For Quick Alerts
  ALLOW NOTIFICATIONS  
  For Daily Alerts

  'ಅಭಿನೇತ್ರಿ' ಪೂಜಾಗಾಂಧಿ ಹೊಸ ಇನ್ನಿಂಗ್ಸ್ ಆರಂಭ

  By Rajendra
  |

  ನಟಿ ಪೂಜಾಗಾಂಧಿ ಅವರ ಬಹುದಿನಗಳ ಕನಸು ನನಸಾಗಿದೆ. ಚಲನಚಿತ್ರ ನಿರ್ಮಾಪಕಿಯಾಗಬೇಕೆಂದು ಅವರು ಬಹಳ ದಿನಗಳಿಂದ ಕನಸು ಕಂಡಿದ್ದರು. ಅದೀಗ ಸಾಕಾರವಾಗಿದೆ. ಅವರ ಚೊಚ್ಚಲನ ನಿರ್ಮಾಣದ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

  ತಮ್ಮ ಚೊಚ್ಚಲ ಚಿತ್ರದ ಶೀರ್ಷಿಕೆಯನ್ನು ಫಿಲಂ ಚೇಂಬರ್ ನಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ಪೂಜಾ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ 'ಅಭಿನೇತ್ರಿ' ಎಂದು ಹೆಸರಿಟ್ಟಿದ್ದಾರೆ. ಫಿಲಂ ಚೇಂಬರ್ ನಲ್ಲಿ ನಿರ್ಮಾಪಕರ ಸದ್ಯಸ್ಯತ್ವವನ್ನೂ ಸಾಂಪ್ರದಾಯಿಕವಾಗಿ ಪಡೆದುಕೊಂಡರು.

  ಹೊಸ ನಿರ್ಮಾಪಕರೆಡೆಗೆ ಸಮಿತಿ ಸದಸ್ಯರು ತೋರುತ್ತಿರುವ ಕಾಳಜಿಗೆ ಪೂಜಾಗಾಂಧಿ ಬೆರಗಾಗಿದ್ದಾರೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ಮಾಪಕಿ ಸಿಕ್ಕಂತಾಗಿದೆ. ಅವರ ನಿರ್ಮಾಣದಲ್ಲಿ ಒಳ್ಳೆಯ ಸದಭಿರುಚಿಯ ಚಿತ್ರಗಳು ಮೂಡಿಬರಲಿ ಎಂದು ಆಶಿಸೋಣ.

  ತಮ್ಮ ಸ್ವಂತ ನಿರ್ಮಾಣ ಚಿತ್ರಕ್ಕೆ ಶ್ರೀಕೃಷ್ಣ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಂತೂ ಪೂಜಾಗಾಂಧಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾಗಿದೆ. ಆದರೆ ಮದುವೆ ವಿಚಾರವನ್ನು ಮಾತ್ರ ಸದ್ಯಕ್ಕೆ ಪಕ್ಕಕ್ಕಿಟ್ಟಿದ್ದಾರೆ.

  ಅವರ ಚೊಚ್ಚಲ ಹೋಂ ಬ್ಯಾನರ್ ಚಿತ್ರಕ್ಕೆ ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಉಳಿದ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದು ಹಾಗೂ ಮದುವೆ ಸ್ವಪ್ನಗಳು ಚದುರಿ ಹೋದ ಘಟನೆಗಳನ್ನು ಮರೆತು ಅವರು ಈಗ ಹೊಸ ಉತ್ಸಾಹದಿಂದ ಮರಳಿದ್ದಾರೆ. (ಏಜೆನ್ಸೀಸ್)

  English summary
  Actress Pooja Gandhi dream finally comes true. Her first procuction movie titled as 'Abhinetri'. Recently the actress registered her home banner in Karnataka Film Chamber of Commerce. Sree Krishna Productions is the name of her production house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X