»   » ಆಪ್ತರಕ್ಷಕ ನೋಡಲು ಅಮೀರ್ ಖಾನ್ ಕಾತುರ

ಆಪ್ತರಕ್ಷಕ ನೋಡಲು ಅಮೀರ್ ಖಾನ್ ಕಾತುರ

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಆಪ್ತರಕ್ಷಕ' ಚಿತ್ರವನ್ನು ನೋಡಲು ಬಾಲಿವುಡ್ ನ ಜನಪ್ರಿಯ ನಟ ಅಮೀರ್ ಖಾನ್ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಅಮೀರ್ ಜೊತೆಗೆ ಬಾಲಿವುಡ್ ನ ಹಲವು ಖ್ಯಾತ ನಟ, ನಟಿಯರು 'ಆಪ್ತರಕ್ಷಕ' ನನ್ನು ನೋಡಲು ಉತ್ಸಾಹ ವ್ಯಕ್ತಪಡಿಸಿರುವುದಾಗಿ ಹಾಸ್ಯ ನಟ ಕೋಮಲ್ ಕುಮಾರ್ ತಿಳಿಸಿದ್ದಾರೆ.

'ಆಪ್ತರಕ್ಷಕ' ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ನಟಿಸಿರುವ ಕೋಮಲ್ ಹಾಸ್ಯರಸವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಆಪ್ತರಕ್ಷಕ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೋಮಲ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ನಟರು 'ಆಪ್ತರಕ್ಷಕ' ನನ್ನು ನೋಡಲು ಮುಂದಾಗಿ ಕೋಮಲ್ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

''ಕನ್ನಡ ಚಿತ್ರೋದ್ಯಮದಲ್ಲಿ ಆಪ್ತರಕ್ಷಕ ಹೊಸ ದಾಖಲೆ ನಿರ್ಮಿಸಿದೆ. ಕನ್ನಡ ಚಿತ್ರೋದ್ಯಮದಲ್ಲಿ ಈ ರೀತಿಯ ಯಶಸ್ಸು ಕಂಡು ವರ್ಷಗಳೇ ಕಳೆದುಹೋಗಿವೆ. ಆಪ್ತರಕ್ಷಕ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ'' ಎಂದು ಕೋಮಲ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ನಿರ್ದೇಶಕ ಗುರು ಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಿಂದ ಹೊರಬಿದ್ದು ಕೋಮಲ್ ಸುದ್ದಿಯಾಗಿದ್ದರು. ಸದ್ಯಕ್ಕೆ ಕೋಮಲ್ ನಟಿಸುತ್ತಿರುವ 'ಅಪ್ಪು ಪಪ್ಪು' ಚಿತ್ರದ ಚಿತ್ರೀಕರಣ ಮುಗಿದಿದೆ. ನವರಸ ನಾಯಕ ಜಗ್ಗೇಶ್ ಜೊತೆಗೆ 'ಲಿಫ್ಟ್ ಕೊಡ್ಲಾ' ಚಿತ್ರದಲ್ಲಿ ಕೋಮಲ್ ತೊಡಗಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada