»   » 2012 ಅಪ್ಪಟ ದುಡ್ಡು ಮಾಡುವ ದಂಧೆ

2012 ಅಪ್ಪಟ ದುಡ್ಡು ಮಾಡುವ ದಂಧೆ

Subscribe to Filmibeat Kannada
Doomsday 2012 dvd
2012 ಡಿಸೆಂಬರ್ 21ರಂದು ಭೂಮಂಡಲಕ್ಕೆ ಇತಿಶ್ರೀ! ಯುಗಾಂತ್ಯದ ಬಗ್ಗೆ ವಿವರ ನೀಡುವ ಪುಸ್ತಕಗಳು, ಬ್ಲಾಗ್‌ಗಳು ಜಗತ್ತಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಜನ್ಮತಾಳಿವೆ. ಇದನ್ನೇ ಆಧರಿಸಿ 2012' ಎಂಬ ಇಂಗ್ಲಿಷ್ ಚಿತ್ರ ತೆರೆ ಕಂಡಿದೆ. ಎಲ್ಲವೂ ದುಡ್ಡಿಗಾಗಿ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ, ಬೆಂಗಳೂರಿನ ಮೂವರು ಭೂಪರು ಈ ಚಲನಚಿತ್ರವನ್ನೇ ನಕಲು ಮಾಡಿ ಡಿವಿಡಿ ಹಾಗೂ ಎಂಪಿ3 ರೂಪದಲ್ಲಿ ಮಾರುತ್ತಿದ್ದಾಗ ಸಿಕ್ಕಿಬಿದ್ದು ಕಂಬಿ ಎಣಿಸುವಂತಾಗಿದೆ. ಸಿಸಿಬಿ ಪೊಲೀಸರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ 4ನೇ ಬ್ಲಾಕ್, 13ನೇ ಕ್ರಾಸ್ ಕೇಶವ ಕೃಪ ಅಂಗಡಿ ಹಾಗೂ ಜಯನಗರ 4ನೇ ಬ್ಲಾಕ್ 11ನೇ ಮುಖ್ಯರಸ್ತೆಯ ನವರತ್ನ ಮೆಡಿಕಲ್ಸ್ ಮುಂದೆ ಫುಟ್‌ಪಾತ್ ಮೇಲೆ ದಾಳಿ ನಡೆಸಿ 4 ಲಕ್ಷ ರೂ. ಮೌಲ್ಯದ ಡಿವಿಡಿ ವಶಪಡಿಸಿಕೊಂಡಿದ್ದಾರೆ.

ಸಿಡಿ ಮಾರುತ್ತಿದ್ದ ಕಾರ್ತಿಕ್, ವೆಂಕಟೇಶ್ ಹಾಗೂ ದುರ್ಗೇಶ್ ಎಂಬುವರನ್ನು ಬಂಧಿಸಿದ್ದಾರೆ. ಇವರಿಂದ 2012 ಇಂಗ್ಲಿಷ್ ಹಾಗೂ ತಮಿಳು ಮತ್ತು ತೆಲಗು ಚಿತ್ರಗಳ ಸಿಡಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಾಪಿರೈಟ್ ಕಾಯಿದೆ 1957ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada