»   »  ಸೌಂದರ್ಯ ಜಗದೀಶ್ ಗೆ ಪುನೀತ್ ಕಾಲ್ ಶೀಟ್

ಸೌಂದರ್ಯ ಜಗದೀಶ್ ಗೆ ಪುನೀತ್ ಕಾಲ್ ಶೀಟ್

Subscribe to Filmibeat Kannada
Puneeth Rajkumar
ಕಡೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಲ್ ಶೀಟ್ ಪಡೆಯುವಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಯಶಸ್ವಿಯಾಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಪ್ರೇಮ್ ನಿರ್ದೇಶಿಸಲಿದ್ದು ಅಪ್ಪು ಮತ್ತು ಪ್ರೇಮ್ ಜೋಡಿಯ ಮತ್ತೊಂದು ಚಿತ್ರ ಪ್ರೇಕ್ಷಕರಿಗಾಗಿ ಕಾದಿದೆ.

'ರಾಜ್ ದ ಶೋ ಮ್ಯಾನ್' ಚಿತ್ರಕ್ಕಾಗಿ ಅಪ್ಪು, ಮತ್ತು ಪ್ರೇಮ್ ಒಂದು ವರ್ಷ ಕಾಲ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈಗ ಇವರಿಬ್ಬರ ಕಾಂಬಿನೇಶನಲ್ಲಿ ಮತ್ತೊಂದು ಚಿತ್ರ ಸೆಟ್ಟೇರುತ್ತಿರುವ ಕಾರಣ ಮತ್ತೊಂದು ವರ್ಷ ಜತೆಯಾಗಿ ದುಡಿಯಲಿದ್ದಾರೆ. ರಾಜ್ ಚಿತ್ರಕ್ಕೆ ಇನ್ನೂ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು ಬಿಡುಗಡೆ ಮತ್ತೆರಡು ತಿಂಗಳು ತಡವಾಗಲಿದೆ.

ಈ ಹೊಸ ಚಿತ್ರಕ್ಕೆ ಚಿತ್ರಕತೆ ಅಂತಿಮವಾಗಿದ್ದು ಶೀಘ್ರದಲ್ಲೇ ಪ್ರೇಮ್ ಸ್ಟೈಲ್ ನಲ್ಲಿ ಚಾಲನೆ ನೀಡುಲು ಸಿದ್ಧತೆ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಮಸ್ತ್ ಮಜಾ ಮಾಡಿ ಭಾಗ 2ನ್ನು ನಿರ್ಮಿಸುವ ಸಿದ್ಧತೆಯಲ್ಲಿದ್ದಾರೆ. ಕಳೆದ ವರ್ಷದ ಹಿಟ್ ಚಿತ್ರಗಳಲ್ಲಿ ಮಸ್ತ್ ಮಜಾ ಮಾಡಿ ಸಹ ಒಂದಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪುನೀತ್ ಅಭಿಮಾನಿಗಳ ಸಂಘಕ್ಕೆ ವಿದ್ಯುಕ್ತಚಾಲನೆ
ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ
ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್
ಸಿನಿಮಾ ಶೀರ್ಷಿಕೆಯಾದ ಪುನೀತ್ ಹೆಸರು!
ಓಂ ಪ್ರಕಾಶ್, ಪುನೀತ್ ಕಾಂಬಿನೇಷನಲ್ಲಿ ಹೊಸ ಚಿತ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada