For Quick Alerts
  ALLOW NOTIFICATIONS  
  For Daily Alerts

  ಸುವರ್ಣ ಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ ಜಗ್ಗೇಶ್

  By Rajendra
  |

  ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ 'ಸುವರ್ಣ ಫಿಲಂ ಅವಾರ್ಡ್ಸ್-2010' ಕಾರ್ಯಕ್ರಮದಲ್ಲಿ ಕನಸುಗಾರ ರವಿಚಂದ್ರನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪ್ರೇಕ್ಷಕರ ಶಿಳ್ಳೆ, ತಾರೆಗಳ ನೃತ್ಯ ಸಂಭ್ರಮಗಳ ನಡುವೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರೆವೇರಿತು.

  ''ನನ್ನ ಮುಖವನ್ನು ಪ್ರೇಕ್ಷಕರು ಎಲ್ಲಿಯವರೆಗೂ ನೋಡಲು ಇಷ್ಟಪಡುತ್ತರೋ ಅಲ್ಲಿಯವರೆಗೂ ನಾನು ನಟಿಸುತ್ತೇನೆ. ಅವರು ಬೇಡ ಎಂದರೆ ಅಲ್ಲಿಗೆ ನಿಲ್ಲಿಸುತ್ತೇನೆ'' ಎಂದು ನಟ ಶಿವರಾಜ್ ಕುಮಾರ್ ಹೇಳಿದರು. ''ನಮ್ಮ ನಡುವಿನ ಕಲಾವಿದರ‌್ಯಾರು ಸಾಯುವುದಿಲ್ಲ. ಅವರನ್ನು ನಾವು ಮರೆತಾಗ ಅವರು ಸಾಯುತ್ತಾರೆ'' ಎಂದರು ಕ್ರೇಜಿಸ್ಟಾರ್.

  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ.ವಿಷ್ಣುವರ್ಧನ್ ಅವರ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಅದನ್ನು ನೋಡಿದ ಭಾರತಿ ವಿಷ್ಣುವರ್ಧನ್ ಹಾಗೂ ಸುಮಲತಾ ಕಣ್ಣೀರಾದರು. ಪ್ರೇಕ್ಷಕರು ಸಹ ಕ್ಷಣಕಾಲ ಭಾವುಕತೆಗೆ ಒಳಗಾಗಿದ್ದರು. ವಿಷ್ಣು ಭಾವಚಿತ್ರದ ಕಲಾಕೃತಿಯನ್ನು ಭಾರತಿ ಅವರಿಗೆ ನೀಡಲಾಯಿತು.

  ಕಾರ್ಯಕ್ರಮದಲ್ಲಿ ರಾಗಿಣಿ, ರಾಧಿಕಾಗಾಂಧಿ, ಪೂಜಾಗಾಂಧಿ, ಐಂದ್ರಿತಾ ರೇ, ಸಂಜನಾಗಾಂಧಿ, ಪ್ರಜ್ಞಾ ಮುಂತಾದವರು ಕುಣಿದು ಕುಪ್ಪಳಿಸಿದರು. ತಾರೆಯರ ಹಾಡು, ನೃತ್ಯಗಳ ನಡುವೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸುದೀಪ್ ರಕ್ಷಿತಾ, ಶ್ರೀನಗರ ಕಿಟ್ಟಿ ಶರ್ಮಿಳಾ ಮಾಂಡ್ರೆ, ದಿಗಂತ್ ಐಂದ್ರಿತಾ ರೇ, ನೀತು ದಿಗಂತ್ ಹೀಗೆ ತಾರಾ ಜೋಡಿಗಳು ಕಾರ್ಯಕ್ರವನ್ನು ನಿರೂಪಿಸಿದ್ದು ವಿಶೇಷವಾಗಿತ್ತು.

  ಸುವರ್ಣ ಫಿಲಂ ಅವಾರ್ಡ್ಸ್-2010 ಪಟ್ಟಿ ಹೀಗಿದೆ:

  *ಅತ್ಯುತ್ತಮ ಸಿನಿಮಾ: ಜೋಶ್

  *ಅತ್ಯುತ್ತಮ ನಟ: ಜಗ್ಗೇಶ್ (ಎದ್ದೇಳು ಮಂಜುನಾಥ)

  *ಅತ್ಯುತ್ತಮ ನಟಿ: ಐಂದ್ರಿತಾ ರೇ (ಮನಸಾರೆ)

  *ಅತ್ಯುತ್ತಮ ಪೋಷಕ ನಟ : ತಬಲಾ ನಾಣಿ (ಎದ್ದೇಳು ಮಂಜುನಾಥ)

  *ಅತ್ಯುತ್ತಮ ಪೋಷಕ ನಟಿ : ಸುಮಿತ್ರಾ (ಗೋಕುಲ)

  *ಅತ್ಯುತ್ತಮ ಹಾಸ್ಯ ನಟ: ರಾಜು ತಾಳಿಕೋಟೆ (ಮನಸಾರೆ)

  *ಅತ್ಯುತ್ತಮ ನಿರ್ದೇಶಕ: ಶಿವಮಣಿ (ಜೋಶ್)

  *ಅತ್ಯುತ್ತಮ ಸಂಭಾಷಣೆಕಾರ: ಅಗ್ನಿ ಶ್ರೀಧರ್ (ಕಳ್ಳರ ಸಂತೆ)

  *ಅತ್ಯುತ್ತಮ ಗೀತ ರಚನೆಕಾರ: ಜಯಂತ ಕಾಯ್ಕಿಣಿ (ಮನಸಾರೆ)

  *ಅತ್ಯುತ್ತಮ ಹಿನ್ನೆಲೆ ಗಾಯಕ: ಚೇತನ್ (ಅಂಬಾರಿ)

  *ಅತ್ಯುತ್ತಮ ಹಿನ್ನೆಲೆ ಗಾಯಕಿ: ಶಮಿತಾ ಮಲ್ನಾಡ್(ಬಿರುಗಾಳಿ)

  *ಅತ್ಯುತ್ತಮ ಸಾಹಸ ನಿರ್ದೇಶಕ: ರವಿವರ್ಮ(ಕಬಡ್ಡಿ)

  *ಅತ್ಯುತ್ತಮ ಛಾಯಾಗ್ರಾಹಕ: ಸಂತೋಷ್ ರೈ ಪತಾಜೆ (ಜೋಶ್)

  *ಅತ್ಯುತ್ತಮ ಕಲಾ ನಿರ್ದೇಶಕ : ಶಶಿಧರ ಅಡಪ (ಮನಸಾರೆ)

  *ಅತ್ಯುತ್ತಮ ನೃತ್ಯ ನಿರ್ದೇಶಕ : ಇಮ್ರಾನ್ ಸರ್ದಾರಿಯಾ (ರಾಮ್)

  *ಅತ್ಯುತ್ತಮ ಸಂಕಲನಕಾರ: ದೀಪು ಎಸ್ ಕುಮಾರ್(ಮಳೆಯಲಿ ಜೊತೆಯಲಿ)

  *ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ರಾಜ್)

  ವಿಶೇಷ ಪ್ರಶಸ್ತಿಗಳು:

  *ವರ್ಷದ ಮನರಂಜನಾ ನಟ: ಪುನೀತ್ ರಾಜ್ ಕುಮಾರ್

  *ವರ್ಷದ ಜನಪ್ರಿಯ ನಟ: ಸುದೀಪ್

  *ವರ್ಷದ ಜನಪ್ರಿಯ ನಟಿ: ಪೂಜಾಗಾಂಧಿ

  *ವರ್ಷದ ಜನಪ್ರಿಯ ನಿರ್ದೇಶಕ: ಪ್ರೇಮ್

  *ವರ್ಷದ ಭರವಸೆಯ ಹೊಸ ನಟ: ರಾಕೇಶ್(ಜೋಶ್)

  *ವರ್ಷದ ಭರವಸೆಯ ಹೊಸ ನಟಿ: ರಾಗಿಣಿ (ವೀರಮದಕರಿ)

  *ವರ್ಷದ ಪ್ರೇಕ್ಷಕರ ತಾರಾ ಜೋಡಿ: ಶ್ರೀನಗರ ಕಿಟ್ಟಿ ಮತ್ತ್ತು ರಾಧಿಕಾ ಪಂಡಿತ್ (ಒಲವೇ ಜೀವನ ಲೆಕ್ಕಾಚಾರ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X