»   » ಇನ್ನೊಂದು ಕ್ರೌಡ್ ಫಂಡಿಂಗ್ ಚಿತ್ರ 'ಮರೆಯಲಾರೆ'

ಇನ್ನೊಂದು ಕ್ರೌಡ್ ಫಂಡಿಂಗ್ ಚಿತ್ರ 'ಮರೆಯಲಾರೆ'

Posted By:
Subscribe to Filmibeat Kannada

ಮೊದಲ ಸಿನಿಮಾ 'ಸ್ಯಾಂಡಲ್ ವುಡ್ ಸರಿಗಮ' ಚಿತ್ರದಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು (ಅತ್ಯುತ್ತಮ ಕಥೆ ಹಾಗೂ ಚಿತ್ರಕಥೆ (ನೋಯ್ಡಾ ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್) ಪಡೆದ ನಂತರ ಶರತ್ ಖಾದ್ರಿ ಅವರು ಈ ಹಿಂದೆ ಪ್ರಾರಂಭ ಮಾಡಿ ಸ್ಥಗಿತ ಗೊಳಿಸಿದ್ದ 'ಮರೆಯಲಾರೆ' ಚಿತ್ರವನ್ನು ಮತ್ತೆ ಪ್ರಾರಂಭಿಸಿದ್ದಾರೆ.

ಸುರಭಿ ಟಾಕಿಸ್ ಅಡಿಯಲ್ಲಿ ಪ್ರಾರಂಭ ಆಗುತ್ತಿರುವ 'ಮರೆಯಾಲಾರೆ' ಸಮೂಹದಿಂದ ಹಣ ಸಹಾಯ (ಕ್ರೌಡ್ ಫಂಡಿಂಗ್) ಪಡೆದು ತಯಾರು ಮಾಡಲಿರುವ ಚಿತ್ರ ಇದು. ಈ ಹಿಂದೆ ಇದೇ ರೀತಿ 'ಲೂಸಿಯಾ' ಚಿತ್ರ ನಿರ್ಮಾಣವಾಗಿತ್ತು. ಪ್ರೀತಿ, ಸಂಬಂಧ, ಕನಸುಗಳ ವಿಷಯಗಳ ಹೊಸ ವಿಚಾರವನ್ನು ಹೊತ್ತ ಚಿತ್ರ ಇದು ಎಂದು ಶರತ್ ಖಾದ್ರಿ ಅವರು ಹೇಳಿದ್ದಾರೆ. [ಲೂಸಿಯಾ : ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ]

Mareyalaare poster

ಪ್ರೇಮಕಥೆಯಲ್ಲಿ ಹಲವು ತಿರುವುಗಳನ್ನು ತುಂಬಿರುವ 'ಮರೆಯಲಾರೆ' ಚಿಕ್ಕಮಗಳೂರು, ಮಧ್ಯ ಪ್ರದೇಶದ 'ಪಂಚ ಮರ್ಹಿ' ಹಾಗೂ ಉತ್ತರ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ಆಗಲಿದೆ. ಮಧ್ಯಪ್ರದೇಶದ ಪಂಚ ಮರ್ಹಿ ಅಂತೂ ಸಿನಿಮಾದ ಹಲವು ಸನ್ನಿವೇಶಗಳಿಗೆ ಆಪ್ತ ಎನ್ನುತ್ತಾರೆ ಶರತ್ ಖಾದ್ರಿ.

ಅರ್ಜುನ್ ಜನ್ಯ ಅವರು 'ಮರೆಯಲಾರೆ' ಚಿತ್ರಕ್ಕೆ ಸಂಗೀತ ಒದಗಿಸಲಿದ್ದಾರೆ. ತಾಂಡವ್ ಚಿತ್ರದ ನಾಯಕ, ಪವಿತ್ರ ಬೆಳ್ಳಿಯಪ್ಪ ಈ ಚಿತ್ರದ ನಾಯಕಿ. ಒಂದು ತಿಂಗಳ ಅವಧಿಯಲ್ಲಿ ಶರತ್ ಖಾದ್ರಿ ಅವರು ಚಿತ್ರಕ್ಕೆ ಹಲವಾರು ಹೊಸ ಮುಖಗಳನ್ನು ಪರಿಚಯಿಸಲಿದ್ದಾರೆ. ಚಿತ್ರದ ಕಥೆ ಬಹಳ ಹೊಸದಾದ್ದರಿಂದ ಅದಕ್ಕೆ ಹೊಸ ಮುಖಗಳ ಪರಿಚಯ ಆಗಬೇಕು ಎಂದು ಶರತ್ ಖಾದ್ರಿ ತಿಳಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Mareyalaare' is a love story with a difference. In other words, a story of love, relationships & aspiration written with a lot of passion. The name 'Mareyalaare' is a Kannada word which means "Unforgettable". A crowded funded venture, Mareyalaare, will be released by Surabhi Talkies Pvt Ltd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada