»   »  ಉಪ್ಪಿ 'ಸೂಪರ್'ಗೆ ಇಪ್ಪತ್ತು ಕೋಟಿ ಬಜೆಟ್!

ಉಪ್ಪಿ 'ಸೂಪರ್'ಗೆ ಇಪ್ಪತ್ತು ಕೋಟಿ ಬಜೆಟ್!

Subscribe to Filmibeat Kannada

ಬರ್ತ್ ಡೇ ಬಾಯ್ ಉಪೇಂದ್ರ ನಲವತ್ತೆರಡನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಶೀಘ್ರದಲ್ಲೇ ತಮ್ಮ ನಿರ್ದೇಶನದ 'ಸೂಪರ್' ಚಿನ್ಹೆಯ ಚಿತ್ರದ ವಿವರಗಳು ಬಹಿರಂಗವಾಗಲಿವೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಉಪೇಂದ್ರ ತಳ್ಳಿಹಾಕುತ್ತಿಲ್ಲ. ತಮ್ಮ ಚಿತ್ರದಲ್ಲಿ ಐಶ್ವರ್ಯ ರೈ ನಟಿಸುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

'ಸೂಪರ್' ಚಿತ್ರಕ್ಕೆ ಬಂಡವಾಳ ಎಷ್ಟು ಎಂಬ ಪ್ರಶ್ನೆಗೆ ಬರೋಬ್ಬರಿ ರು.20 ಕೋಟಿ ಎನ್ನುತ್ತವೆ ಮೂಲಗಳು. ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ ಈಗಾಗಲೇ ಆಡಿಯೋ ಹಕ್ಕ್ಕುಗಳು ಮಾರಾಟವಾಗಿದೆ. ತಮ್ಮ ಸೂಪರ್ ಚಿತ್ರ ಉದ್ಯಮದಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವುದನ್ನು ಉಪೇಂದ್ರ ಸಹ ಒಪ್ಪುತ್ತಾರೆ.

ನಿರ್ದೇಶಕ ಯೋಗರಾಜ ಭಟ್ ಸಹ ತಮ್ಮ ಚಿತ್ರದ ಶೀರ್ಷಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಅದ್ಭುತ ಎಂದಿದ್ದಾರೆ. ಐಶ್ವರ್ಯ ರೈ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರದಲ್ಲಿ ನಟಿಸಲು ಅವರು ಒಪ್ಪ್ಪುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಪ್ರಯತ್ನವಂತೂ ಮಾಡುತ್ತೇವೆ ಎಂದು ಉಪೇಂದ್ರ ತಿಳಿಸಿದ್ದಾರೆ.

ಅಂದಹಾಗೆ ಸೂಪರ್ ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಅವರೇ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಚಿತ್ರಕತೆ ಏನು ಎಂದು ಕೇಳಿದರೆ, ಇದು ಇಂತಹದ್ದೇ ಚಿತ್ರ ಎಂದು ಒಂದೇ ಸಾಲಿನಲ್ಲಿ ಹೇಳಲು ಸಾಧ್ಯವಿಲ್ಲ. ಒಟ್ಟಾರೆಯಾಗಿ ಇದೊಂದು ವಿಭಿನ್ನ ಚಿತ್ರ. ನಾನೇನು ಮಾಡುತ್ತೇನೋ ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದುಕೊಂಡಿದ್ದೇನೆ. ನಾನು ಅಪ್ ಡೇಟ್ ಆಗಿದ್ದೇನಾ ಅಥವಾ ಔಟ್ ಡೇಡಾ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎನ್ನುತ್ತ್ತಾರೆ ಉಪೇಂದ್ರ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada