For Quick Alerts
  ALLOW NOTIFICATIONS  
  For Daily Alerts

  ಅಣ್ಣಾಬಾಂಡ್ ಬಿಡುಗಡೆ ಮುಂದಕ್ಕೆ ಹೋದ ಕಾರಣ?

  |

  ವರನಟ ಡಾ.ರಾಜಕುಮಾರ್ ಹುಟ್ಟು ಹಬ್ಬಕ್ಕೆ ಚಿತ್ರ ಬಿಡುಗಡೆ ಖಚಿತ ಎಂಬಂತೆ ಮಹೂರ್ತದ ದಿನವೇ ಚಿತ್ರತಂಡ ಮಾತಾಡಿತ್ತು. ನಿನ್ನೆ ಮೊನ್ನೆಯ ತನಕವೋ ಇದೇ ತಿಂಗಳ 26ಕ್ಕೆ ಅಂತಲೇ ಪ್ರಚಾರ ಕೂಡಾ ಮಾಡಲಾಗಿತ್ತು. ಆದರೆ ಇನ್ನೂ ಕೆಲಸ ಮುಗಿದಿಲ್ಲ ಎಂದು ಅಣ್ಣಾಬಾಂಡ್ ಚಿತ್ರ ಬಿಡುಗಡೆಯನ್ನು ಒಂದು ವಾರ ಮುಂದಕ್ಕೆ ಹಾಕಲಾಗಿದೆ.

  ಮೇ 3(ಗುರುವಾರ) ಚಿತ್ರ ರಿಲೀಸ್ ಎಂದು ಪ್ರಚಾರ ಮಾಡದಿದ್ದರೂ ಅದೇ ದಿನ ಬಾಂಡ್ ಬಾಂಡ್ ಆಗಮಿಸುವುದು ಬಹುತೇಕ ಖಚಿತ. ಒಂದು ಮೂಲದ ಪ್ರಕಾರ 'ಅಣ್ಣಾಬಾಂಡ್' ನ ಯಾವುದೋ ಒಂದು ನಿರ್ದಿಷ್ಟ ಸನ್ನಿವೇಶವನ್ನು ರೀ ಶೂಟ್ ಮಾಡಲು ಪಾರ್ವತಮ್ಮ ರಾಜಕುಮಾರ್ ಸೂಚಿಸಿದ್ದಾರೆ ಎನ್ನಲಾಗಿದೆ.

  ಅದು ಟೈಟಲ್ ಸಾಂಗ್ ಅಥವಾ ಕ್ಲೈಮ್ಯಾಕ್ಸ್ ನ ಭಾಗವೋ ಖಚಿತವಾಗಿಲ್ಲ. ಇನ್ನು ಕೆಲವರ ಪ್ರಕಾರ ಸಿ ಜೆ ವರ್ಕ್ ನ ದೋಷದಿಂದಾಗಿ ಅಸಂತೃಪ್ತಿಗೊಂಡಿರುವ ಚಿತ್ರತಂಡ ದೋಷಪೂರಿತ ಭಾಗವನ್ನು ಮತ್ತೆ ರಿಪೇರಿ ಮಾಡಿಸುತ್ತಿರುವುದರಿಂದ ಆ ಕಾರಣಕ್ಕೆ ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

  ಬಾಕಿ ಉಳಿದಿರುವ ಎಲ್ಲಾ ಕೆಲಸ ಅಂದುಕೊಂಡಂತೆ ಮುಗಿದರೆ ಈ ವಾರದಲ್ಲಿ ಚಿತ್ರದ ಫಸ್ಟ್ ಕಾಪಿ ಬರಲಿದ್ದು ಸೆನ್ಸಾರ್ ಗೆ ಹೋಗಲಿದೆ.

  English summary
  Release date of Anna Bond movie delayed, due to re-shooting of some scenes and also technical error in CJ work. Movie set to release on Thursday i.e. May 3, 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X