»   » ಬಿಕಿನಿ ಕ್ಲಬ್ ಸೇರಿದ ಮೋಹಕ ಬೆಡಗಿ ಸ್ನೇಹಾ

ಬಿಕಿನಿ ಕ್ಲಬ್ ಸೇರಿದ ಮೋಹಕ ಬೆಡಗಿ ಸ್ನೇಹಾ

Subscribe to Filmibeat Kannada

'ರವಿಶಾಸ್ತ್ರಿ' ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಜತೆ ನಟಿಸಿದ್ದ ಸ್ನೇಹಾ ಬಿಕಿನಿ ತೊಡಲು ಒಲವು ತೋರಿದ್ದಾರೆ. ಇಷ್ಟು ದಿನಗಳ ಕಾಲ ಸ್ನೇಹಾ ಚಿತ್ರರಂಗದಲ್ಲಿ ಸಭ್ಯವಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಬಿಕಿನಿ ದೃಶ್ಯಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿರ್ಮಾಪಕರು ಕಂತೆ ಕಂತೆ ಹಣದ ಎಣಿಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಹೆಚ್ಚಿನ ಹಣ ಕೊಟ್ಟರೆ ಬಿಕಿನಿ ತೊಡಲು ನನ್ನದೇನು ಅಭ್ಯಂತರವಿಲ್ಲ ಎಂದು ಸ್ನೇಹಾ ಇತ್ತೀಚೆಗೆ ಹೇಳಿದ್ದಾರೆ. ಆಕೆ ನಟಿಸುತ್ತಿರುವ ತಮಿಳು ಚಿತ್ರವೊಂದರಲ್ಲಿ ಬಿಕಿನಿ ದೃಶ್ಯಗಳು ಬರುತ್ತವಂತೆ. ಗೋವಾ ಎಂದು ಹೆಸರಿಟ್ಟಿರುವ ಆ ಚಿತ್ರವನ್ನು ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ನಿರ್ಮಿಸುತ್ತಿದ್ದಾರೆ.

ಆ ಚಿತ್ರದಲ್ಲಿ ಸ್ನೇಹಾ ಬಿಕಿನಿ ತೊಟ್ಟ ಅರೆನಗ್ನ ಸನ್ನಿವೇಶಗಳು ಸಾಕಷ್ಟು ಇವೆ. ಅವುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಡಿ ಎಂದು ಈ ಹಿಂದೆ ಸ್ನೇಹಾ ತಾಕೀತು ಮಾಡಿದ್ದರು. ಇದೀಗ ಚಿತ್ರರಂಗದಲ್ಲಿ ಆಕೆಯ ಬೇಡಿಕೆ ದಿನೇ ದಿನೇ ಕುಸಿಯುತ್ತಿರುವ ಕಾರಣ ಬಿಕಿನಿ ದೃಶ್ಯಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆ ವೃದ್ಧಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮುಂದಿನ ಚಿತ್ರಗಳ ಸಂಭಾವನೆ ಹೆಚ್ಚಳಕ್ಕೆ ಈ ಬಿಕಿನಿ ಚಿತ್ರಗಳು ಸುಗಮ ಹಾದಿಯಾಗಲಿವೆ ಎಂಬುದು ಸ್ನೇಹಾ ಎಣಿಕೆ. ನಿರ್ಮಾಪಕರು ಎಷ್ಟು ದುಡ್ಡು ಬಿಚ್ಚಿದರೆ ಅಷ್ಟು ಬಟ್ಟೆ ಬಿಚ್ಚುವ ಸಿದ್ಧಾಂತಕ್ಕೆ ಸ್ನೇಹಾ ಸೇರ್ಪಡೆಯಾಗಿದ್ದಾರೆ. ಇನ್ನು ಮುಂದೆ ಸ್ನೇಹಾಳನ್ನು ಬಿಕಿನಿ ಬೆಡಗಿ ಎಂದು ಕರೆಯಲು ಅಡ್ಡಿಯಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...