»   »  ಗುರುಪ್ರಸಾದ್ ಹೊಸ ಚಿತ್ರದಲ್ಲಿ ನವೀನ್ ಕೃಷ್ಣ

ಗುರುಪ್ರಸಾದ್ ಹೊಸ ಚಿತ್ರದಲ್ಲಿ ನವೀನ್ ಕೃಷ್ಣ

Subscribe to Filmibeat Kannada

ನವೀನ್‌ಕೃಷ್ಣ ಅಗಲದ ಕಪ್ಪು ಕನ್ನಡಕ ಹಾಕಿದ್ದರು. ಕುರುಚಲು ಗಡ್ಡ ನೀವಿಕೊಳ್ಳುತ್ತ ಧಿಮಾಕು' ತಂದೊಡ್ಡಿದ ನಷ್ಟವನ್ನು ಮೆಲುಕು ಹಾಕುತ್ತಾ ಒಂದು ಸಲ ಲೊಚಗುಟ್ಟಿದರು. ಸ್ಯಾಟಲೈಟ್ ಹಕ್ಕು ತಂದುಕೊಟ್ಟ ನಲವತ್ತು ಲಕ್ಷ ಬಿಟ್ಟರೆ ಧಿಮಾಕು' ಚಿಕ್ಕಾಸನ್ನೂ ತರಲಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣ. ಒಳ್ಳೆ ವಿಮರ್ಶೆ ಬಂತು. ನೋಡಿದ ಜನರ ಪ್ರತಿಕ್ರಿಯೆಯೂ ಚೆನ್ನಾಗಿತ್ತು. ಆದರೂ ಸಿನಿಮಾ ಓಡಲಿಲ್ಲ. ಕಾರಣ ಹುಡುಕುವುದೇ ಕಷ್ಟ' ಎನ್ನುತ್ತಾ ಮತ್ತೊಮ್ಮೆ ಲೊಚ್ ಎಂದರು.

ಚಿನ್ನೇಗೌಡ, ಎನ್.ಕುಮಾರ್ (ಅವರೀಗ ನಾಮಬಲ ಹೆಚ್ಚಲೆಂದು ಇನಿಶಿಯಲ್ಲನ್ನು ಎಂ.ಎನ್. ಎಂದು ಬದಲಿಸಿಕೊಂಡಿದ್ದಾರೆ) ನಿರ್ಮಿಸುತ್ತಿರುವ ಶ್ರೀಹರಿ' ಚಿತ್ರದಲ್ಲಿ ನವೀನ್ ಕೃಷ್ಣ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಪ್ರಾಮುಖ್ಯ ಇರುವ ಪಾತ್ರ ಅದು.

ಅವರಿಗೆ ಸದ್ಯಕ್ಕೆ ಸ್ವಂತ ನಿರ್ಮಾಣದ ಯೋಚನೆಯೇನೂ ಇಲ್ಲ. ಹಾಗಂತ ಸುಮ್ಮನೆ ಕೂರುವ ಪ್ರಮೇಯವೂ ಅವರಿಗಿಲ್ಲವಂತೆ. ಎದ್ದೇಳು ಮಂಜುನಾಥ' ಖ್ಯಾತಿಯ ಗುರುಪ್ರಸಾದ್ ತಮ್ಮ ಮುಂದಿನ ಚಿತ್ರದ ಕುರಿತು ನವೀನ್ ಕೃಷ್ಣ ಜೊತೆ ಚರ್ಚೆ ನಡೆಸಿದ್ದಾರೆ. ಆ ಚಿತ್ರಕ್ಕೆ ನಿರ್ಮಾಪಕರೂ ಸಿಕ್ಕ್ದಿದಾರಂತೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಅದರಲ್ಲಿ ನವೀನ್ ಕೃಷ್ಣ ಅಭಿನಯಿಸುವುದು ಖರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada