»   » ಸಂಜು ವೆಡ್ಸ್ ಗೀತಾ ವಿಶೇಷ ಗೆಟಪ್ ನಲ್ಲಿ ಕಿಟ್ಟಿ

ಸಂಜು ವೆಡ್ಸ್ ಗೀತಾ ವಿಶೇಷ ಗೆಟಪ್ ನಲ್ಲಿ ಕಿಟ್ಟಿ

Posted By:
Subscribe to Filmibeat Kannada

'ಸಂಜು ವೆಡ್ಸ್ ಗೀತಾ' ನಾಗಶೇಖರ್ ನಿರ್ದೇಶನದ 2 ನೇ ಚಿತ್ರ. ಹಾಸ್ಯನಟನಾಗಿ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿದ್ದ ಅವರು, ಗಣೇಶ್ ಅಭಿನಯದ 'ಅರಮನೆ' ಚಿತ್ರನಿರ್ದೇಶಿಸಿ, ಯಶಸ್ವಿಯಾಗಿದ್ದರು. ನಟಿ ರಮ್ಯ ಹಾಗೂ ಕಿಟ್ಟಿ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ ತಮಿಳುನಾಡಿನ ಊಟಿ, ಮೊದಲಾದ ಕಡೆ ಮೊದಲಹಂತದ ಚಿತ್ರೀಕರಣವನ್ನು ಮುಗಿಸಿದ್ದು, ಇದೀಗ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

ವಿಶೇಷವಾಗಿ ನಿರ್ಮಿಸಿರುವ ಜೈಲಿನ ಸೆಟ್‌ನಲ್ಲಿ ನಿರಂತರ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ಕಿಟ್ಟಿಗೆ ವಿಶೇಷ ಗೆಟಪ್ ಹಾಕಿಸಿರುವ ನಿರ್ದೇಶಕರು ಈ ಗೆಟಪ್‌ಗಾಗಿ ಒಂದು ತಿಂಗಳ ಕಾಲ ತರಬೇತಿ ಕೊಟ್ಟಿದ್ದಾರೆ. ಕನ್ನಡದ ವಿಶೇಷ ಚಿತ್ರಗಳ ಸಾಲಿಗೆ ಸಂಜು ವೆಡ್ಸ್ ಗೀತಾ ಸೇರ್ಪಡೆಯಾಗುತ್ತದೆ ಎಂದು ಹೇಳುತ್ತಿರುವ ನಿರ್ದೇಶಕ ನಾಗಶೇಖರ್ ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಸತ್ಯ ಹೆಗಡೆಯವರ ಕಣ್‌ತಣಿಸುವ ಛಾಯಾಗ್ರಹಣದ ವಿಶೇಷತೆ, ಹರಿಕೃಷ್ಣರ ಸುಮಧುರ ಸಂಗೀತ ಲೇಪನ, ಸಂಜು ಗೀತಾ ಮದುವೆಗೆ ಮೆರಗು ನೀಡಲಿದೆ. 1996 ರಿಂದ 2000ವರೆಗೂ ನಡೆದ ಸರಣಿ ಘಟನೆಗಳನ್ನು ಆಧರಿಸಿ ಚಿತ್ರಕತೆಯನ್ನು ರಚಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada