For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ... ವರನಟ ಡಾ.ರಾಜ್ ಕಿಡ್ನಾಪ್ ಸ್ಟೋರಿ

  By Rajendra
  |

  ಕನ್ನಡ ಚಿತ್ರಪ್ರೇಮಿಗಳ ಕರಾಳ ನೆನಪುಗಳಲ್ಲಿ ಅಚ್ಚಳಿಯದೇ ಉಳಿದ ಪುಟಗಳು ವರನಟ ಡಾ.ರಾಜ್ ಅಪಹರಣ. ಈ ಸತ್ಯ ಘಟನೆಗಳ ಆಧಾರವಾಗಿ ಹೆಣೆದಿರುವ ಚಿತ್ರ 'ಅಟ್ಟಹಾಸ' ತೆರೆಗೆ ಬರಲು ಸಿದ್ಧವಾಗಿದೆ. ಎಎಂಆರ್ ನಿರ್ದೇಶನದ ಈ ಚಿತ್ರದ ವಿಶೇಷ ಪಾತ್ರದಲ್ಲಿ ಅರ್ಜುಜ್ ಸರ್ಜಾ ಅಭಿನಯಿಸಿದ್ದಾರೆ. ವೀರಪ್ಪನ್ ಆಗಿ ಕಿಶೋರ್ ಮೀಸೆ ತಿರುವಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ಸುರೇಶ್ ಒಬೆರಾಯ್ ಪೋಷಿಸಿದ್ದಾರೆ.

  ವೀರಪ್ಪನ್ ಪತ್ನಿಯಾಗಿ ಮುತ್ತು ಲಕ್ಷ್ಮಿ ಪಾತ್ರವನ್ನು ಲಕ್ಷ್ಮಿ ರೈ ಪೋಷಿಸಿದ್ದಾರೆ. ಎಎಂಆರ್ ರಮೇಶ್ ಅವರು ಸತತ ಹತ್ತು ವರ್ಷಗಳ ಕಾಲ ಕಷ್ಟಪಟ್ಟು ಮಾಹಿತಿ ಕಲೆಹಾಕಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ರಮೇಶ್ ಅವರ ಸೈನೇಡ್, ಪೊಲೀಸ್ ಕ್ವಾಟ್ರಸ್‌ ಚಿತ್ರಗಳು ಉತ್ತಮ ನಿರೂಪಣೆಯಿಂದ ಕೂಡಿದ್ದವು. ಹಾಗಾಗಿ ಅಟ್ಟಹಾಸ ಚಿತ್ರವನ್ನು ನಿರೀಕ್ಷಿಸುವಂತಾಗಿದೆ.

  ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್‌ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ತೀವ್ರ ಸಂಚನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಇದೇ ಮೊದಲು. (ಏಜೆನ್ಸೀಸ್)

  English summary
  AMR Ramesh's realistic story Veerappan Attahasa is ready for release. The screenplay of ‘Attahasa’ also includes Dr Rajakumar kidnap & minister Nagappa kidnap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X