For Quick Alerts
  ALLOW NOTIFICATIONS  
  For Daily Alerts

  68th National Film Awards; ಭಾಷಾವಾರು ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ

  |

  2020 ಸಾಲಿನ ಸಿನಿಮಾಗಳಿಗೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಘೋಷಣೆಯಾಗಿದೆ. ಓಟಿಟಿಯಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ 'ಸೂರರೈ ಪೋಟ್ರು' ಚಿತ್ರದ ಅಭಿನಯಕ್ಕಾಗಿ ತಮಿಳು ನಟ ಸೂರ್ಯ 'ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನಲೆ ಸಂಗೀತ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಚಿತ್ರಕಥೆ ಸೇರಿ ಈ ಚಿತ್ರ 5 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅದೇ ರೀತಿ 'ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಚಿತ್ರದ ನಟನೆಗಾಗಿ ನಟ ಅಜಯ್‌ ದೇವಗನ್ ಸಹ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಜಂಟಿಯಾಗಿ ಪಡೆದುಕೊಂಡಿದ್ದಾರೆ. ಈ ಬಾರಿ ಒಟ್ಟು 30 ಭಾಷೆಗಳ 300 ಫೀಚರ್, 150 ನಾನ್‌- ಫೀಚರ್ ಸಿನಿಮಾಗಳು ಸೇರಿ ಒಟ್ಟು 400ಕ್ಕೂ ಹೆಚ್ಚು ಸಿನಿಮಾಗಳು ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಿದ್ದವು.

  'ಅಯ್ಯಪ್ಪನುಮ್ ಕೋಶಿಯುಂ' ಚಿತ್ರದ ನಟನೆಗಾಗಿ ನಟ ಬಿಜು ಮೆನನ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ತಮಿಳಿನ 'ಶಿವರಂಜನಿಯುಂ ಇನ್ನುಮ್ ಸಿಲ ಪೆಣ್‌ಗಳುಂ' ಚಿತ್ರದ ಅಭಿನಯಕ್ಕಾಗಿ ಲಕ್ಷ್ಮೀ ಪ್ರಿಯಾ ಚಂದ್ರಮೌಳಿಗೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಪವನ್ ಒಡೆಯರ್ ನಿರ್ಮಾಣದ 'ಡೊಳ್ಳು' ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರಕ್ಕೆ ಪ್ರಶಸ್ತಿ ದಕ್ಕಿದ್ರೆ, ದಿವಂಗತ ನಟ ಸಂಚಾರಿ ವಿಜಯ್ ನಟಿಸಿದ ಕೊನೆಯ ಸಿನಿಮಾ 'ತಲೆದಂಡ' ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಜೀಟಿಗೆ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ತುಳು ಚಿತ್ರ ಗೌರವ ಸಿಕ್ಕಿದೆ.

  Breaking: 68ನೇ ರಾಷ್ಟ್ರ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ್ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ!Breaking: 68ನೇ ರಾಷ್ಟ್ರ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ್ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ!

  'ತಲೆದಂಡ' ಚಿತ್ರದಲ್ಲಿ ಸಂಚಾರಿ ವಿಜಯ್ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸಿಗುವ ನಿರೀಕ್ಷೆ ಇತ್ತು. ಆದರೆ 'ತಲೆದಂಡ' ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ ಆಗಿ ಹೊರಹೊಮ್ಮಿದೆ. 'ನಾನು ಅವನಲ್ಲ ಅವಳು' ಚಿತ್ರದ ನಟನೆಗಾಗಿ ಈ ಹಿಂದೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಂಚರಿ ವಿಜಯ್ ಪಡೆದುಕೊಂಡಿದ್ದರು. ಇನ್ನು ಸಂಚಾರಿ ವಿಜಯ್ ನಟಿಸಿದ್ದ 'ಹರಿವು' ಹಾಗೂ 'ನಾತಿಚರಾಮಿ' ಚಿತ್ರಗಳಿಗೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿತ್ತು.

   68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ಕನ್ನಡ)

  68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ಕನ್ನಡ)

  ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ: ಡೊಳ್ಳು
  ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು
  ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ
  ಲೋಕೇಷನ್ ಸೌಂಡ್ ಡಿಸೈನಿಂಗ್ : ಡೊಳ್ಳು
  ಅತ್ಯುತ್ತಮ ಪ್ರಾದೇಶಿಕ ತುಳು ಚಿತ್ರ: ಜೀಟಿಗೆ
  ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಿತ್ರ: ನಾದದ ನವದೀತ (ಗಿರೀಸ್ ಕಾಸರವಳ್ಳಿ ನಿರ್ದೇಶನ)

   67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಕನ್ನಡಕ್ಕೆ ಸಿಕ್ಕ ಪ್ರಶಸ್ತಿಗಳೆಷ್ಟು? 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಕನ್ನಡಕ್ಕೆ ಸಿಕ್ಕ ಪ್ರಶಸ್ತಿಗಳೆಷ್ಟು?

   68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಿಸ್ಟ್ ( ಹಿಂದಿ)

  68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಿಸ್ಟ್ ( ಹಿಂದಿ)

  ಅತ್ಯುತ್ತಮ ನಟ: ಅಜಯ್ ದೇವಗನ್ (ತಾನಾಜಿ)
  ಅತ್ಯುತ್ತಮ ಹಿಂದೆ ಪ್ರಾದೇಶಿಕ ಚಿತ್ರ: ತುಳಸಿದಾಸ್ ಜೂನಿಯರ್
  ಅತ್ಯುತ್ತಮ ವಸ್ತ್ರವಿನ್ಯಾಸ: ನಚಿಕೇತ್ ಬರ್ವೆ & ಮಹೇಶ್ ಶೇರ್ಲಾ
  ಅತ್ಯುತ್ತಮ ಗೀತ ಸಾಹಿತ್ಯ: ಮನೋಜ್ ಮುನ್ತಾಶಿರ್ (ಸೈನಾ)
  ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ

   68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ತೆಲುಗು)

  68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ತೆಲುಗು)

  ಅತ್ಯುತ್ತಮ ಪ್ರಾದೇಶಿಕ ಚಿತ್ರ: ಕಲರ್ ಫೋಟೊ
  ಅತ್ಯುತ್ತಮ ಸಂಗೀತ ನಿರ್ದೇಶನ: ಎಸ್. ತಮನ್ (ಅಲಾ ವೈಕುಂಠಪುರಂಲೊ)
  ಅತ್ಯುತ್ತಮ ಕೊರಿಯೋಗ್ರಫಿ: ಸಂಧ್ಯಾ ರಾಜು (ನಾಟ್ಯಂ)
  ಅತ್ಯುತ್ತಮ ಮೇಕಪ್: ಟಿವಿ ರಾಂಬಾಬು (ನಾಟ್ಯಂ)

   68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ತಮಿಳು)

  68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ತಮಿಳು)

  ಅತ್ಯುತ್ತಮ ಚಿತ್ರ: ಸುರರೈ ಪೋಟ್ರು
  ಅತ್ಯುತ್ತಮ ನಟ: ಸೂರ್ಯ(ಸುರರೈ ಪೋಟ್ರು)
  ಅತ್ಯುತ್ತಮ ನಟಿ: ಅಪರ್ಣ ಬಾಲಮುರಳಿ (ಸುರರೈ ಪೋಟ್ರು)
  ಅತ್ಯುತ್ತಮ ಪೋಷಕ ನಟಿ: ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ('ಶಿವರಂಜನಿಯುಂ ಇನ್ನುಮ್ ಸಿಲ ಪೆಣ್‌ಗಳುಂ')
  ಅತ್ಯುತ್ತಮ ತಮಿಳು ಪ್ರಾದೇಶಿಕ ಸಿನಿಮಾ : 'ಶಿವರಂಜನಿಯುಂ ಇನ್ನುಮ್ ಸಿಲ ಪೆಣ್‌ಗಳುಂ'
  ಅತ್ಯುತ್ತಮ ಸಂಕಲನ: ಶೀಕರ್ ಪ್ರಸಾದ್ ('ಶಿವರಂಜನಿಯುಂ ಇನ್ನುಮ್ ಸಿಲ ಪೆಣ್‌ಗಳುಂ')
  ಅತ್ಯುತ್ತಮ ಹಿನ್ನಲೆ ಸಂಗೀತ: ಜಿ.ವಿ ಪ್ರಕಾಶ್ (ಸುರರೈ ಪೋಟ್ರು)
  ಅತ್ಯುತ್ತಮ ಸಿನಿಮಾ ನಿರ್ಮಾಣ ಸಂಸ್ಥೆ: 2D ಪ್ರೊಡಕ್ಷನ್ಸ್
  ಅತ್ಯುತ್ತಮ ಚಿತ್ರಕಥೆ: ಶಾಲಿನಿ ಉಷಾ (ಸುರರೈ ಪೋಟ್ರು)
  ಅತ್ಯುತ್ತಮ ಸಂಭಾಷಣೆ: ಮಡೋನೆ ಅಶ್ವಿನ್ (ಮಂಡೇಲಾ)
  ಅತ್ಯುತ್ತಮ ಚೊಚ್ಚಲ ಚಿತ್ರದ ನಿರ್ದೇಶಕ: ಮಡೋನೆ ಅಶ್ವಿನ್ (ಮಂಡೇಲಾ)

   68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ಮಲಯಾಳಂ)

  68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಲಿಸ್ಟ್ (ಮಲಯಾಳಂ)

  ಅತ್ಯುತ್ತಮ ನಿರ್ದೇಶಕ: ಸಚ್ಚಿ(ಅಯ್ಯಪ್ಪನುಮ್ ಕೋಶಿಯುಂ)
  ಅತ್ಯುತ್ತಮ ಪೋಷಕ ನಟ: ಬಿಜು ಮೆನನ್ (ಅಯ್ಯಪ್ಪನುಮ್ ಕೋಶಿಯುಂ)
  ಅತ್ಯುತ್ತಮ ಹಿನ್ನಲೆ ಗಾಯಕ: ನಂಜೈಮ್ಮಾ (ಕಲಕತ್ತಾ- ಅಯ್ಯಪ್ಪನುಮ್ ಕೋಶಿಯುಂ )
  ಅತ್ಯುತ್ತಮ ಸಾಹಸ ನಿರ್ದೇಶನ: ಮಾಫಿಯಾ ಸಸಿ, ಸುಪ್ರೀಂ ಸುಂದರ್ & ರಾಜಶೇಖರ್ (ಅಯ್ಯಪ್ಪನುಮ್ ಕೋಶಿಯುಂ)

   ಅತ್ಯುತ್ತಮ ಮಲಯಾಳಂ ಪ್ರಾದೇಶಿಕ ಚಿತ್ರ: ತಿಂಕಳಾಚ್ಚ ನಿಶ್ಚಯಂ (ನಿರ್ದೇಶಕ: ಸೆನ್ನಾ ಹೆಗ್ಡೆ)

  ಅತ್ಯುತ್ತಮ ಮಲಯಾಳಂ ಪ್ರಾದೇಶಿಕ ಚಿತ್ರ: ತಿಂಕಳಾಚ್ಚ ನಿಶ್ಚಯಂ (ನಿರ್ದೇಶಕ: ಸೆನ್ನಾ ಹೆಗ್ಡೆ)

  ಅತ್ಯುತ್ತಮ ಆಡಿಯೋಗ್ರೋಫಿ: ವಿಷ್ಣು ಗೋವಿಂದ್ & ಶ್ರೀಶಂಕರ್ (ಮಾಲಿಕ್)
  ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಅನೀಶ್ ನಾಡೋಡಿ (ಕಪ್ಪೆಲಾ)
  ಅತ್ಯುತ್ತಮ ಸಿನಿಮಾಟೋಗ್ರಫಿ (ನಾನ್ ಫೀಚರ್ ಫಿಲ್ಮ್): ನಿಖಿಲ್ ಎಸ್ ಪ್ರವೀಣ್ (ಸಬ್‌ದಿನ್‌ಕ್ಕುನ್ನ ಕಾಲಪ್ಪ)

  English summary
  68th National Film Awards Kannada Tamil Hindi Malayalam telugu Winners Complete List. Know More.
  Saturday, July 23, 2022, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X