»   »  ಗೌತಮ್ ಎಂಬ ಹಳೆಯ ಸರುಕಿನಲ್ಲಿ ಪ್ರೇಮ್

ಗೌತಮ್ ಎಂಬ ಹಳೆಯ ಸರುಕಿನಲ್ಲಿ ಪ್ರೇಮ್

Subscribe to Filmibeat Kannada
Prem's Tamil remake Gautham is ready
ಕನ್ನಡದ ಶಾರೂಖ್ ಖಾನ್ ಎಂದು ಒಂದು ಕಾಲದಲ್ಲಿ ಅನ್ನಿಸಿಕೊಂಡಿದ್ದ 'ನೆನಪಿರಲಿ' ಪ್ರೇಮ್ ಒಂದು ಸಂದರ್ಭದಲ್ಲಿ ತಾವು ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲವೆಂದು ಘೋಷಿಸಿದ್ದರು. ಅದರಂತೆ ಕೆಲಕಾಲ ಬರೀ ಸ್ವಮೇಕ್ ಸಿನಿಮಾಗಳಲ್ಲಿಯೆ ನಟಿಸಿದ್ದು ಆಯಿತು.

ಆದರೆ ಜೊತೆ ಜೊತೆಯಲಿ ನಂತರ ನಿರೀಕ್ಷಿತ ಯಶಸ್ಸು ಮಾತ್ರ ಸಿಗಲಿಲ್ಲ. ಹೀಗಾಗಿ ಅನ್ಯತಾ ಶರಣಂ ನಾಸ್ತಿ....ಎಂಬಂತೆ ಎಲ್ಲಾ ನಾಯಕರಂತೆ ಪ್ರೇಮ್ ಕೂಡ ರೀಮೇಕ್ ಸಿನಿಮಾಗಳ ಜಾಡಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಆದರೆ ಅವರು ಆಯ್ಕೆ ಮಾಡಿಕೊಂಡಿರುವ ಕತೆ ಮಾತ್ರ ತೀರ ಔಟ್‌ಡೇಡ್ ಎಂದು ಹೇಳಿದರೆ ಅಡ್ಡಿಯಿಲ್ಲ. ತಮಿಳಿನಲ್ಲಿ ಸುರೇಶ್‌ ಕೃಷ್ಣ ನಿರ್ದೇಶಿಸಿದ್ದ 'ಹಾಯ್ 'ಚಿತ್ರ 'ಗೌತಮ್' ಎಂಬ ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆಂದು ಕಾದು ನೋಡಬೇಕಾಗಿದೆ. ಈಗಾಗಲೇ ಈ ಚಿತ್ರ ತೆಲುಗಿನಲ್ಲಿ ಕೂಡ ರೀಮೇಕ್ ಆಗಿತ್ತು. ವಿಮರ್ಶೆ ಚೆನ್ನಾಗಿದ್ದರು ಸಿನಿಮಾ ಬಾಕ್ಸ್‌ಫೀಸ್‌ನಲ್ಲಿ ಮಕಾಡೆ ಮಲಗಿತ್ತು ಎಂಬುದು ಕಠೋರ ಸತ್ಯ!

(ದಟ್ಸ್ ಕನ್ನಡ ಚಿತ್ರವಾರ್ತೆ)

'ಗೌತಮ್' ಆಗಿ ಬರಲಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada