»   »  ಚಿರಂಜೀವಿ ಸೋಲು : ಅಭಿಮಾನಿ ಅತ್ಮಹತ್ಯೆ

ಚಿರಂಜೀವಿ ಸೋಲು : ಅಭಿಮಾನಿ ಅತ್ಮಹತ್ಯೆ

Posted By:
Subscribe to Filmibeat Kannada

ಕಾಕಿನಾಡ, ಮೇ. 18 : ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷ ಹೀನಾಯ ಸೋಲನುಭವಿಸಿದ್ದಕ್ಕೆ ಬೇಸತ್ತ ಚಿರು ಅಭಿಮಾನಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ಕಾಕಿನಾಡದಲ್ಲಿ ನಡೆದಿದೆ.

ಕೋಣಸೀಮಾ ವಲಯ ಮಮ್ಮಿದಿವರಂ ಮಂಡಲ್ ಬಳಿ ಇರುವ ಕೋತಲಂಕ ಎಂಬ ಗ್ರಾಮದ ನಲ್ಲ ನಾರಾಯಣ (45) ಅತ್ಯಹತ್ಯೆ ಮಾಡಿಕೊಂಡ ವ್ಯಕ್ತಿ. ಘಟನೆ ತಿಳಿಯುತ್ತಿದ್ದಂತೆಯೇ ನಾರಾಯಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೃತವ್ಯಕ್ತಿ ಪತ್ನಿ ಇಬ್ಬರು ಪುತ್ರಿಯರು, ಒಬ್ಬ ಮಗನನ್ನು ಅಗಲಿದ್ದಾರೆ. ಚಿರಂಜೀವಿ ಅವರು ಪಾಲಕೊಲ್ಲು ವಿಧಾನಸಭೆ ಚುನಾವಣೆಯಲ್ಲಿ ಸೋತಿರುವುದಕ್ಕೆ ನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada