»   » ಜಗ್ಗೇಶ್, ಕೋಮಲ್ ಡಬಲ್ ಕಾಮಿಡಿ ಲಿಫ್ಟ್ ಕೊಡ್ಲಾ

ಜಗ್ಗೇಶ್, ಕೋಮಲ್ ಡಬಲ್ ಕಾಮಿಡಿ ಲಿಫ್ಟ್ ಕೊಡ್ಲಾ

Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಮತ್ತು ಅವರ ಸಹೋದರ ಕೋಮಲ್ ಒಟ್ಟಾಗಿ ನಟಿಸಲಿರುವ ಚಿತ್ರಕ್ಕೆ 'ಲಿಫ್ಟ್ ಕೊಡ್ಲಾ' ಎಂದು ಹೆಸರಿಡಲಾಗಿದೆ. ಈ ಹಿಂದೆ ಈ ಚಿತ್ರಕ್ಕೆ 'ವೈಕುಂಠ ಎಕ್ಸ್ ಪ್ರೆಸ್'ಎಂದು ನಾಮಕರಣ ಮಾಡಲಾಗಿತ್ತು. ಆದರೆ ಇದೀಗ ಈ ಚಿತ್ರಕ್ಕೆ 'ಲಿಫ್ಟ್ ಕೊಡ್ಲಾ?' ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. 'ಸ್ವರ್ಗಕ್ಕೆ ಮೂರೇ ಗೇಣು' ಎಂಬುದು ಚಿತ್ರದ ಅಡಿಬರಹ.

ಜಗ್ಗೇಶ್ ಮತ್ತು ಕೋಮಲ್ ಕಿಲಾಡಿ ಜೋಡಿ ಪ್ರೇಕ್ಷಕರನ್ನ್ನು ನಕ್ಕು ನಲಿಸುತ್ತಾ ಲಿಫ್ಟ್ ಕೊಡಲು ರೆಡಿಯಾಗಿದೆ. ಲಿಫ್ಟ್ ಕೊಡ್ಲಾ? ಚಿತ್ರಕ್ಕೆ ನವೆಂಬರ್ 23ರಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರವನ್ನು ಸಿಎಂಆರ್ ಪ್ರೊಡಕ್ಷನ್ಸ್ ನ ಶಂಕರರೆಡ್ಡಿ ನಿರ್ಮಿಸುತ್ತ್ತಿದ್ದಾರೆ. ಛಾಯಾಗ್ರಹಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅಶೋಕ್ ಕಶ್ಯಪ್ ಹೊತ್ತಿದ್ದಾರೆ.

ವಿ.ಮನೋಹರ್ ಅವರ ಸಂಗೀತ, ರಾಂ ನಾರಾಯಣ್ ಸಂಭಾಷಣೆ, ಉದಯರವಿ ಹೆಗಡೆ ಸಂಕಲನ, ಭಾವಾ ಕಲೆ, ಜಾಲಿ ಬಾಸ್ಟಿನ್ ಸಾಹಸ, ದೇವಾನಂದ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಸುದರ್ಶನ್, ರಾಜು ತಾಳಿಕೋಟೆ, ಕಿಶೋರ್, ವಿ ಮನೋಹರ್, ಶೋಭರಾಜ್, ಬ್ಯಾಂಕ್ ಜನಾರ್ದನ್, ಬುಲೆಟ್ ಪ್ರಕಾಶ್, ಕಿಲ್ಲರ್ ವೆಂಕಟೇಶ್, ಸಂಗಮೇಶ ಉಪಾಸೆ ತಾರಾಗಣದಲ್ಲಿದ್ದಾರೆ.

ನಾಯಕಿಯ ಆಯ್ಕೆ ನಡೆಯುತ್ತಿದೆ. 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದ್ದು, ಬೆಂಗಳೂರು, ಕೊಡಚಾದ್ರಿ, ಮಂಗಳೂರು ಮತ್ತು ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಶಂಕರರೆಡ್ಡಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...