»   » ಮಲಯಾಳಂಗೆ ಡಬ್ ಆಗಲಿದೆ ಪುನೀತ್ 'ಪೃಥ್ವಿ'

ಮಲಯಾಳಂಗೆ ಡಬ್ ಆಗಲಿದೆ ಪುನೀತ್ 'ಪೃಥ್ವಿ'

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಮತ್ತು ಪಾರ್ವತಿ ಮೆನನ್ ಅಭಿನಯದ 'ಪೃಥ್ವಿ' ಚಿತ್ರ ಮಲಯಾಳಂಗೆ ಡಬ್ ಆಗಲಿದೆ. ಈ ಹಿಂದೆ ಪುನೀತ್ ಮತ್ತು ಮೆನನ್ ಜೋಡಿಯ 'ಮಿಲನ' ಚಿತ್ರಸಹ ಮಲಯಾಳಂಗೆ 'ಇಷ್ಟಂ ಎನಕಿಷ್ಟಂ' ಎಂಬ ಶೀರ್ಷಿಕೆಯಲ್ಲಿ ಡಬ್ ಆಗಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ವಂಶಿ', 'ಬಿಂದಾಸ್' ಚಿತ್ರಗಳು ಈ ಹಿಂದೆ ಮಲಯಾಳಂಗೆ ಡಬ್ ಆಗಿದ್ದವು. ಇದೀಗ ಮಲಯಾಳಂಗೆ ಡಬ್ ಆಗುತ್ತಿರುವ 'ಪೃಥ್ವಿ' ತನ್ನ ಮೂಲ ಶೀರ್ಷಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ. 'ಪೃಥ್ವಿ' ಬಿಡುಗಡೆಯಾಗುವುದಕ್ಕೂ ಮುನ್ನಡಬ್ಬಿಂಗ್ ಹಕ್ಕುಗಳ ಬಗ್ಗೆಬೇಡಿಕೆ ಬಂದಿರುವ ಬಗ್ಗೆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಮತ್ತು ಎನ್ ಎಸ್ ರಾಜಕುಮಾರ್ ಖುಷಿಯಾಗಿದ್ದಾರೆ.

'ಪೃಥ್ವಿ' ಚಿತ್ರ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಏಪ್ರಿಲ್ 24ರಂದು ತೆರೆಕಾಣಲಿದೆ. ಜಾಕಬ್ ವರ್ಗೀಸ್ ನಿರ್ದೇಶಿರುವ ಚಿತ್ರದ ತಾರಾಗಣದಲ್ಲಿ ಶ್ರೀನಿವಾಸಮೂರ್ತಿ, ಅವಿನಾಶ್, ರಮೇಶ್ ಭಟ್, ಸತ್ಯ ಪ್ರಿಯಾ ಮುಂತಾದವರಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ 'ಪೃಥ್ವಿ' ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada