»   » ಬಿಗ್ ಬಿ ಜೊತೆ ಹಿಂದಿಯಲ್ಲಿ ಎರಡನೆ ಮದುವೆ

ಬಿಗ್ ಬಿ ಜೊತೆ ಹಿಂದಿಯಲ್ಲಿ ಎರಡನೆ ಮದುವೆ

Posted By:
Subscribe to Filmibeat Kannada

ಅನಂತನಾಗ್ ಹಾಗೂ ಸುಹಾಸಿನಿ ತಾರಾ ಜೋಡಿಯ 'ಎರಡನೆ ಮದುವೆ' ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಲಿದೆ. ಕನ್ನಡದಲ್ಲಿ ಅನಂತನಾಗ್ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಪೋಷಿಸಲಿದ್ದಾರೆ. ರಾಜ್ಯದಾದ್ಯ್ಯಂತ ಎರಡನೆ ಮದುವೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ಕೊನೆಗೆ ಸಂದೇಶವೂ ಇದೆ. ಈಗಾಗಲೆ ಈ ಚಿತ್ರವನ್ನು ಸನ್ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವೀಕ್ಷಿಸಿದ್ದು ಚಿತ್ರ ಚೆನ್ನಾಗಿದೆ ಎಂದಿದ್ದಾರೆ. ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಪ್ರೇಯಸಿಯೊಬ್ಬರ ಸನ್ನಿವೇಶಗಳು ಇದ್ದು ಚಿತ್ರ ಹಾಸ್ಯಭರಿತವಾಗಿ ಮುನ್ನುಗ್ಗುತ್ತದೆ. ಸುಹಾಸಿನಿ ಪಾತ್ರವನ್ನು ಹಿಂದಿಯಲ್ಲಿ ಯಾರು ನಿರ್ವಹಿಸಲಿದ್ದಾರೆ ಎಂಬುದು ಇನ್ನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಮಾತುಕತೆ ನಡೆಯುತ್ತಿದ್ದು ಎಲ್ಲವೂ ಅಂತಿಮವಾಗಬೇಕಿದೆ. 

ಸುರೇಶ್ ನಿರ್ಮಿಸಿದ್ದ ಎರಡನೆ ಮದುವೆ ಚಿತ್ರವನ್ನು ಹಿಂದಿಯಲ್ಲಿ ಪಿವಿಆರ್ ಪಿಕ್ಚರ್ಸ್ ನಿರ್ಮಿಸಲಿದೆ. ಬಹುಶಃ ಇತ್ತೀಚೆಗೆ ಈ ಮಟ್ಟದ ಮನರಂಜನಾತ್ಮಕ ಚಿತ್ರ ಬಂದಿರಲಿಕ್ಕಿಲ್ಲ. ದಿನೇಶ್ ಬಾಬು ಮತ್ತೊಮ್ಮೆಗೆದ್ದಿದ್ದಾರೆ. ಹತ್ತರಲ್ಲಿ ಒಂಬತ್ತು ಕೆಟ್ಟ ಚಿತ್ರ ಮಾಡಿ, ಒಂದನ್ನುಚೆನ್ನಾಗಿ ಮಾಡು ತ್ತಾರೆ ಎನ್ನುವುದಕ್ಕೆ ಮತ್ತೊಂದು ಪ್ರತ್ಯಕ್ಷ ಪುರಾವೆ 'ಎರಡನೇ ಮದುವೆ'! ಎನ್ನುತ್ತದೆ ಚಿತ್ರ ವಿಮರ್ಶೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada