»   »  ಸ್ಯಾಂಡಲ್ ವುಡ್ ನ ಚುಟುಕು ಸುದ್ದಿಗಳು

ಸ್ಯಾಂಡಲ್ ವುಡ್ ನ ಚುಟುಕು ಸುದ್ದಿಗಳು

Subscribe to Filmibeat Kannada

ಇತ್ತೀಚೆಗಷ್ಟೆ 'ಕರಿ ಚಿರತೆ' ಚಿತ್ರತಂಡಮೈಸೂರಿನಿಂದ ಹಿಂತಿರುಗಿದೆ. ಹೊಡೆದಾಟದ ದೃಶ್ಯಗಳಲ್ಲಿ ಭಾಗವಹಿಸಿದ್ದ ಚಿತ್ರದನಾಯಕ ನಟ ವಿಜಯ್ ಸುಸ್ತಾಗಿದ್ದಾರಂತೆ. ಸದ್ಯಕ್ಕೆ ಆಶ್ರಮವೊಂದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದಾಗಿ ವಿಜಯ್ ತಿಳಿಸಿದ್ದಾರೆ. ಶರ್ಮಿಳಾ ಮಾಂಡ್ರೆ ಈ ಚಿತ್ರದ ನಾಯಕಿ.

**

ಜಸ್ಟ್ ಮಾತ್ ಮಾತಲ್ಲಿ ಚಿತ್ರ ಸಿಂಗಪುರಕ್ಕೆ ತೆರಳಿದೆ. ಅಂತಿಮ ಚಿತ್ರೀಕರಣವನ್ನು ಮುಗಿಸಿಕೊಂಡು ಶೀಘ್ರದಲ್ಲೇ ಚಿತ್ರತಂಡ ಹಿಂತಿರುಗಲಿದೆ. ಮುಖ್ಯವಾದ ಸಮಾಚಾರವೆಂದರೆ ನಟಿ ರಮ್ಯಾ ಅವರನ್ನು ಸಿಂಗಪುರ ಚಿತ್ರೀಕರಣದಿಂದ ಕೈಬಿಡಲಾಗಿದೆ. ಆದರೆ ರಮ್ಯಾ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

**

'ಮನಸಾರೆ' ಚಿತ್ರದ ಬಿಡುಗಡೆ ನಂತರ ಆ ಚಿತ್ರದ ನಾಯಕಿ ಐಂದ್ರಿತಾ ರೇ ಹದಿನೈದು ದಿನಗಳ ಕಾಲ ರಜೆ ಘೋಷಿಸಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ವಿಶ್ರಾಂತಿ ನಂತರ ಅವರು ಕ್ಯೂಪಾ (Compassion Unlimited Plus Action) ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಧೂಳ್ ಮತ್ತು ನೂರು ಜನ್ಮಕೂ ಚಿತ್ರೀಕರಣದಲ್ಲೂ ಪಾಲ್ಗೊಳ್ಳಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada