»   » ರಜನಿ 'ಕಾಲ ಕರಿಕಾಲನ್' ಚಿತ್ರಸೆಟ್‌ನಲ್ಲಿ ಅವಘಡ, ಓರ್ವ ಸಾವು

ರಜನಿ 'ಕಾಲ ಕರಿಕಾಲನ್' ಚಿತ್ರಸೆಟ್‌ನಲ್ಲಿ ಅವಘಡ, ಓರ್ವ ಸಾವು

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ ಕರಿಕಾಲನ್' ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ ಆದಾಗಿನಿಂದ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. 'ನ್ಯೂಸ್ 18' ವರದಿ ಪ್ರಕಾರ ಈ ಚಿತ್ರದಲ್ಲಿ ವರ್ಕ್ ಮಾಡುತ್ತಿದ್ದ ವ್ಯಕ್ತಿಯೋರ್ವ ಈಗ ಮೃತಪಟ್ಟಿದ್ದಾನೆ ಎಂದು ತಿಳಿದಿದೆ.

'ಕಾಲ ಕರಿಕಾಲನ್' ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದ ಮೈಕೆಲ್ ಎಂಬಾತ ಚಿತ್ರಸೆಟ್ ನಲ್ಲಿನ ಎಲೆಕ್ಟ್ರಿಕ್ ವೈರಿನ ಮೇಲೆ ಬಿದ್ದು ಮೃತಪಟ್ಟಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೈಕೆಲ್ ಎಲೆಕ್ಟ್ರಿಕ್ ವೈರಿನ ಮೇಲೆ ಆಕಸ್ಮಿಕವಾಗಿ ಬಿದ್ದು ಸಮಸ್ಯೆ ಉಂಟಾದ ತಕ್ಷಣ ಚಿತ್ರತಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದಿದೆ. ಈ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.

Accident on the sets of Rajinikanth's film Kaala, a crew member dies

ತಲೈವಾ 'ಕಾಲ ಕರಿಕಾಲನ್' ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಕೊಳಗೇರಿ ನಿವಾಸಿಗಳ ಅಭಿವೃದ್ದಿ ಮತ್ತು ಹಕ್ಕುಗಳಿಗಾಗಿ ಈ ಚಿತ್ರದಲ್ಲಿ ಹೋರಾಟ ಮಾಡಲಿದ್ದಾರೆ. ಇತ್ತೀಚೆಗಷ್ಟೆ ಮುಂಬೈನಲ್ಲಿ ಶೂಟಿಂಗ್ ಮುಗಿಸಿದ್ದ ರಜನಿಕಾಂತ್ ಚೆನ್ನೈಗೆ ವಾಪಸ್ಸಾಗಿದ್ದರು. ಚಿತ್ರದ ತಮಿಳು ನಾಡಿನ ಭಾಗದ ಚಿತ್ರೀಕರಣಕ್ಕಾಗಿ 5 ಕೋಟಿ ರೂ ನಲ್ಲಿ ಈವಿಪಿ ಸ್ಟುಡಿಯೋದಲ್ಲಿ ಸೆಟ್ ನಿರ್ಮಾಣ ಮಾಡಲಾಗಿದೆ.

ಅಂದಹಾಗೆ ಪಾ ರಂಜಿತ್ ನಿರ್ದೇಶನದ 'ಕಾಲ ಕರಿಕಾಲನ್' ಚಿತ್ರವನ್ನು ರಜನಿಕಾಂತ್ ಅಳಿಯ ನಟ ಧನುಶ್ ನಿರ್ಮಾಣ ಮಾಡುತ್ತಿದ್ದಾರೆ.

English summary
Accident on the sets of Rajinikanth's film 'Kaala Karikaalan', a crew member dies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada