»   » ಲಂಕೇಶ್ 'ದೇವೀರಿ' ಕ್ಯಾತನಿಗೆ ಜರ್ಮನಿ ಫೆಲೋಶಿಪ್

ಲಂಕೇಶ್ 'ದೇವೀರಿ' ಕ್ಯಾತನಿಗೆ ಜರ್ಮನಿ ಫೆಲೋಶಿಪ್

Posted By:
Subscribe to Filmibeat Kannada

ಈ ಫೋಟೋ ನೋಡಿದರೆ ಈ ಹುಡುಗನನ್ನು ಎಲ್ಲೋ ನೋಡದ ನೆನಪಾಗಬಹುದು ಅಥವಾ ಆಗದೇನೂ ಇರಬಹುದು. ಕವಿತಾ ಲಂಕೇಶ್ ಅವರ ಚೊಚ್ಚಲ ನಿರ್ದೇಶನದ ಚಿತ್ರ 'ದೇವೀರಿ' ಚಿತ್ರ ನೋಡಿದ್ದರೆ ಖಂಡಿತ ಈ ಹುಡುಗ ನೆನಪಾಗೇ ಆಗುತ್ತಾನೆ. "ನನ್ನ ಹೆಸರು ಕ್ಯಾತ ಅಂಥ" ಎಂದು ಚಿತ್ರದಲ್ಲಿ ಪರಿಚಯ ಮಾಡಿಕೊಳ್ಳುವ ಮಂಜನಿಗೆ ಜರ್ಮನಿಗೆ ಹೋಗುವ ಅಪೂರ್ವ ಅವಕಾಶ ಸಿಕ್ಕಿದೆ.

ಈ ಹುಡುಗನ ನಿಜವಾದ ಹೆಸರು ಮಂಜ. ಕವಿತಾ ಲಂಕೇಶ್ ಅವರ 'ದೇವೀರಿ' ಚಿತ್ರದಲ್ಲಿ ಅಭಿನಯಿಸಬೇಕಾದರೆ ಈತನಿಗೆ ಕೇವಲ 12 ವರ್ಷ ವಯಸ್ಸು. ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದ ಮಂಜ ಬಾಸ್ಕೋ ಸಂಸ್ಥೆಯ ಅನಾಥಶ್ರಾಮದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ.

'ದೇವೀರಿ' ಚಿತ್ರೀಕರಣದಲ್ಲಿ ಎಲ್ಲರೂ ಈತನನ್ನು ಏನು ಓದಿಕೊಂಡಿದ್ದೀಯಾ ಎಂದು ಕೇಳುತ್ತಿದ್ದರು. ಅರ್ಧಕ್ಕೆ ಶಾಲೆ ಬಿಟ್ಟಿದ್ದ ಮಂಜನಿಗೆ ಈ ಪ್ರಶ್ನೆಗಳು ಈಟಿಯಂತೆ ಚುಚ್ಚುತ್ತಿದ್ದವು. 'ದೇವೀರಿ' ಚಿತ್ರೀಕರಣ ಮುಗಿದ ಮೇಲೆ ಮಂಜ ಮತ್ತೆ ಶಾಲೆಗೆ ಸೇರ್ಪಡೆಯಾಗಿದ್ದ. ಈಗ ಸಂಜೆ ಕಾಲೇಜಿನಲ್ಲಿ ಮಂಜ ಬಿ.ಕಾಂ ಮಾಡುತ್ತಿದ್ದಾನೆ.

ಸದ್ಯಕ್ಕೆ ಡ್ರೀಮ್ ಎ ಡ್ರೀಮ್ ಎಂಬ ಸಂಸ್ಥೆಯಲ್ಲಿ ಮಂಜ ಕೆಲಸ ಮಾಡುತ್ತಾ ತನ್ನಂತಹ ಅನಾಥರಿಗೆ ಸಹಾಯ ಮಾಡುತ್ತಿದ್ದಾನೆ. ತೀರಾ ಇತ್ತೀಚೆಗೆ ಮಂಜನಿಗೆ ಜರ್ಮನಿಗೆ ಹೋಗುವ ಅವಕಾಶ ಸಿಕ್ಕಿದೆ. ಈ ವಿಷಯವನ್ನು ಸ್ವತಃ ಕವಿತಾ ಲಂಕೇಶ್‌ಗೆ ಮಂಜ ತಿಳಿಸಿದ್ದಾನೆ. ಕ್ರೀಡಾ ತರಬೇತಿ ಯೋಜನೆಯ ಭಾಗವಾಗಿ Dekeyser & Friends ಫೆಲೋಶಿಪ್‌ಗೆ ಆಯ್ಕೆಯಾಗಿರುವುದಾಗಿ ಹೇಳಿದ್ದಾನೆ. ಒನ್‌ಇಂಡಿಯಾ ಕನ್ನಡ ಅಂತರ್ಜಾಲ ಪತ್ರಿಕೆಗೆ ಕವಿತಾ ಲಂಕೇಶ್ ವಿವರ ನೀಡಿದರು. (ಒನ್‌ಇಂಡಿಯಾ ಕನ್ನಡ)

English summary
Manja the 12 –year-old boy who acted in Kavitha Lankesh’s debut film ‘Deveeri’ is now 22 year olds. An elated Manja called Kavitha Lankesh recently and said that he is going to Germany for a year! He has been selected for Dekeyser & Friends Fellowship to be a part of the Sports Coaching Project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada