»   »  ಸಂಜು ವೆಡ್ಸ್ ಗೀತಾ; ಕಿಟ್ಟಿ ಜತೆ ರಮ್ಯಾ

ಸಂಜು ವೆಡ್ಸ್ ಗೀತಾ; ಕಿಟ್ಟಿ ಜತೆ ರಮ್ಯಾ

Subscribe to Filmibeat Kannada

ಸಂಜು ವೆಡ್ಸ್ ಗೀತಾ ಚಿತ್ರದ ಮುಹೂರ್ತ ಶುಕ್ರವಾರ(ಅ.30) ಕಂಠೀರವ ಸ್ಟುಡಿಯೋದಲ್ಲಿ ನೆರೆವೇರಿತು. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಶ್ರೀನಗರ ಕಿಟ್ಟ್ಟಿ ಜತೆ ನಟಿ ರಮ್ಯಾ ನಟಿಸುತ್ತಿದ್ದಾರೆ. ಮೈಸೂರಿನಲ್ಲಿ 'ಸ್ವಯಂವರ' ಚಿತ್ರವನ್ನು ಮುಗಿಸಿಕೊಂಡು ಸಂಜು ವೆಡ್ಸ್ ಗೀತಾ ಚಿತ್ರಕ್ಕಾಗಿ ಕಿಟ್ಟಿ ಬೆಂಗಳೂರಿಗೆ ಆಗಮಿಸಿದ್ದರು.

'ಅರಮನೆ' ಖ್ಯಾತಿಯ ನಾಗಶೇಖರ್ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಪ್ರಮೋದ್ ನಾರಾಯಣ್ ಮತ್ತು ಮುರಳಿ ಮೋಹನ್ ಚಿತ್ರದ ಇಬ್ಬರು ನಿರ್ಮಾಪಕರು. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತದ ದೃಶ್ಯಗಳನ್ನು ಸತ್ಯ ಹೆಗಡೆ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

ಇಸ್ಮಾಯಿಲ್ ಅವರ ಕಲಾ ನಿರ್ದೇಶನದಲ್ಲಿ ರು.15 ಲಕ್ಷ ವೆಚ್ಚದ ಸೆಟ್ಟನ್ನು ನಿರ್ಮಿಸಲಾಗಿತ್ತು. ಮುಹೂರ್ತ ಮುಗಿದ ಬಳಿಕ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಊಟಿಗೆ ಪ್ರಯಾಣ ಬೆಳೆಸಿತು. ಮಡಿಕೇರಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಬಳಿಕ ಚಿತ್ರತಂಡ ಮತ್ತೆ ಬೆಂಗಳೂರಿಗೆ ಹಿಂತಿರುಗಲಿದೆ. 1996 ರಿಂದ 2000ವರೆಗೂ ನಡೆದ ಸರಣಿ ಘಟನೆಗಳನ್ನು ಆಧರಿಸಿ ಚಿತ್ರಕತೆಯನ್ನು ರಚಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada