»   »  ತೆಲುಗಿನಲ್ಲಿ ಪುನೀತ್ 'ಬಿಂದಾಸ್' ಗಳಿಕೆ!

ತೆಲುಗಿನಲ್ಲಿ ಪುನೀತ್ 'ಬಿಂದಾಸ್' ಗಳಿಕೆ!

Subscribe to Filmibeat Kannada
Puneeth Rajkumar
ಕನ್ನಡ ಚಿತ್ರಗಳು ಇನ್ನೊಂದು ಭಾಷೆಗೆ ಡಬ್ಬ ಆಗೋದು ಸ್ವಲ್ಪ ಕಡಿಮೆಯೇ ಎಂದೇ ಹೇಳಬೇಕು. ಕನ್ನಡ ಚಿತ್ರರಂಗದ ನಿರ್ಮಾಪಕರು ತಮಿಳು, ತೆಲುಗು ಯಶಸ್ವಿ ಚಿತ್ರಗಳನ್ನು ರೀಮೇಕ್ ಮಾಡುವುದರಲ್ಲಿ ಸಿದ್ಧಹಸ್ತರು. ಇದರಲ್ಲಿ ಅನುಮಾನವೇ ಬೇಡ. ಇತ್ತೀಚೆಗಂತೂ ಅದರ ಭರಾಟೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಹಾಗೂ ಹಂಸಿಕಾ ಮೊಟ್ವಾನಿ ಅಭಿನಯದ ಮೆಗಾಹಿಟ್ ಚಿತ್ರ 'ಬಿಂದಾಸ್' ಇದೀಗ ತೆಲುಗಿಗೆ ಡಬ್ ಆಗಿದೆ. ಅಲ್ಲಿ ಕೂಡಾ ಈ ಇಬ್ಬರು ನಾಯಕ-ನಾಯಕಿ ಎನ್ನುವುದು ಮತ್ತೊಂದು ವಿಶೇಷ.

ತೆಲುಗಿನಲ್ಲಿ 'ಪಂಡುಗಾಡು' ಎಂಬ ಹೆಸರಿನಲ್ಲಿ ನಿರ್ಮಾಣವಾಗಿದ್ದು, ಆಂಧ್ರಪ್ರದೇಶದಾದ್ಯಂತ ಸುಮಾರು 50 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು ಚಿತ್ರರಸಿಕರ ಮನೆ ಗೆದ್ದಿದೆ ಎಂಬ ಸುದ್ದಿ ಹೈದರಾಬಾದ್ ನಿಂದ ಬಂದಿದೆ. ಬೇರೆ ಭಾಷೆಗೆ ಡಬ್ ಆಗಿರುವ ಮೂಲ ಕನ್ನಡ ಚಿತ್ರಗಳೆಲ್ಲವೂ ಹಿಟ್ ಆಗದಿದ್ದರೂ ಪರ್ವಾಗಿಲ್ಲ ಅನ್ನಿಸಿಕೊಂಡಿದ್ದವು. ಆದರೆ 'ಪಂಡುಗಾಡು' ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದೆ ಎಂದು ಕೇಳಿರುವ ಪುನೀತ್ ರಾಜಕುಮಾರ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತೆಲುಗು ಚಿತ್ರದಲ್ಲಿ ಹೆಸರು ಮಾಡಿರುವ ಹಂಸಿಕಾ ಮೊಟ್ವಾನಿ ತನ್ನ ಅಭಿಮಾನಿ ಬಳಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಓಂ ಪ್ರಕಾಶ್, ಪುನೀತ್ ಕಾಂಬಿನೇಷನಲ್ಲಿ ಹೊಸ ಚಿತ್ರ
ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ
ಪುನೀತ್ ಅಭಿಮಾನಿಗಳ ಸಂಘಕ್ಕೆ ವಿದ್ಯುಕ್ತಚಾಲನೆ
ಬಾಕ್ಸಾಫೀಸ್ ಕಿಂಗ್ ಅಪ್ಪುಗೆ ಹುಟ್ಟುಹಬ್ಬದ ಸಂಭ್ರಮ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada