»   » ಎರಡನೇ ಮಗುವಿಗೆ ಜನ್ಮ ನೀಡಿದಸಿನಿಮಾ ತಾರೆ ಸಿಮ್ರಾನ್‌

ಎರಡನೇ ಮಗುವಿಗೆ ಜನ್ಮ ನೀಡಿದಸಿನಿಮಾ ತಾರೆ ಸಿಮ್ರಾನ್‌

Posted By:
Subscribe to Filmibeat Kannada

ದಕ್ಷಿಣ ಭಾರತ ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ಕೆಲಕಾಲ ಮಿಂಚಿದ ಸಿನಿಮಾ ತಾರೆ ಸಿಮ್ರಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ (ಮಾ.17) ಬೆಳಗ್ಗ್ಗೆ ಗಂಡು ಮಗುವನ್ನು ಹಡೆದಿದ್ದಾರೆ ಸಿಮ್ರಾನ್. ಇದು ಆಕೆಗೆ ಎರಡನೇ ಗಂಡು ಮಗು. ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ಆಸ್ಪತ್ರೆ ಮೂಲ ಖಚಿತಪಡಿಸಿವೆ.

ಪಂಜಾಬಿ ಮೂಲದ ಸಿಮ್ರಾನ್ ಡಿಸೆಂಬರ್ 2, 2003ರಲ್ಲಿ ಉದ್ಯಮಿ ದೀಪಕ್ ಬಗ್ಗ ಅವರನ್ನು ಮದುವೆಯಾಗಿದ್ದರು. ಜೂನ್ 11, 2005ರಲ್ಲಿ ಸಿಮ್ರಾನ್ ಚೊಚ್ಚಲ ಹೆರಿಗೆಯಲ್ಲಿ ಗಂಡು ಮಗುವನ್ನು ಹಡೆದಿದ್ದರು. ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳನ್ನು ನಿರರ್ಗಳವಾಗಿ ಸಿಮ್ರಾನ್ ಮಾತನಾಡಬಲ್ಲರು.

ಭರತನಾಟ್ಯ ಮತ್ತು ಸಾಲ್ಸಾ ನೃತ್ಯರೀತಿಗಳಲ್ಲಿ ಸಿಮ್ರಾನ್ ಅವರಿಗೆ ಹಿಡಿತವಿರುವ ಕಾರಣ ಆಕೆ ಬಹಳ ಬೇಗ ಚಿತ್ರರಂಗದಲ್ಲಿ ನೆಲೆಕಂಡು ಕೊಂಡಿದ್ದರು. 2000ನೇ ಇಸವಿಯಲ್ಲಿ ತುಂಬಾ ಬೇಡಿಕೆಯಲ್ಲಿದ್ದ ಸಿಮ್ರಾನ್‌ ರು.2 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಈಗ ಚಿತ್ರಗಳಲ್ಲಿ ನಟಿಸುತ್ತಿಲ್ಲವಾದರೂ ಆಕೆಗೆ ರು.80ರಿಂದ 150 ಲಕ್ಷ ಸಂಭಾವನೆ ನೀಡಲು ಆಫರ‍್ಗಳು ಬರುತ್ತಿವೆಯಂತೆ.

English summary
Actress Simran has delivered a baby boy again. She gave birth to her second baby today morning at a private hospital in Chennai. Sources say that both Simran and the baby are doing good. Punjabi kudi Simran married businessman Deepak Bagga on December 02, 2003.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada