»   » ಪ್ರೊಡಕ್ಷನ್ ನಂ.1ರಲ್ಲಿ ಪೂಜಾಗಾಂಧಿ

ಪ್ರೊಡಕ್ಷನ್ ನಂ.1ರಲ್ಲಿ ಪೂಜಾಗಾಂಧಿ

Posted By:
Subscribe to Filmibeat Kannada

'ಅನು' ಖ್ಯಾತಿಯ ಶಿವಗಣಪತಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರ ಪ್ರೊಡಕ್ಷನ್ ನಂ.1 ಗೆ ಮೊದಲ ಹಂತದ ಚಿತ್ರೀಕರಣವನ್ನು ಜನವರಿ 31ರಿಂದ ಪ್ರಾರಂಭಿಸಿ, ಮೈಸೂರು ಸುತ್ತಮುತ್ತ 10 ದಿನಗಳ ಕಾಲ ನಿರಂತರವಾಗಿ ನಡೆಸಲಾಗಿದೆ. ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮಾಡಿದ್ದು, ಸದ್ಯದಲ್ಲೇ 2ನೇ ಹಂತದ ಚಿತ್ರೀಕರಣವನ್ನು ಪ್ರಾರಂಭಿಸಲಾಗುವುದು.

ಸಮಾಜದಲ್ಲಿ ತನ್ನನ್ನು ಎಲ್ಲರೂ ಗುರುತಿಸಬೇಕು ಎಂದು ಆಸೆ ಇಟ್ಟುಕೊಂಡಿರುವ ಯುವಕರ ಸುತ್ತ ಹೆಣೆಯಲಾದ ಕಥೆ ಹೊಂದಿರುವ ಈ ಚಿತ್ರದಲ್ಲಿ ನಟಿ ಪೂಜಾ ಗಾಂಧಿ, ರಘು ಮುಖರ್ಜಿ, ಶ್ರೀ, ಅನಂತವೇಲು, ಜಯಲಕ್ಷ್ಮೀ, ಬುಲೆಟ್ ಪ್ರಕಾಶ್ ಹಾಗೂ ಶ್ರೀನಿವಾಸ್ ಪ್ರಧಾನ ಪಾತ್ರವರ್ಗದಲ್ಲಿದ್ದಾರೆ.

ಸುರೇಂದ್ರರೆಡ್ಡಿ ಛಾಯಾಗ್ರಹಣ, ಆಶ್ಲೇ-ಅಭಿಲಾಷ್ ಸಂಗೀತ ಸಂಯೋಜನೆ, ಬಿ.ಎಸ್. ಕೆಂಪರಾಜ್ ಸಂಕಲನ, ಗಜೇಂದ್ರ ಕುಮಾರ್‌ರ ಸಂಭಾಷಣೆ ಈ ಚಿತ್ರಕ್ಕಿದೆ. ಏಕರುದ್ರಾದೇವಿ ಫಿಲಂಸ್ ಲಾಂಛನದಲ್ಲಿ ಚನ್ನುಪಾಟಿ ನಾಗಮಲ್ಲೇಶ್ವರಿ ನಿರ್ಮಿಸುತ್ತಿದ್ದಾರೆ. ಶಿವಗಣಪತಿ-ಗಣೇಶ್‌ಚಂದ್ರ ಸಹ ನಿರ್ಮಾಪಕರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada