»   » ಬಿಎಂಟಿಸಿ ಬಸ್ ಕಂಡಕ್ಟರ್ ಈಗ ಚಿತ್ರ ನಿರ್ದೇಶಕ

ಬಿಎಂಟಿಸಿ ಬಸ್ ಕಂಡಕ್ಟರ್ ಈಗ ಚಿತ್ರ ನಿರ್ದೇಶಕ

Posted By:
Subscribe to Filmibeat Kannada

ದಕ್ಷಿಣ ಭಾರತದ ಜನಪ್ರಿಯ ನಟ ರಜನಿಕಾಂತ್ ಸಹ ಚಿತ್ರರಂಗಕ್ಕೆ ಬರುವ ಮುನ್ನ ಕಂಡಕ್ಟರ್ ಆಗಿದ್ದವರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಬಿಎಂಟಿಸಿ ಕೊಡುಗೆ ಎಂಬಂತೆ ಮತ್ತೊಬ್ಬ ನಿರ್ವಾಹಕರು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಆದರೆ ನಟನಾಗಿ ಅಲ್ಲ ನಿರ್ದೇಶಕನಾಗಿ. ರೈಟ್ ರೈಟ್ ಎನ್ನುತ್ತಿದ್ದವರು ಈಗ ಆಕ್ಷನ್, ಕಟ್ ಹೇಳಲಿದ್ದಾರೆ. ಚಿತ್ರದ ಹೆಸರು ಪ್ರೀತಿಯ ಲೋಕ.

ಬಿಎಂಟಿಸಿ ಕಂಡಕ್ಟರ್ ಎಂದ ಮೇಲೆ ಬರಿ ಟಿಕೆಟ್ ಹರಿಯುತ್ತಾ ಹತ್ರಿ, ಇಳೀರಿ, ಮುಂದೆ ಹೋಗ್ರಿ ಅನ್ನೋದಷ್ಟೆ ಅಲ್ಲ ಸಮಯ ಬಿದ್ದರೆ ಡ್ರೈವರ್ ಸೀಟಲ್ಲೂ ಕೂರಬೇಕಾಗುತ್ತದೆ. ಹಾಗಾಗಿ ಇವರಿಗೆ ಬೆಂಗಳೂರಿನ ಹಲವಾರು ರೂಟ್ ಗಳ ಪರಿಚಯ ಅಂಗೈ ನೆಲ್ಲಿ ಇದ್ದಂತೆ. ಹೆಸರು ಏನು ಅಂದ್ರಾ? ಅದೇ ರೀ ನಂದನ ಪ್ರಭು ಅಂತ. ಚಿತ್ರದ ಹೆಸರು ಪ್ರೀತಿಯ ಲೋಕ.

ಸ್ವತಃ ಕತೆಯನ್ನು ಅವರೇ ಹೆಣೆದಿದ್ದಾರೆ. ತಮ್ಮ ಕಂಡಕ್ಟರ್ ವೃತ್ತಿ ಜೀವನದ ಅನುಭವಗಳನ್ನೇ ಕತೆಯಾಗಿಸಿದ್ದಾರೆ ನಂದನ ಪ್ರಭು. ಚಿತ್ರದ ಮುಖ್ಯಭೂಮಿಕೆಯಲ್ಲಿ ವಿನಯ್ ಮತ್ತು ಅರ್ಚನಾ ಇದ್ದಾರೆ. ಚಿತ್ರದಲ್ಲಿ ಇವರು ಖಳನಟನಾಗಿಯೂ ಕಾಣಿಸಲಿದ್ದಾರೆ. ಡ್ರೈವರ್ ಹಾಗೂ ಕಂಡಕ್ಟರ್ ಆಗಿ ಕಂಡ ಸತ್ಯಗಳು ಶೇ.60ರಷ್ಟು ಚಿತ್ರದಲ್ಲಿರುತ್ತವೆ.

ಚಿತ್ರದ ಹೀರೋ ವಿನಯ್ ಇಂಜಿನಿಯರಿಂಗ್ ವಿದ್ಯಾರ್ಥಿ. ಕ್ಯಾಮೆರಾಗೆ ಮುಖ ಮಾಡುವುದಕ್ಕೂ ಮುನ್ನ ನಿರ್ದೇಶಕರು ಮೂರು ತಿಂಗಳ ಕಾಲ ತಮಗೆ ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ಉತ್ತಮ ಪ್ರೇಮಗೀತೆಗಳು ಇವೆ ಎನ್ನುತ್ತಾರೆ ವಿಜಯ್.

ಚಿತ್ರಕ್ಕೆ ಸಾಯಿ ಕಿರಣ್ ಅವರ ಸಂಗೀತವಿದೆ. ಇದು ಅವರ ಮೊದಲ ಸಂಗೀತ ಸಂಯೋಜನೆಯ ಚಿತ್ರ. ಸುಮಾರು ಒಂದು ಕೋಟಿ ಬಜೆಟ್ ಚಿತ್ರ ಇದಾಗಿದ್ದು ಪಿಡಬ್ಲ್ಯು ಡಿ ಗುತ್ತಿಗೆದಾರ ಮಾಧವ ರೆಡ್ಡಿ ನಿರ್ಮಾಪಕರು. ಚಿತ್ರಕ್ಕ್ಕೆ ಹಣ ಹೂಡಲು ನಿರ್ದೇಶಕರ ಬದ್ಧತೆಯೇ ಕಾರಣ ಎಂದಿದ್ದಾರೆ ನಿರ್ಮಾಪರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada