»   » ಬಳಕುವ ಸ್ನೇಹಾಳ ಸೌಂದರ್ಯದ ಗುಟ್ಟು ಈಗ ರಟ್ಟು!

ಬಳಕುವ ಸ್ನೇಹಾಳ ಸೌಂದರ್ಯದ ಗುಟ್ಟು ಈಗ ರಟ್ಟು!

Posted By: Super
Subscribe to Filmibeat Kannada

ತೆಲುಗಿನ ಬೆಡಗಿ ಸ್ನೇಹಾ ಸೌಂದರ್ಯದ ಗಣಿ. ರವಿಚಂದ್ರನ್‌ ಜೊತೆ 'ರವಿಶಾಸ್ತ್ರಿ' ಚಿತ್ರದಲ್ಲಿ ಈಯಮ್ಮನನ್ನು ಕಂಡವರು, 'ಯಾವ ದೇವಶಿಲ್ಪಿ ಕಡೆದನೋ ನಿನ್ನ...' ಎಂದು ಹಾಡಿದ್ದರಂತೆ!

ಟೆಲಿವಿಷನ್‌ ಜಾಹೀರಾತುಗಳಲ್ಲಿ ಅಮ್ಮನಾಗಿ, 'ರವಿಶಾಸ್ತ್ರಿ' ಯಲ್ಲಿ ಬಳುಕುವ ಬೆಡಗಿಯಾಗಿ ಸ್ನೇಹಾ ಎಲ್ಲರ ಕಣ್‌ ಕುಕ್ಕುತ್ತಿದ್ದಾಳೆ. ಆಕೆ, ಈಗ ಮೊದಲಿಗಿಂತಲೂ ಹೆಚ್ಚು ಸುಂದರಿಯಂತೆ ಕಾಣಿಸುತ್ತಿದ್ದಾಳೆ? ' ನಿಮ್ಮ ಸೌಂದರ್ಯದ ಗುಟ್ಟೇನು? ಎಂಬುದನ್ನು ಹೇಳಿ ಬಿಡಿ' ಎಂದು ಪತ್ರಕರ್ತರು ಪೀಡಿಸಿದಾಗ, ಮೆಲ್ಲನೇ ಸ್ನೇಹಾ ಬಾಯಿಬಿಟ್ಟಳು.

heroine Snehas

'ನನಗೆ ಮೊದಲು ಮಾಂಸ ಅಂದ್ರೆ ಸಕತ್ತು ಇಷ್ಟ. ಚಿಕನ್‌ ಅಥವಾ ಮಟನ್‌ ಪ್ರತಿದಿನ, ಊಟದಲ್ಲಿ ಇರಲೇಬೇಕಿತ್ತು. ಈಗ ಅವೆಲ್ಲವೂ ನನ್ನ ಶತ್ರುಗಳು. ನನಗದನ್ನು ಕಂಡರೆ ಆಗದು. ನಾನೀಗ ಅಪ್ಪಟ ಸಸ್ಯಾಹಾರಿ. ದಿನಕ್ಕೆ ಮೂರು ಸಲ ಹಣ್ಣಿನ ರಸ ಕುಡಿಯುತ್ತೇನೆ. ಹೀಗಾಗಿ ನನ್ನ ಹೊಟ್ಟೆ ತಣ್ಣಗಿದೆ' ಎಂದಿದ್ದಾಳೆ ಸ್ನೇಹಾ.

ನನ್ನ ಮನೆಗೆ ಬಂದವರು ಇದೇನು ಹಣ್ಣಿನ ಅಂಗಡಿಯೇ ಎಂದು ಗಾಬರಿಗೊಳ್ಳುತ್ತಾರೆ. ಅಷ್ಟು ಹಣ್ಣುಗಳು ನಮ್ಮ ಮನೆಯಲ್ಲಿರುತ್ತವೆ. ಸಾಮಾನ್ಯವಾಗಿ ಅನ್ನ ತಿನ್ನುವ ನಾನು, ಕೆಲವು ಸಲ ಚಪಾತಿಗೆ ಜೈ ಎನ್ನುತ್ತೇನೆ. ಕಾಫಿ ಮತ್ತು ಟೀ ನನ್ನಿಂದ ಸದಾ ದೂರ... ಎಂದು ಪಟ್ಟಿ ಒಪ್ಪಿಸುವ ಸ್ನೇಹಾ ನಕ್ಕರು... ಎಲ್ಲವನ್ನೂ ತಿಳಿದು, ಧನ್ಯರಾದವರಂತೆ ಪತ್ರಕರ್ತರೂ ನಕ್ಕರು!

English summary
Ravishastri heroine Snehas beauty secrets

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada