»   » ಹಾಗೆ ಸುಮ್ಮನೆ ಕಿರಣೋದಯ

ಹಾಗೆ ಸುಮ್ಮನೆ ಕಿರಣೋದಯ

By: * ಜಯಂತಿ
Subscribe to Filmibeat Kannada
Haage Summane hero Kiran
ಸಿನಿಮಾ ಆರಂಭದ ನಡುವೆ ಪ್ರೇಕ್ಷಕರ ನಡುವೆ ಅಳುಕಿನಿಂದ ಓಡಾಡುತ್ತಿದ್ದ ಹುಡುಗನಿಗೆ ಸಿನಿಮಾ ಮುಗಿಯುವ ವೇಳೆಗೆ ಕೊಂಚ ಧೈರ್ಯ. ಕಿರಣ್ ಕಿರಣ್ ಎನ್ನುವ ಸಣ್ಣ ಸದ್ದು ಕ್ರಮೇಣ ಜೋರಾಯಿತು. ಆಟೊಗ್ರಾಫ್‌ಗೆ ಕೈಚಾಚಿದ ಸಾಲು ಬೆಳೆಯಿತು. ಅಲ್ಲಿಗೆ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ನಾಯಕನೊಬ್ಬ ಹುಟ್ಟಿಕೊಂಡಂತಾಯಿತು.

ಹಾಗೇ ಸುಮ್ಮನೆ ಚಿತ್ರ ಹೇಗಿದೆ ಎಂದು ಒಂದಷ್ಟು ಜನರನ್ನು ಮಾತನಾಡಿಸಿ. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಆದರೆ ಕಿರಣ್ ಅಭಿನಯದ ಬಗ್ಗೆ ಎಲ್ಲರದೂ ಒಂದೇ ಮಾತು- ಹುಡುಗ ಭರವಸೆಯ ತಾರೆ!

ನೋಡಲಿಕ್ಕೆ ಚೆಲುವು. ನಿಲುವು ಚೆಲುವು. ಮುಖದ ಮೇಲೆ ಭಾವನೆಯ ಗೆರೆಗಳೂ ಅರಳುತ್ತವೆ. ಧ್ವನಿಯ ನಿಯಂತ್ರಣವಂತೂ ಅಚ್ಚರಿ ಹುಟ್ಟಿಸುವಷ್ಟು ಸಮತೋಲನದಿಂದಿದೆ. ಹುಡುಗನ ಮೆಚ್ಚಿಕೊಳ್ಳಲಿಕ್ಕೆ ಇನ್ನೇನು ಬೇಕು?

ಕ್ಯಾಮೆರಾ ಎದುರಿಸುವಾಗ ನನಗೆ ಭಯವಾಗಲಿಲ್ಲ. ಈ ಸಿನಿಮಾದಿಂದ ನಾನು ಸಾಕಷ್ಟು ಕಲಿತೆ. ಕೊಡಚಾದ್ರಿಯ ನೆತ್ತಿಯಲ್ಲಿ ಒಂದೇ ಕೊಠಡಿಯನ್ನು ಸೆಟ್ ಹುಡುಗರು ಸೇರಿದಂತೆ ಅನೇಕ ಜನ ಹಂಚಿಕೊಂಡಿದ್ದೆವು. ಅದೊಂಥರಾ ಹೇಳಿಕೊಳ್ಳಲಾಗದ ಪಾಠ ಎಂದರು ಕಿರಣ್. ಇಂಥ ಅನೇಕ ಪಾಠಗಳನ್ನು ಮೊದಲ ಸಿನಿಮಾ ಅವರಿಗೆ ಕಲಿಸಿದೆಯಂತೆ.

ಅಂದಹಾಗೆ, ಕಿರಣ್ ನಟನಾಗಬೇಕೆಂದು ಕನಸುಕಂಡವರಲ್ಲ. ಸಿನಿಮಾ ಬಗ್ಗೆ ಆಸಕಿಯಿದ್ದುದು ನಿಜ. ನಿರ್ದೇಶನ, ಛಾಯಾಗ್ರಹಣ- ಹೀಗೆ ಕನಸು ಕಂಡಿದ್ದರು. ನೀನು ನಟಿಸುತ್ತೀಯಾ? ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಕೇಳಿದಾಗ ಕಿರಣ್‌ಗೆ ತಮ್ಮ ಬಗ್ಗೆಯೇ ನಂಬಿಕೆಯಿರಲಿಲ್ಲ. ಪ್ರೀತಂ ಹಾಗೂ ಛಾಯಾಗ್ರಾಹಕ ಕೃಷ್ಣ ಧೈರ್ಯ ತುಂಬಿದರು. ನಟನೆ ಶುರುವಾದದ್ದು ಹೀಗೆ- ಹಾಗೆ ಸುಮ್ಮನೆ! ಮುಂದಿನ ದಿನಗಳಲ್ಲಿ ನಟನಾಗಿಯೇ ಏನನ್ನಾದರೂ ಸಾಧಿಸುವ ಆಸೆ ಕಿರಣ್‌ಗಿದೆ.

ಹಾಗೆ ಸುಮ್ಮನೆ ನಾಯಕಿ ಸುಹಾಸಿ ಚಿತ್ರಪಟ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada