»   »  ಶ್ರುತಿ ಹುಟ್ಟುಹಬ್ಬಕ್ಕೆ ಚಕ್ರವರ್ತಿಒಲವಿನ ಉಡುಗೊರೆ!

ಶ್ರುತಿ ಹುಟ್ಟುಹಬ್ಬಕ್ಕೆ ಚಕ್ರವರ್ತಿಒಲವಿನ ಉಡುಗೊರೆ!

Subscribe to Filmibeat Kannada

ನಟಿ ಶ್ರುತಿಯವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 18ರಂದು ನಿರ್ದೇಶಕ ಚಂದ್ರಚೂಡ್ ತನ್ನ ಹೊಸ ಚಿತ್ರ 'ಪರಮಾತ್ಮ'ನ ಹಾಡುಗಳಿಗೆ ರಾಗಸಂಯೋಜನೆ ಮಾಡಲಿದ್ದಾರೆ. ಪತ್ರಕರ್ತ ಚಂದ್ರಚೂಡ್ ನಿರ್ದೇಶಕ ಚಕ್ರವರ್ತಿಯಾಗಿ ಈ ಹಿಂದೆ ಆನೇಕಲ್ ಬಾಲರಾಜ್‌ ನಿರ್ಮಾಣದ 'ಜನ್ಮ' ಚಿತ್ರವನ್ನು ಪ್ರಾರಂಭಿಸಿದ್ದರು.

ಆ ಪ್ರಾಜೆಕ್ಟ್ ಮುಂದೆ ಹೋಗಿದ್ದರಿಂದ ಚಕ್ರವರ್ತಿ ಈಗ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಸ್ನೇಹಿತ ಜಿ.ಎಂ. ರೆಡ್ಡಿ ನಿರ್ಮಿಸುತ್ತಿರುವ ಪರಮಾತ್ಮ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ರೆಡಿಮಾಡಿಕೊಂಡಿದ್ದು, ಬರುವ ಸೆಪ್ಟೆಂಬರ್ 18ರಂದು ಚಿತ್ರದ 6 ಹಾಡುಗಳಿಗೆ ರಾಗ ಸಂಯೋಜನೆ ಕಾರ್ಯ ಪ್ರಾರಂಭಿಸಲಿದ್ದಾರೆ.

ಸಂಗೀತ ನಿರ್ದೇಶಕರು, ಛಾಯಾಗ್ರಾಹಕರ ಹೆಸರುಗಳನ್ನು ಅಂದೇ ಪ್ರಕಟಿಸಲಿದ್ದು, ನಾಯಕ-ನಾಯಕಿಯಾಗಿ ಹೊಸ ಪ್ರತಿಭೆಗಳು ಅಭಿನಯಿಸಲಿದ್ದು, ನಟಿ ಶ್ರುತಿ ಮತ್ತು ಚಕ್ರವರ್ತಿ ಕೂಡ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಸ್ ಮಹೇಂದರ್ ಅವರಿಂದ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಮೇ.5ರಂದು ಶ್ರುತಿ ಅರ್ಜಿ ಸಲ್ಲಿಸಿದ ವಿಚಾರ ಗೊತ್ತೇ ಇದೆ.ಇದೀಗ ಚಲನಚಿತ್ರ ಪತ್ರಕರ್ತ ಚಕ್ರವರ್ತಿ ಅವರನ್ನು ಮರುಮದುವೆಯಾಗುವ ಇಂಗಿತವನ್ನು ಶ್ರುತಿ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada