»   » ಮುಳ್ಳಯ್ಯನಗಿರಿಯನ್ನೇರಿದ ನವರಸ ನಾಯಕ

ಮುಳ್ಳಯ್ಯನಗಿರಿಯನ್ನೇರಿದ ನವರಸ ನಾಯಕ

Posted By:
Subscribe to Filmibeat Kannada

ಮೇಲೆನಿಂತು ಕೆಳಗೆ ನೋಡಿದರೆ ಆರೋಗ್ಯವಂತ ಮನುಷ್ಯನಿಗೂ ಒಂದು ಕ್ಷಣ ಎದೆ ಹೊಡೆದುಕೊಳುವಂತ ಪ್ರಪಾತ. ಅಲ್ಲಿಂದ ಸಾವಿರದೈನೂರು ಅಡಿಗಳ ಮೇಲೆ ಶಿಖರದ ತುದಿ. ಕೆಳಗಿನಿಂದ ಬೆಟ್ಟದ ತುದಿ ತಲಪುವಷ್ಟರಲ್ಲಿ ಎದುರಾಗುವ ಹೆಬ್ಬಂಡೆಗಳು, ದುರ್ಗಮ ಹಾದಿ, ಮುಳ್ಳಿನ ಗಿಡ ಇತ್ಯಾದಿ. ಇಷ್ಟನ್ನು ದಾಟಿ ನಿಗದಿತ ಸ್ಥಳ ಮುಟ್ಟಬೇಕಾದರೆ ಹರಸಾಹಸ ಪಡಬೇಕು. ಹದಿನೆಂಟರ ಯುವಕನಿಗೂ ಇದು ಕಷ್ಟ ಸಾಧ್ಯ.

ಆದರೆ ನವರಸನಾಯಕ ಜಗ್ಗೇಶ್ ಈ ವಯಸ್ಸಿನಲ್ಲಿ ಮುಳ್ಳಯ್ಯನಗಿರಿ ಏರುವ ಸಾಹಸ ಮಾಡಿ ಜಯಶೀಲರಾಗಿದ್ದಾರೆ. ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ನಿರ್ಮಿಸುತ್ತಿರುವ 'ಲಿಫ್ಟ್ ಕೊಡ್ಲಾ' ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ನಾಯಕ ಬೆಟ್ಟ ಏರಿ ಬರುವ ಸನ್ನಿವೇಶ. ಇಂಥ ಸಾಹಸಕ್ಕೆ ನೀವು ಮುಂದಾಗಬೇಡಿ ಎಂದು ಚಿತ್ರತಂಡ ಜಗ್ಗೇಶ್ ಅವರಿಗೆ ಮನವಿ ಮಾಡಿದರಾದರೂ, ಸಿನೆಮಾದಲ್ಲಿ ನೈಜತೆ ಇರಬೇಕು ಎಂದು ಜಗ್ಗೇಶ್ ಅವರೇ ಈ ಸನ್ನಿವೇಶದಲ್ಲಿ ಪಾಲ್ಗೊಂಡರು.

ನನಗೆ ತಿಳಿದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಯಾರೂ ಇಂಥ ಸಾಹಸ ಮಾಡಿರಲಾರರು ಎಂದು ನಿರ್ದೇಶಕ ಅಶೋಕ್‌ಕಶ್ಯಪ್ ತಿಳಿಸಿದ್ದಾರೆ. ನಿಸರ್ಗದತ್ತವಾದ ಕಳಸ, ಸೆಂಟ್‌ಮೇರಿಸ್ ದ್ವೀಪ ಮುಂತಾದೆಡೆ ಈಗ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

ವಿ.ಮನೋಹರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಂನಾರಾಯಣ್ ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕರೇ ಛಾಯಾಗ್ರಹಣದ ನಿರ್ವಹಣೆ ಮಾಡುತ್ತಿದ್ದಾರೆ. ಜಗ್ಗೇಶ್, ಕೋಮಲ್, ಶಶಿಕುಮಾರ್, ಅರ್ಚನಾಗುಪ್ತಾ, ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್‌ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರು ಚಿತ್ರದ ತಾರಾಗಣದಲಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಏಳು ಬೆಟ್ಟ ಮತ್ತು ಸೇತುವೆ ಹತ್ತಿಳಿದ ಅವಿಸ್ಮರಣೀಯ ಅನುಭವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada