Don't Miss!
- Technology
ಗೂಗಲ್ನಿಂದ ಹೊಸ ಘೋಷಣೆ; ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ MusicLM!
- News
ಸರ್ಜಾಪುರದಲ್ಲಿ ಕಾರಿಗೆ ಬೈಕ್ ಡಿಕ್ಕಿ, ಕಿರುಕುಳ: ಕ್ಯಾಮೆರಾದಲ್ಲಿ ದೃಶ್ಯ ಸೆರೆ- ಇಬ್ಬರ ಬಂಧನ
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
''ರಜನೀಕಾಂತ್ ಒರಟು ಮನುಷ್ಯ, ಸಿಗರೇಟು ಸೇದುತ್ತಿದ್ದ, ಸಾರಾಯಿ ಕುಡಿಯುತ್ತಿದ್ದ ಆದರೆ...''
ನಟ ರಜನೀಕಾಂತ್ ಇಂದು ಕೇವಲ ವ್ಯಕ್ತಿಯಲ್ಲ ಶಕ್ತಿಯಾಗಿಬಿಟ್ಟಿದ್ದಾರೆ. ಅವರ ಒಂದು ಮಾತನ್ನು ವೇದವಾಕ್ಯವೆಂಬಂತೆ ಪಾಲಿಸುವ ಕೋಟ್ಯಂತರ ಅಭಿಮಾನಿಗಳು ಅವರ ಹಿಂದಿದ್ದಾರೆ. ಅವರನ್ನು ದೇವರೆಂದೇ ಪೂಜಿಸುವ ದೊಡ್ಡ ಸಂಖ್ಯೆಯ ಜನರಿದ್ದಾರೆ.
ಆದರೆ ರಜನೀಕಾಂತ್ ಶಿವಾಜಿ ರಾವ್ ಗಾಯಕ್‌ವಾಡ್ ಆಗಿದ್ದಾಗ ಹೀಗಿರಲಿಲ್ಲ. ಬೆಂಗಳೂರಿನ ಸಣ್ಣ ಗಲ್ಲಿಗಳಲ್ಲಿ ಆಡಿ ಬೆಳೆದ ರಜನೀಕಾಂತ್ ಆ ಗಲ್ಲಿಗಳ ಕೆಟ್ಟ ಗುಣಗಳನ್ನು ಮೈಗೂಡಿಸಿಕೊಂಡಿದ್ದರು.
ರಜನೀಕಾಂತ್‌ರ ಬಾಲ್ಯ, ಯೌವ್ವನದ ಗೆಳೆಯರೆಲ್ಲರೂ ಇರುವುದು ಬೆಂಗಳೂರಿನಲ್ಲಿಯೇ ಅವರ ಕೆಲವೇ ಅತ್ಯಾಪ್ತ ಗೆಳೆಯರಲ್ಲಿ ನಟ ಅಶೋಕ್ ಸಹ ಒಬ್ಬರು. ರಜನೀಕಾಂತ್ ಹುಟ್ಟುಹಬ್ಬದ ಪ್ರಯುಕ್ತ 'ಗೆಳೆಯ ಶಿವಾಜಿ' ಹೆಸರಿನ ಪುಸ್ತಕವನ್ನು ಅಶೋಕ್ ಬರೆದಿದ್ದು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಜನೀಕಾಂತ್‌ರೊಟ್ಟಿಗಿನ ಕೆಲವು ಸುಮಧುರ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟಿಗೆ ಕಲಿತ ರಜನೀ-ಅಶೋಕ್
ಬಸ್ ಕಂಡಕ್ಟರ್ ಉದ್ಯೋಗ ತೊರೆದು ನಟನಾಗಲು ಚೆನ್ನೈಗೆ ಹೋದ ರಜನೀಕಾಂತ್ ಅಲ್ಲಿ ಫಿಲಂ ಇನ್‌ಸ್ಟಿಟ್ಯೂಟ್ ಸೇರಿಕೊಂಡರು. ಅಲ್ಲಿಯೇ ನಟ ಅಶೋಕ್ ಸಹ ರಜನೀಕಾಂತ್ ಜೊತೆ ಇನ್‌ಸ್ಟಿಟ್ಯೂಟ್ ಸೇರಿಕೊಂಡಿದ್ದರು. ನಟರಾಗಲು ಬಂದಿದ್ದ ಏಳು ಜನರನ್ನು ಸಂದರ್ಶನ ಮಾಡಿದ್ದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಅಲ್ಲಿಯೇ ರಜನೀಕಾಂತ್ ಅನ್ನು ಮೊದಲು ನೋಡಿದ್ದಂತೆ ನಟ ಅಶೋಕ್. ಸಂದರ್ಶನ ನೀಡಿದ ಏಳು ಜನರಲ್ಲಿ ಆರು ಮಂದಿ ಸಿನಿಮಾ ಇನ್‌ಸ್ಟಿಟ್ಯೂಟ್‌ಗೆ ಸೇರಿಕೊಂಡರಂತೆ. ಹೀಗೆ ನೆನಪುಗಳನ್ನು ಬಿಚ್ಚುತ್ತಾ ಸಾಗಿದರು ಅಶೋಕ್.

ರಜನೀಕಾಂತ್ ಬಹಳ ಒರಟು ಮನುಷ್ಯ: ಅಶೋಕ್
ಶಿವಾಜಿ (ರಜನೀಕಾಂತ್) ಬಹಳ ಒರಟು ಮನುಷ್ಯನಾಗಿದ್ದ. ಕೆಲವು ನಾಗರೀಕ ವರ್ತನೆಗಳು ಅವನಿಗೆ ತಿಳಿದಿರಲಿಲ್ಲ. ಸದಾ ಬ್ರಿಸ್ಟಲ್ ಸಿಗರೇಟು ಸೇದುತ್ತಿದ್ದು, ಸಾರಾಯಿ ಕುಡಿಯುತ್ತಿದ್ದ. ಆದರೆ ಆತ ಕನ್ನಡದವನು, ಆತ ಕೆಟ್ಟ ವಾತಾವರಣದಲ್ಲಿ ಇರುವುದು ಬೇಡ ಎಂಬ ಕಾರಣಕ್ಕೆ ನಾನು ಅವನನ್ನು ನಮ್ಮ ರೂಂಗೆ ಕರೆದುಕೊಂಡು ಬಂದೆ. ದೊಡ್ಡವರ ನಡುವೆ ಹೇಗಿರಬೇಕು ಎಂದು ಹೇಳಿಕೊಟ್ಟೆ. ಒಮ್ಮೆ ಡಿಪ್ಲಮೊ ಕೋರ್ಸ್ ಬಿಟ್ಟುಹೋಗುವ ಮಾತಾಡಿದ, ಆಗ ನಾನೇ ಅವನನ್ನು ತಡೆದು ಬುದ್ಧಿ ಹೇಳಿ ಕೋರ್ಸ್ ಪೂರ್ಣಗೊಳಿಸುವಂತೆ ಮನವಿ ಮಾಡಿದೆ. ಅಂತೆಯೇ ಕೋರ್ಸ್ ಪೂರ್ತಿ ಮಾಡಿದ ಎಂದು ಅಶೋಕ್ ನೆನಪು ಮಾಡಿಕೊಂಡಿದ್ದಾರೆ.

''ರಜನೀಕಾಂತ್ ಹೆಸರು ಬಳಸಿ ಕೋಟ್ಯಂತರ ಹಣ ಮಾಡಬಹುದಿತ್ತು''
ರಜನೀಕಾಂತ್ ಒಬ್ಬ ದೊಡ್ಡ ಸ್ಟಾರ್ ಆಗುತ್ತಾರೆ ಎಂದು ಅಶೋಕ್‌ಗೆ ಅನಿಸಿರಲಿಲ್ಲವಂತೆ. ಆದರೆ ರಜನೀಕಾಂತ್ ಸ್ಟಾರ್ ಆದಮೇಲೆ ಹಲವು ನಿರ್ಮಾಪಕರು ಅಶೋಕ್ ಬಳಿ ಬಂದು ರಜನೀಕಾಂತ್ ಕಾಲ್‌ಶೀಟ್ ಕೊಡಿಸಿ ಎಂದು ಕೇಳುತ್ತಿದ್ದರಂತೆ. ರಜನೀಕಾಂತ್ ಕಾಲ್‌ಶೀಟ್ ಕೊಡಿಸುವಂತೆ ಹಲವು ನಿರ್ಮಾಪಕರು ಕೇಳಿದರು, ಅವರ ಸಿನಿಮಾಗಳ ಕರ್ನಾಟಕ ಬಿಡುಗಡೆ ರೈಟ್ಸ್ ಕೊಡಿಸಿಕೊಡಿ ಸಾಕು ನಿಮಗೆ ಕೋಟ್ಯಂತರ ಹಣ ಕೊಡ್ತೀವಿ ಎಂದರು. ನಾನು ರಜನೀಕಾಂತ್ ಅನ್ನು ಬಳಸಿಕೊಂಡು ಸುಲಭವಾಗಿ ಕೋಟ್ಯಂತರ ಹಣ ಮಾಡಿಬಿಡಬಹುದಿತ್ತು, ಆದರೆ ನಾನು ಹಣದ ಬದಲಿಗೆ ರಜನೀಕಾಂತ್ ಅನ್ನು ಆರಿಸಿಕೊಂಡೆ ಇವತ್ತಿಗೂ ನಮ್ಮ ಗೆಳೆತನ ಹಾಗೆಯೇ ಮುಂದುವರೆದಿದೆ'' ಎಂದಿದ್ದಾರೆ ಅಶೋಕ್.

ರಜನೀಕಾಂತ್ ಬಗ್ಗೆ ಅಶೋಕ್ ಪುಸ್ತಕ
ಅಶೋಕ್ ಹಾಗೂ ರಜನೀಕಾಂತ್ ಒಟ್ಟಿಗೆ ಫಿಲಂ ಇನ್‌ಸ್ಟಿಟ್ಯೂಟ್ ಸೇರಿದವರು, ಚೆನ್ನೈನಲ್ಲಿ ಒಟ್ಟಿಗೆ ಒಂದೇ ರೂಂನಲ್ಲಿ ವಾಸವಿದ್ದವರು. ಎರಡು ವರ್ಷಗಳ ಕಾಲ ರಜನೀಕಾಂತ್ ಜೊತೆ ಕಳೆದ ಅಶೋಕ್, ಆಗ ರಜನೀಕಾಂತ್ ಹೇಗಿದ್ದರು ಎಂಬುದನ್ನು ತಮ್ಮ ಪುಸ್ತಕ 'ಗೆಳೆಯ ಶಿವಾಜಿ' ಪುಸ್ತಕದಲ್ಲಿ ದಾಖಲಿಸಿದ್ದಾರೆ. ಜೊತೆಗೆ ರಜನೀಕಾಂತ್ ಮನಸ್ಸು ಮಾಡಿದರೆ ಏನು ಮಾಡಬಹುದು? ಏನು ಮಾಡಿದರೆ ಚೆನ್ನಾಗಿರುತ್ತೆ ಎಂಬುದನ್ನು ಸಹ ತಮ್ಮ ಪುಸ್ತಕದಲ್ಲಿ ಬರೆದಿರುವುದಾಗಿ ಅಶೋಕ್ ಹೇಳಿದ್ದಾರೆ.