»   » ರಕ್ಷಿತಾ ಬ್ಯಾನರ್ ನಲ್ಲಿ ರಮ್ಯಾ ಗೂ ಸ್ಥಾನ ಉಂಟಂತೆ!

ರಕ್ಷಿತಾ ಬ್ಯಾನರ್ ನಲ್ಲಿ ರಮ್ಯಾ ಗೂ ಸ್ಥಾನ ಉಂಟಂತೆ!

Posted By:
Subscribe to Filmibeat Kannada

ನಟಿ ರಕ್ಷಿತಾ ಅವರ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆ ಪ್ರೇಮ್ ಫಿಕ್ಚರ್ಸ್ ಜನವರಿ 24ರಿಂದ ಕಾರ್ಯಾರಂಭ ಮಾಡಲಿದೆ. ಪ್ರೇಮ್ ಫಿಕ್ಚರ್ಸ್ ನ ಮೊದಲ ಚಿತ್ರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಜೋಗಯ್ಯ' ನಿರ್ಮಾಣವಾಗಲಿದೆ. ಇದು ಶಿವಣ್ಣ ಅಭಿಯನದ 100ನೇ ಚಿತ್ರವೂ ಹೌದು. ಶಿವಣ್ಣನ ಪತ್ನಿ ಗೀತಾ ಅವರ ಸಲಹೆಯ ಮೇರೆಗೆ ರಕ್ಷಿತಾ ನಿರ್ಮಾಪಕಿಯ ಸ್ಥಾನವನ್ನು ಅಲಂಕರಿಸಿದ್ದಾಗಿ ತಿಳಿಸಿದ್ದಾರೆ.

ತಮಗೆ ಸಿಕ್ಕಿರುವ ನಿರ್ಮಾಪಕಿಯ ಪಾತ್ರವನ್ನು ರಕ್ಷಿತಾ ಅವರು ಬಹಳ ಎಚ್ಚರಿಕೆಯಿಂದ ನಿಭಾಯಿಸಲು ತೀರ್ಮಾನಿಸಿದ್ದಾರಂತೆ. ಜೋಗಯ್ಯ ಚಿತ್ರಕ್ಕಾಗಿ ಶಿವಣ್ಣನಿಗೆ ಮುಂಗಡ ಹಣ ಕೊಟ್ಟ್ಟ ಕ್ಷಣಗಳು ನಿಜಕ್ಕೂ ಮರೆಯಲು ಸಾಧ್ಯವಿಲ್ಲ ಎನ್ನುವ ರಕ್ಷಿತಾ, ಶಿವಣ್ಣ ಅವರ ಸ್ವತಃ ನಿರ್ಮಾಣದ ಚಿತ್ರ 'ಅಪ್ಪು' ಮೂಲಕ ನಾನು ಬೆಳ್ಳಿತೆರೆಗೆ ಅಡಿಯಿಟ್ಟಿದ್ದನ್ನು ನೆನೆಯುತ್ತಾರೆ.

ಕೇವಲ ರಾಜ್ ಕುಟುಂಬದರೊಂದಿಗೆ ಮಾತ್ರ ಚಿತ್ರಗಳನ್ನು ನಿರ್ಮಾಣ ಮಾಡುವುದಿಲ್ಲ. ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ಎಲ್ಲ ನಟರಿಗೂ ಅವಕಾಶ ಕೊಡುವುದಾಗಿ ರಕ್ಷಿತಾ ತಿಳಿಸಿದ್ದಾರೆ. ನಿಜವಾದ ಪ್ರತಿಭೆಗಳಿಗೆ ತಮ್ಮ ಸಂಸ್ಥೆಯ ಚಿತ್ರಗಳಲ್ಲಿ ಅವಕಾಶ ಇದ್ದೇ ಇರುತ್ತದೆ ಎಂಬ ಮಾತನ್ನು ರಕ್ಷಿತಾ ಹೇಳಿದ್ದಾರೆ.

ತಮ್ಮ ನಿರ್ಮಾಣದ ಚಿತ್ರಗಳಲ್ಲಿ ಮುಂಬೈ ಹುಡುಗಿಯರಿಗಿಂತ ಸ್ಥಳೀಯ ಹುಡುಗಿಯರಿಗೆ ಹೆಚ್ಚು ಅವಕಾಶ ನೀಡುತ್ತೇನೆ. ತನ್ನ ಸಹ ನಟಿಯರಾದ ಶರ್ಮಿಳಾ ಮಾಂಡ್ರೆ, ರಮ್ಯಾ ಅವರ ಚಿತ್ರಗಳನ್ನೂ ಮುಂದೊಂದು ದಿನ ನಿರ್ಮಿಸುವುದಾಗಿ ರಕ್ಷಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada