For Quick Alerts
  ALLOW NOTIFICATIONS  
  For Daily Alerts

  67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಯಾರ ಯಾರ ಮುಡಿಗೇರಿದೆ ಅವಾರ್ಡ್

  |

  ಬಾಲಿವುಡ್‌ನ ಮಣಿಕರ್ಣಿಕಾ ಮತ್ತು ಪಂಗಾ ಸಿನಿಮಾದ ನಟನೆಗಾಗಿ ನಟಿ ಕಂಗನಾ ರನೌತ್ ಅತ್ಯುತ್ತಮ ನಟಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಮಣಿಕರ್ಣಿಕಾ ಸಿನಿಮಾ 2019ರಲ್ಲಿ ರಿಲೀಸ್ ಆಗಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಜೊತೆಗೆ ಇದರಲ್ಲಿ ಕಂಗನಾ ಅಭಿನಯ ಪ್ರಶಂಸನೀಯವಾಗಿತ್ತು. ಈ ಚಿತ್ರಕ್ಕೆ ಕಂಗನಾ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಈ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಗುತ್ತಿರುವುದರ ಬಗ್ಗೆ ಕಂಗನಾ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೇ 2020ರಲ್ಲಿ ತೆರೆಕಂಡ ಪಂಗಾ ಸಿನಿಮಾದ ನಟನೆಗಾಗಿಯೂ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

  ಇನ್ನು ಈ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಂಗನಾ ಭಾಗಿ ಯಾಗಿದ್ದಾರೆ. ಚಿನ್ನದ ಬಣ್ಣದ ರೇಷ್ಮೆ ಸೀರೆಗೆ ಕೆಂಪು ಬಣ್ಣದ ಬಾರ್ಡರ್​ ಇದ್ದು, ಅದಕ್ಕೆ ಮ್ಯಾಚ್​ ಆಗುವ ಆಭರಣದ ಸೆಟ್ ಧರಿಸಿದ್ದಾರೆ. ಹಣೆಗೆ ಕುಂಕುಮ, ತಲೆಗೆ ಮಲ್ಲಿಗೆ ಹೂ ಮುಡಿದ ಕಂಗನಾ ಸಖತ್​ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಈ ಅವಾರ್ಡ್ ಕಂಗನಾ ಅವರ 4ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾಗಿದೆ.

  ಅತ್ಯುತ್ತಮ ನಟ ಪ್ರಶಸ್ತಿ ಮನೋಜ್ ಬಾಜಪೇಯಿ ಕೈ ಸೇರಿದ್ದು ಬೋನ್ಸಲೆ ಚಿತ್ರದ ಉತ್ತಮ ನಟನೆಗಾಗಿ ಈ ಪ್ರಶಸ್ತಿ ಸಂದಿದೆ. ಹಾಗೂ ತಮಿಳು ನಟ ಧನುಷ್ ಕೂಡ ತಮ್ಮ ಅಸುರನ್ ಸಿನಿಮಾಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಗೇ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ರಜಿನಿಕಾಂತ್ ಕೂಡ ಸಿನಿಮಾರಂಗದಲ್ಲಿ ತಮ್ಮ ಜೀವಮಾನ ಸಾಧನೆಗಾಗಿ ದಾದಸಾಹೆಬ್ ಫಾಲ್ಕೆ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಂದು ಪ್ರಶಸ್ತಿ ಪಡೆದ ಧನುಷ್, ಕಂಗನಾ, ರಜನಿಕಾಂತ್ ಈ ಖುಷಿಯ ಸಂದರ್ಭವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  ಅತ್ಯುತ್ತಮ ಸಹಾಯಕ ನಟ ಪ್ರಶಸ್ತಿಯನ್ನು ತಮಿಳಿನ ವಿಜಯ್ ಸೇತುಪತಿ ತನ್ನ ಸೂಪರ್ ಡಿಲಕ್ಸ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಹಾಗೇ ಅತ್ಯುತ್ತಮ ಸಹಾಯಕ ನಟಿ ಪ್ರಶಸ್ತಿಯನ್ನು ಪಲ್ಲವಿ ಜೋಷಿ ತನ್ನ ದಿ ತಷ್ಕೆಂಟ್ ಫೈಲ್ಸ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಬಹಟ್ಟರ್ ಹುಸೈನ್ ಚಿತ್ರಕ್ಕಾಗಿ ಸಂಜಯ್ ಪುರಾನ್ ಸಿಂಗ್ ಚೌಹಾನ್ ಪಡೆದುಕೊಂಡಿದ್ದಾರೆ.

  ಇನ್ನು ಕನ್ನಡದ ಅಕ್ಷಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಹಿಂದಿಯಲ್ಲಿ ಸುಶಾಂತ್ ಸಿಂಗ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಚಿಚೋರೆ ಚಿತ್ರ ಕೂಡ ಅತ್ಯುತ್ತಮ ಸಿನಿಮಾ ಅವಾರ್ಡ್ ಪಡೆದುಕೊಂಡಿದೆ. ಹಾಗೇ ತೆಲುಗಿನ ಜೆರ್ಸಿ, ತಮಿಳಿನ ಅಸುರನ್, ಮಲಯಾಳಂನ ಸಕಲ ನೊಟ್ಟಂ, ತುಳುವಿನ ಪಿಂಗಾರ ಹಾಗೂ ಬೆಂಗಾಲಿ ಚಿತ್ರ ಗುಮ್ನಾಮಿ ಅತ್ಯುತ್ತಮ ಪ್ರಶಸ್ತಿ ದೋಚಿಕೊಂಡಿವೆ.

  67th National film Awards ceremony Highlights

  ಸಾಹಸ ನಿರ್ದೇಶನ ವಿಭಾಗದಲ್ಲಿ ಕನ್ನಡದ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶಕ ವಿಕ್ರಮಂ ಮೋರ್, ತೆಲುಗಿನ ಮಹರ್ಷಿ ಚಿತ್ರ, ತಮಿಳಿನ ಅಸುರನ್ ಚಿತ್ರಗಳ ಸಾಹಸ ನಿರ್ದೇಶಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ ಆನಂದಿ ಗೋಪಾಲ್,​ ಅತ್ಯುತ್ತಮ ಸಂಗೀತ ನಿರ್ದೇಶಕ ವಿಶ್ವಾಸಂ ಚಿತ್ರಕ್ಕಾಗಿ ಡಿ ಇಮಾನ್​ ಹಾಗೂ ನಾನ್​ ಫೀಚರ್​ ಫಿಲ್ಮ್​ ವಿಭಾಗದಲ್ಲಿ ಅತ್ಯುತ್ತಮ ನಿರೂಪಣೆಗಾಗಿ ಸರ್​ ಡೇವಿಡ್​ ಅಟೆನ್​ಬರೋ​ ಅವರ ವೈಲ್ಡ್​ ಕರ್ನಾಟಕ ಚಿತ್ರ ಪ್ರಶಸ್ತಿ ಪಡೆದಿದೆ.

  ಅತ್ಯುತ್ತಮ ಮೇಕಪ್ ಆರ್ಟಿಸ್ಟ್ ಮಲಯಾಳಂನ ರಂಜಿತ್ ಹೆಲನ್, ಚೊಚ್ಚಲ ಅತ್ಯುತ್ತಮ ನಿರ್ದೇಶನ ಮಲಯಾಳಂನ ಮತ್ತುಕುಟ್ಟಿ ಹೆಲನ್, ಅತ್ಯುತ್ತಮ ಮಕ್ಕಳ ಚಿತ್ರ ಹಿಂದಿಯ ಕಸ್ತೂರಿ, ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ ಪ್ರಶಸ್ತಿ ಮರಾಠಿಯ ಆನಂದಿ ಗೋಪಾಲ್ ಪಡೆದುಕೊಂಡಿದ್ದಾರೆ. ಪ್ರತಿ ವರ್ಷ ಮೇ 3 ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗುತ್ತದೆ. ಆದರೆ, ಕಳೆದ ವರ್ಷ ಕೋವಿಡ್ ಹಿನ್ನಲೆ ಈ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಇಂದು ನವದೆಹಲಿಯ ಮಾಧ್ಯಮ ಕೊಠಡಿಯಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ.

  English summary
  67th National film award ceremony. Rajinikanth, Kangana Ranaut, Manoj bajpayee, Dhanush and others mark their attendance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X