»   » ನಟ ದರ್ಶನ್ ಜಾಮೀನು ಅರ್ಜಿ ವಜಾ, ಜೈಲೇ ಗತಿನಾ?

ನಟ ದರ್ಶನ್ ಜಾಮೀನು ಅರ್ಜಿ ವಜಾ, ಜೈಲೇ ಗತಿನಾ?

Posted By:
Subscribe to Filmibeat Kannada
Darshan's bail plea rejected
ಪತ್ನಿ ಮತ್ತು ಮಗನ ಮೇಲೆ ಹಲ್ಲೆ ಮಾಡಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಮಂಗಳವಾರ (ಸೆ.20) ವಜಾಗೊಳಿಸಿದೆ. ದರ್ಶನ್‌ಗೆ ಜಾಮೀನು ನಿರಾಕರಿಸಿ ನ್ಯಾಯಾಧೀಶ ಆರ್ ಬಿ ಬೂದಿಹಾಳ್ ಇಂದು ಆದೇಶ ಹೊರಡಿಸಿದರು.

ನಟ ದರ್ಶನ್ ಪರ ವಕೀಲ ಎಸ್ ಕೆ ವೆಂಕಟರೆಡ್ಡಿ ಅವರು ದರ್ಶನ್ ಪತ್ನಿ ಮೇಲೆ ಅನುಕಂಪ ತೋರಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಸರ್ಕಾರಿ ಅಭಿಯೋಜಕ ಎಸ್ ಸಿ ಅಗಸಿ ಮನಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ವಿವಾದಗಳನ್ನು ಆಲಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶರು ತೀರ್ಪನ್ನು ಮಂಗಳವಾರಕ್ಕೆ(ಸೆ.20) ಮುಂದೂಡಿದ್ದರು.

ಸೆ.20ರಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಯಾವ ಕಾರಣಗಳಿಗೆ ಜಾಮೀನು ಅರ್ಜಿ ನಿರಾಕರಿಸಲಾಗಿದೆ ಎಂಬುದನ್ನು 21 ಪುಟಗಳ ಆದೇಶದಲ್ಲಿ ನ್ಯಾಯಾಧೀಶ ಆರ್ ಬಿ ಬೂದಿಹಾಳ್ ತಿಳಿಸಿದ್ದಾರೆ. ಬುಧವಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ದರ್ಶನ್ ಪರ ವಕೀಲ ವೆಂಕಟರೆಡ್ಡಿ ತಿಳಿಸಿದ್ದಾರೆ.

ನಟ ದರ್ಶನ್ ಅವರ ಬಹಳಷ್ಟು ಅಭಿಮಾನಿಗಳು, ಅವರ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರು ಅವರಿಗೆ ಜಾಮೀನು ಸಿಗುತ್ತದೆ ಎಂದು ಕಾತುರದಿಂದ ನಿರೀಕ್ಷಿಸಿದ್ದರು. ಆದರೆ ಇಂದು ತೀರ್ಪು ಹೊರಬೀಳುತ್ತಿದ್ದಂತೆ ಅವರೆಲ್ಲಾ ತೀವ್ರ ತಳಮಳಗೊಂಡಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
A Bangalore sessions court has rejected the bail plea of Kannada film actor Darshan. The actor was arrested on September 9 for allegedly assaulting and threatening his wife.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada