For Quick Alerts
  ALLOW NOTIFICATIONS  
  For Daily Alerts

  'ಆಪ್ತರಕ್ಷಕ'ನಿಗೆ ಹೊಸ ದೃಶ್ಯಗಳ ಸೇರ್ಪಡೆ

  By Rajendra
  |

  ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ಬರೆಯುತ್ತಿರುವ 'ಆಪ್ತರಕ್ಷಕ' ಚಿತ್ರದ ನಿರ್ದೇಶಕ ಪಿ ವಾಸು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳ ಹಾಗೂ ಭಾರತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದ್ದಾರೆ.

  ಆಪ್ತರಕ್ಷಕ ಪ್ರದರ್ಶನ ಕಾಣುತ್ತಿರುವ ಕೆಲವು ಚಿತ್ರಮಂದಿರಗಳಿಗೂ ಪಿ ವಾಸು ಭೇಟಿ ನೀಡಿದ್ದರು. ವಿಷಯ ಇದಲ್ಲ, ಅವರು ಆಪ್ತರಕ್ಷಕ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೆ ಹೊಸ ದೃಶ್ಯಗಳನ್ನು ಸೇರಿಸಿದ್ದಾರೆ. ಸಾಮಾನ್ಯವಾಗಿ ನಿರ್ದೇಶಕರು ಚಿತ್ರವನ್ನು ಆದಷ್ಟು ಮೊಟುಕುಗೊಳಿಸಲು ಇಚ್ಛಿಸುತ್ತಾರೆ. ಆದರೆ ಪಿ ವಾಸು 150 ಅಡಿಗಳಷ್ಟು ಹೆಚ್ಚಿನ ರೀಲನ್ನು ಆಪ್ತರಕ್ಷಕನಿಗೆ ಹೊಸದಾಗಿ ಸೇರಿಸಿರುವುದು ವಿಶೇಷ.

  ಎರಡನೇ ವಾರಕ್ಕೆ ಅಡಿಯಿಡುತ್ತಿರುವ ಆಪ್ತರಕ್ಷಕ ಚಿತ್ರದಲ್ಲಿ ಈ ಬದಲಾವಣೆಯನ್ನು ನೋಡಬಹುದು. ಇಷ್ಟಕ್ಕೂ ಹೊಸದಾಗಿ ಸೇರ್ಪಡೆ ಮಾಡಿರುವ ಸನ್ನಿವೇಶಗಳಲ್ಲಿ ಏನಿದೆ? ವಿಜಯರಾಜ ಬಹದ್ದೂರ್ (ವಿಷ್ಣುವರ್ಧನ್) ಮತ್ತು ನಾಗವಲ್ಲಿ (ವಿಮಲಾ ರಾಮನ್) ನಡುವಿನ 125 ವರ್ಷಗಳಷ್ಟು ಹಳೆಯ ವೈಷಮ್ಯವನ್ನು ಇನ್ನಷ್ಟು ವಿಸ್ತಾರವಾಗಿ ತೋರಿಸಲಾಗಿದೆ ಎನ್ನುತ್ತವೆ ಮೂಲಗಳು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X