»   »  ಇನಿಯಾ ಚಿತ್ರತಂಡದ ಮೇಲೆ ಪೊಲೀಸರಿಂದ ಹಲ್ಲೆ

ಇನಿಯಾ ಚಿತ್ರತಂಡದ ಮೇಲೆ ಪೊಲೀಸರಿಂದ ಹಲ್ಲೆ

Subscribe to Filmibeat Kannada
ಚಿತ್ರೀಕರಣಕ್ಕೆ ಅನುಮತಿ ಪತ್ರ ಇಲ್ಲ ಎಂಬ ಕಾರಣಕ್ಕೆ 'ಇನಿಯಾ' ಚಿತ್ರತಂಡದ ಮೇಲೆ ಪೊಲೀಸರು ಹಲ್ಲೆ ನಡಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಈ ಘಟನೆಯನ್ನು ಖಂಡಿಸಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಬುಧವಾರ 'ಇನಿಯಾ'ಚಿತ್ರತಂಡ ಮೌನ ಪ್ರತಿಭಟನೆ ನಡೆಸಿತು.

ನಮ್ಮ ಬಳಿ ಚಿತ್ರೀಕರಣಕ್ಕಾಗಿ ಅನುಮತಿ ಪತ್ರ ಇದ್ದರೂ ಪೊಲೀಸರು ಅನಾವಶ್ಯಕವಾಗಿ ಹಲ್ಲೆ ನಡೆಸಿದ್ದಾರೆ. ಅವರು ಕೂಡಲೆ ಕ್ಷಮೆಯಾಚಿಸಬೇಕು ಎಂದು 'ಇನಿಯಾ' ಚಿತ್ರತಂಡ ಆಗ್ರಹಿಸಿತು. ರವಿಚಂದ್ರನ್ ಸಹೋದರ ಬಾಲಾಜಿ ಮತ್ತು ನಟಿ ಪೂಜಾಗಾಂಧಿ ಅವರು ಚಿತ್ರದ ಪ್ರಧಾನ ಪಾತ್ರಧಾರಿಗಳು.

ಶೈಲೇಂದ್ರ ಬಾಬು ನಿರ್ಮಿಸುತ್ತಿರುವ ಇನಿಯಾ ಚಿತ್ರವನ್ನು ಮಹೇಶ್ ನಿರ್ದೇಶಿಸುತ್ತಿದ್ದಾರೆ. ಛಾಯಾಗ್ರಹಣ ಸುಂದರನಾಥ್ ಸುವರ್ಣ, ಸಂಗೀತ ಶ್ರೀಧರ್. ತಾರಾಗಣದಲ್ಲಿ ಊರ್ವಶಿ, ಲೋಕನಾಥ್, ಬಿ.ವಿ.ರಾಧಾ, ಚಿತ್ರಾ ಶೈಣೈ, ನೀನಾಸಂ ಅಶ್ವಥ್, ಸಂಕೇಶ್ ಕಾಶಿ, ರೇಖಾ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
ಖ್ಯಾತ ಕಾದಂಬರಿಕಾರ ಅನಂತರಾವ್ ಆಗಮನ
ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada