»   » ಪ್ರಾರ್ಥನೆಗೆ ಕೈಜೋಡಿಸಿದ ಪವಿತ್ರಾ ಲೋಕೇಶ್

ಪ್ರಾರ್ಥನೆಗೆ ಕೈಜೋಡಿಸಿದ ಪವಿತ್ರಾ ಲೋಕೇಶ್

Posted By:
Subscribe to Filmibeat Kannada

ಪತ್ರಕರ್ತ ಸದಾಶಿವ ಶೆಣೈ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ 'ಪ್ರಾರ್ಥನೆ'. ಸುಧಾರಾಣಿ ಅವರಿಂದ ತೆರವಾಗಿದ್ದ ನಾಯಕಿ ಸ್ಥಾನಕ್ಕೆ ರಾಜ್ಯಪ್ರಶಸ್ತಿ ವಿಜೇತ ನಟಿ ಪವಿತ್ರಾ ಲೋಕೇಶ್ ಆಯ್ಕೆಯಾಗಿದ್ದಾರೆ. ಹಿರಿಯ ನಟ ಹಾಗೂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಶೋಕ್ ಸಹ 'ಪ್ರಾರ್ಥನೆ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸುದೀರ್ಘ ಸಮಯದ ಬಳಿಕ ನಟ ಅಶೋಕ್ ಪ್ರಾರ್ಥನೆಗೆ ಕೈಜೋಡಿಸಿರುವುದು ವಿಶೇಷ.'ಗಂಡುಗಲಿ ಕುಮಾರರಾಮ' ಚಿತ್ರೀಕರಣ ವೇಳೆ ಅಶೋಕ್ ಗಾಯಗೊಂಡಿದ್ದರು. ಚಿತ್ರದ ಉಳಿದ ತಾರಾಗಣದಲ್ಲಿ ಅನಂತನಾಗ್ ಮತ್ತು ಪ್ರಕಾಶ್ ರೈ ಸಹ ಇದ್ದಾರೆ.

ತಮ್ಮ 'ಪ್ರಾರ್ಥನೆ' ಚಿತ್ರದ ಬಗ್ಗೆ ಶೆಣೈ ಮಾತನಾಡುತ್ತಾ, ಪ್ರಕಾಶ್ ರೈ ಅವರು ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಶೋಕ್ ಅವರದು ಸತ್ವಭರಿತ ಪಾತ್ರ ಎಂದು ಶೆಣೈ ವಿವರ ನೀಡಿದರು. ಹರೀಶ್ ನಿರ್ಮಿಸುತ್ತಿರುವ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ, ಜೆ ಎಂ ಪ್ರಹ್ಲಾದ್ ಅವರ ಕತೆ, ಎಸ್ ರಾಮಚಂದ್ರ ಅವರ ಛಾಯಾಗ್ರಹಣವಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada