For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್ ರಾಜ ಪುನೀತ್‌ಗೆ ಹುಟ್ಟುಹಬ್ಬ ಶುಭಾಶಯ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಬಾಕ್ಸಾಫೀಸಿನ ಪವರ್ ಹೌಸ್ ಇದ್ದಂತೆ. ಅವರ ಅಭಿಮಾನಿಗಳಿಗೆ ವರನಟ ಡಾ.ರಾಜ್ ಕುಮಾರ್ ಅವರನ್ನು ಕಂಡಷ್ಟೇ ಸಂತಸ. ಇನ್ನು ಪಾರ್ವತಮ್ಮ ರಾಜ್ ಕುಮಾರ್ ಅವರ ಆಶೀರ್ವಾದ, ಅಣ್ಣಂದಿರ ಹಾರೈಕೆ ಇದ್ದದ್ದೆ. ಅಭಿಮಾನಿಗಳಿಗೆ ಅಪ್ಪು ಎಂದರೆ ಎಲ್ಲಿಲ್ಲದ ಅಕ್ಕರೆ. ಮಾರ್ಚ್ 17ಕ್ಕೆ ಪುನೀತ್ 36ನೇ ವಸಂತಕ್ಕೆ ಅಡಿಯಿಡಲಿದ್ದಾರೆ.

  ರಾಜ್‌ ಬಳಗದ ರಕ್ಷಾ ವರ್ಚಸ್ಸಿನೊಂದಿಗೆ ಕಣಕ್ಕಿಳಿದ ಅಪ್ಪುಗೆ ಯಶಸ್ಸು ಎನ್ನುವುದು ಒಂದು ಸವಾಲು ಅನ್ನಿಸಲೇ ಇಲ್ಲ. ಅವರ ನಟನೆಯ ಬಹುತೇಕ ಚಿತ್ರಗಳು ಶತದಿನೋತ್ಸವನ್ನು ಆಚರಿಸಿಕೊಂಡಿವೆ. ಚಿತ್ರವೊಂದಕ್ಕೆ 2 ಕೋಟಿ ರು.ಗಳಿಗೂ ಅಧಿಕ ಸಂಭಾವನೆ ಪಡೆಯುತ್ತಿರುವ ಪುನೀತ್ ಹಲವಾರು ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.

  ಪ್ರಸ್ತುತ 'ಪರಮಾತ್ಮ' ಮತ್ತು 'ಹುಡುಗ್ರು' ಚಿತ್ರಗಳಲ್ಲಿ ಪುನೀತ್ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ 'ಪರಮಾತ್ಮ' ಚಿತ್ರದ ಬಗ್ಗೆ ಚಿತ್ರೋದ್ಯಮದ ಸಾಕಷ್ಟು ಭರವಸೆ ಇಟ್ಟುಕೊಂಡಿದೆ. ಪುನೀತ್ ಕನ್ನಡ ಚಿತ್ರರಂಗದಲ್ಲಿ ಹೀಗೇ ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ನೋಡುವ, ಸದಭಿರುಚಿಯ ಚಿತ್ರಗಳನ್ನು ನೀಡಲಿ ಎಂದು ದಟ್ಸ್ ಕನ್ನಡ ಹಾರೈಸುತ್ತದೆ. ನಿಮ್ಮ ನೆಚ್ಚಿನ ನಟ ಪುನೀತ್ ಗೆ ಶುಭಾಶಯಗಳನ್ನು ತಿಳಿಸಿ.

  English summary
  Wish Puneet-Rajkumar a Happy B'day : Power star Puneet Rajkumar made his mark on the Kannada filmdom by debuting through the movie Appu. He is popularly known as Appu even today. Puneet is said to command nearly 2 Crore INR per movie which is highest in Kannada Cinema Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X