎಂಟರ್‌ಪ್ರೈಸಸ್ ಲಾಂಛನಾಡಿಯಲ್ಲಿ ಚಿತ್ರವನ್ನು ನಿರ್ಮಿಸಲಿದ್ದಾರೆ.

2009ರಲ್ಲಿ 'ವಾಯುಪುತ್ರ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ 2ನೇ ಚಿತ್ರ ಇದು. ಅರವತ್ತು ದಿನಗಳ ಕಾಲ ಸತತವಾಗಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ರಾಮ್‌ನಾರಾಯಣ್ ಸಾಹಿತ್ಯ, ಸಂಭಾಷಣೆ, ಚಕ್ರಿ ಸಂಗೀತ, ಮುನಿರಾಜ್ ಸಂಕಲನ, ಲಿಂಗರಾಜ್ ಕಗ್ಗಲ್ ನಿರ್ದೇಶನ ಸಹಕಾರವಿದೆ.

ಚಿತ್ರವನ್ನು ತೆಲುಗಿನ 'ಸಿಂಹಾಚಲಂ' ನಿರ್ದೇಶಿಸಿರುವ ಶಿವು ಅಕುಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೋಡಿಯಾಗಿ ರಾಗಿಣಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಉಳಿದ ತಾರಾಬಳಗದ ಆಯ್ಕೆ ಇದೀಗ ಭರದಿಂದ ಸಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada