»   »  ಜಾಕಬ್ ವರ್ಗೀಸ್ ನಿರ್ದೇಶನದಲ್ಲಿ ಪುನೀತ್!

ಜಾಕಬ್ ವರ್ಗೀಸ್ ನಿರ್ದೇಶನದಲ್ಲಿ ಪುನೀತ್!

Posted By:
Subscribe to Filmibeat Kannada

'ರಾಜ್' ನಂತರ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ಹೊಚ್ಚಹೊಸ ಚಿತ್ರ 'ಪೃಥ್ವಿ'. ಈಚಿತ್ರಕ್ಕೆ ಅಡಿಬರಹವಾಗಿ 'The ultimate power' ಎಂದು ನೀಡಲಾಗಿದೆ. 'ಸವಾರಿ' ಚಿತ್ರವನ್ನು ನಿರ್ದೇಶಿಸಿ ಗೆಲುವಿನ ಸವಾರಿ ಏರಿದ ಜಾಕೋಬ್ ವರ್ಗೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ರಾಮ್ ಬಾಬು ಪ್ರೊಡಕ್ಷನ್ಸ್ ನ ಸೂರಪ್ಪ ಬಾಬು ಈ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸುತ್ತಿದ್ದಾರೆ. ಸವಾರಿ ಮತ್ತು ಮಿ.ಗರಗಸ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಮಣಿಕಾಂತ್ ಖದ್ರಿ ಅವರ ಸಂಗೀತ ಪೃಥ್ವಿ ಚಿತ್ರಕ್ಕಿದೆ. ಅಂದಹಾಗೆ 'ಪೃಥ್ವಿ' ಚಿತ್ರ ಸೆಪ್ಟೆಂಬರ್ ನಲ್ಲಿ ಸೆಟ್ಟೇರಲಿದೆ.

ತಮ್ಮ ಚೊಚ್ಚಲ 'ಸವಾರಿ' ಚಿತ್ರ 125 ದಿನ ಪೂರೈಸಿದ್ದೇ ತಡ ಜಾಕೊಬ್ ವರ್ಗೀಸ್ ಅವರಿಗೆ ಪುನೀತ್ ಚಿತ್ರವನ್ನು ನಿರ್ದೇಶಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಐಡಿಬಿಐ ಬ್ಯಾಂಕ್ ನಲ್ಲಿ ಸಾಲ ಮಾಡುವ ಮೂಲಕ ಸೂರಪ್ಪ ಬಾಬು ಈ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಸೂರಪ್ಪ ಬಾಬು 'ಬಂಧು ಬಳಗ' ಚಿತ್ರ ನಿರ್ಮಿಸಿದ್ದರು. ಆ ಚಿತ್ರ ನೆಲಕಚ್ಚಿ ಸೂರಪ್ಪ ಬಾಬುಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿತ್ತು.

ಏತನ್ಮಧ್ಯೆ ಪುನೀತ್ ನಾಯಕ ನಟನಾಗಿರುವ ಆದಿತ್ಯ ಬಾಬು ನಿರ್ಮಾಣದ 'ರಾಮ್' ಚಿತ್ರಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಪೃಥ್ವಿ ಚಿತ್ರದ ನಂತರ ದುನಿಯಾ ಸೂರಿ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ಆದಾದ ನಂತರ ತಮಿಳಿನ 'ನಾಡೋಡಿಗಳ್' ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆ. ಈ ಚಿತ್ರ ಪುನೀತ್ ಸ್ವಂತ ನಿರ್ಮಾಣದ ಚಿತ್ರವಾಗಲಿದೆ. ಆನಂತರ ಸೌಂದರ್ಯ ಜಗದೀಶ್ ಚಿತ್ರಕ್ಕೆ ಬಣ್ಣ ಹಚ್ಚಿಕೊಳ್ಳಲಿದ್ದಾರೆ ಪುನೀತ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada