»   »  ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ಮದುವೆ

ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ಮದುವೆ

Posted By:
Subscribe to Filmibeat Kannada
Sathya and Nirmala
ಕನ್ನಡ ಚಿತ್ರರಂಗದ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. 'ಆ ದಿನಗಳು' ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಮಿಂಚಿದ್ದ ನಟ ಸತ್ಯ ಸಪ್ತಪದಿ ತುಳಿಯಲಿದ್ದಾರೆ. ಇನ್ನೂ ನೆನಪಾಗುತ್ತಿಲ್ಲವೇ? 'ಸ್ಲಂ ಬಾಲ' ಚಿತ್ರದಲ್ಲಿ ವಿಜಯ್ ಗೆ ಸಾಥ್ ನೀಡಿದ್ದ ನಟ ಹಾಗೂ ಪ್ರಸ್ತುತ 'ಗುಂಡ್ರಗೋವಿ' ಚಿತ್ರದ ಪೂರ್ಣ ಪ್ರಮಾಣದ ನಾಯಕ ನಟನಿಗೆ ವಿವಾಹ ಯೋಗ ಕೂಡಿಬಂದಿದೆ.

ಸತ್ಯನ ಬಾಳ ಸಂಗಾತಿಯಾಗುತ್ತಿರುವುದು ಚಿತ್ರ ನಟಿ ನಿರ್ಮಲಾ! ಈಕೆ ಕನ್ನಡದ ವಿಭಿನ್ನ ಚಿತ್ರ 'ಹಾಡು ಹಕ್ಕಿಯನೇರಿ'ಯಲ್ಲಿ ನಟಿಸಿದ್ದಾರೆ. ಸತ್ಯ ಮತ್ತು ನಿರ್ಮಲಾ ಇಬ್ಬರೂ ಒಟ್ಟಿಗೆ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದವರು. ಒಬ್ಬರನ್ನೊಬ್ಬರು ಮೆಚ್ಚ್ಚಿ, ಒಬ್ಬರ ಇಷ್ಟಗಳು ಇನ್ನೊಬ್ಬರಿಗೆ ತಾಳೆಯಾಗಿ ಈಗ ಪ್ರೇಮ ವಿವಾಹವಾಗುತ್ತಿದ್ದಾರೆ.

ಮದುವೆ ಖುಷಿಯ ಜತೆಗೆ ಸತ್ಯ ಅವರು 'ಕಾಟಿ' ಎಂಬ ಹೊಸ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ರೋನಾ ಮರ್ಲಿನ್ ಮತ್ತೊಬ್ಬರು ಸತ್ಯನಿಗೆ ಬಾಳ ಸಂಗಾತಿಯಾಗಲಿರುವ ನಿರ್ಮಲಾ. 'ಕಾಟಿ'ಚಿತ್ರವನ್ನು ನೀನಾಸಂನ ಮತ್ತೊಬ್ಬ ಪ್ರತಿಭೆ ಸಮನ್ವಿತಾ ನಿರ್ದೇಶಿಸಲಿದ್ದಾರೆ. ಏಪ್ರಿಲ್ 27ರಂದು ಚಿತ್ರ ಸೆಟ್ಟೇರಲಿದೆ.

'ಮುತ್ತಿನ ತೋರಣ' ಸಂತೋಷ ಕೂಟವನ್ನು ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ತಮ್ಮ ಮನೆಯಲ್ಲಿ ಏರ್ಪಡಿಸಿದ್ದರು. ಈ ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಮುತ್ತಿನ ತೋರಣ ಧಾರಾವಾಹಿಯಲ್ಲಿ ನಿರ್ಮಲಾ ನಟಿಸಿದ್ದಾರೆ. ಈ ಧಾರಾವಾಹಿಯನ್ನು ವೈಶಾಲಿ ಕಾಸರವಳ್ಳಿ ನಿರ್ದೇಶಿಸಿರುವುದು ಗೊತ್ತೇ ಇದೆ. ಈ ಸಂತೋಷ ಕೂಟಕ್ಕೆ ಸತ್ಯ ಮತ್ತು ನಿರ್ಮಲಾ ಆಗಮಿಸಿದ್ದದ್ದು ವಿಶೇಷವಾಗಿತ್ತು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಗಲ್ಲಾಪೆಟ್ಟಿಗೆಯಲ್ಲಿ ಜೋಶ್, ಸವಾರಿಗಳ ಗದ್ದಲ
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!
ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹೋರಾಟ!
ಅರ್ಥವಿಲ್ಲದ ಶೀರ್ಷಿಕೆಗಳ ನಡುವೆ 'ಗುಂಡ್ರಗೋವಿ'!
ಕುಹಕಿಗಳ ಬಾಯ್ಮಿಚ್ಚಿಸಿದ ಗುಂಡ್ರುಗೋವಿ
ಹಾರು ಹಕ್ಕಿಯನೇರಿದ ಪ್ರಸನ್ನ ಸುಸ್ತೊ ಸುಸ್ತು
ಒಂದು ಅಪರೂಪದ ಸಿನಿಮಾ ಪುಸ್ತಕ ಬಿಡುಗಡೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada