»   » ಮಾಘಮಾಸದಲ್ಲಿ ’ಶ್ರಾವಣ’ ಸಂಭ್ರಮ

ಮಾಘಮಾಸದಲ್ಲಿ ’ಶ್ರಾವಣ’ ಸಂಭ್ರಮ

Posted By:
Subscribe to Filmibeat Kannada

ಚಿತ್ರಮಾಧ್ಯಮ ಸಂಸ್ಥೆಯ ಮಾಲೀಕ ಮಹೇಶ್ ಆರ್. ಕೊಠಾರಿ ಮತ್ತು ಎಂ.ಆರ್. ಪ್ರಸನ್ನಕುಮಾರ್ ಅರ್ಪಿಸುವ "ಶ್ರಾವಣ" ಚಿತ್ರಕ್ಕೆ ಜನವರಿ 20 ರಿಂದ ತುಮಕೂರು ಸುತ್ತಮುತ್ತ ನಿರಂತರ ಚಿತ್ರೀಕರಣ ನಡೆಸಲಾಗುತ್ತಿದೆ. ತುಮಕೂರಿನ ದೇವರಾಯಪಟ್ಟಣದ ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡರು. ಎಸ್.ಎ. ಗೋವಿಂದರಾಜ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಅಲ್ಲದೆ ಸ್ಥಳೀಯ ಮುಖಂಡರು, ಸಾರಿಗೆ ಅಧಿಕಾರಿಗಳು ಆಗಮಿಸಿ ನಿರ್ಮಾಪಕರಿಗೆ ಶುಭಕೋರಿದರು.

ನಾಯಕ ವಿಜಯ ರಾಘವೇಂದ್ರ ನಾಯಕಿ ಗಾಯತ್ರಿ, ಭುವನ್ , ಸಂದೀಪ್ ಇವರು ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವ ಮೊದಲ ದೃಶ್ಯ ಚಿತ್ರೀಕರಿಸಲಾಯಿತು. ಮನುಷ್ಯ ಸ್ವಾರ್ಥಿಯಾಗಿ ತಾನೊಬ್ಬನೇ ಬದುಕುವುದಕ್ಕಿಂತ ಉಳಿದವರ ಜೀವನವನ್ನು ಹಸನು ಮಾಡುವುದರಲ್ಲಿ ಸಾರ್ಥಕತೆ ತುಂಬಿರುತ್ತದೆ ಎಂಬ ಮೆಸೇಜ್ ನೀಡುವ "ಶ್ರಾವಣ" ಚಿತ್ರದಲ್ಲಿ ಗ್ರಾಮೀಣ ಸೊಗಡಿನ ಕಥೆಯಿದೆ.

ಉತ್ಸಾಹಿ ಯುವಕನೊಬ್ಬ ಒಬ್ಬರಿಗೆ ಸಣ್ಣದೊಂದು ಸಹಾಯ ಮಾಡಲು ಹೋಗಿ ಇಡೀ ಹಳ್ಳಿಯನ್ನೇ ಉದ್ದಾರಮಾಡುತ್ತೇನೆ. ಹಳ್ಳಿ ಜನರ ಹಲವಾರು ಸಮಸ್ಯೆಗಳನ್ನು ಆ ಯುವಕ ಯಾವ ರೀತಿ ಬಗೆಹರಿಸುತ್ತಾನೆ ಎಂಬುದೇ ಈ ಚಿತ್ರದ ಸಾರಾಂಶ. ತುಮಕೂರು ಸುತ್ತಮುತ್ತ 2 ಹಂತಗಳಲ್ಲಿ ಚಿತ್ರೀಕರಣ ನಡೆಯಲಿದ್ದು ಆರ್.ಟಿ.ಓ. ಶಿವಣ್ಣ ಎಂದೇ ಹೆಸರಾದ ಆರ್.ಮಲ್ಲಿಕಾರ್ಜುನಯ್ಯ ಹಾಗೂ ಕೆ.ಎನ್. ವೆಂಕಟೇಶ್ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದವರು ಸೀತಾಪತಿ. ಬಿ.ಎಸ್. ರಾಜಶೇಖರ್ ರವರ ನಿರ್ದೇಶನವಿದೆ.

ರವಿಕಿಶೋರ್, ಸುರೇಶ್ ತಗಚಗೆರೆ, ಸಂಭಾಷಣೆ, ಡಾ.ದೊಡ್ಡರಂಗೇಗೌಡ, ಮಂಜುನಾಥ್, ರಾಜಶೇಖರ್ ಸಾಹಿತ್ಯ, ಕೆ. ವಾಸುದೇವ್ ಚಾಯಾಗ್ರಹಣ, ಕಾರ್ತಿಕ್ ಭೂಪತಿ ಸಂಗೀತ ಸಂಯೋಜನೆ ಇದ್ದು ಬ್ಯಾಂಕ್ ಜನಾರ್ಧನ್ ಚಿದಾನಂದ, ಸತ್ಯಜಿತ್, ನೀನಾಸಂ ಅಶ್ವತ್ಥ್, ಮೈಕೆಲ್ ಮಧು, ಪದ್ಮಿನಿ, ಜಾಹ್ನವಿ ತಾರಾಗಣದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada