For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ತೆಲುಗು ನಟ ಜಗಪತಿ ಬಾಬು ಮಾತು

  |

  ಯಾರೇ ಆಗಲಿ ಕರ್ನಾಟಕ, ಕನ್ನಡಿಗರಿಗೆ ಒಮ್ಮೆ ಆತ್ಮೀಯರಾದರೆ ಮುಗಿಯಿತು, ಅವರು ಜೀವನಪರ್ಯಂತ ಈ ನೆಲ ಇಲ್ಲ್ಇನ ಜನರಿಗೆ ಅಭಿಮಾನಿಗಳಾಗಿಬಿಡುತ್ತಾರೆ. ತೆಲುಗು ನಟ ಜಗಪತಿ ಬಾಬು ಅವರಿಗೂ ಹೀಗೆಯೇ ಆಗಿದೆ.

  ಜಗಪತಿ ಬಾಬು ಅವರು ಈಗಾಗಲೇ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಕರ್ನಾಟಕ ಹಾಗೂ ಕನ್ನಡಿಗರ ಮೇಲೆ ವಿಶಾಸ ಅಭಿಮಾನ ಬೆಳೆದಿದೆ. ಈ ಬಗ್ಗೆ ಮನತುಂಬಿ ಮಾತನಾಡಿದ್ದಾರೆ ಜಗಪತಿ ಬಾಬು.

  ದರ್ಶನ್ ದೊಡ್ಡತನದ ಬಗ್ಗೆ ಉದಾಹರಣೆ ಕೊಟ್ಟ ನಟ ಜಗಪತಿ ಬಾಬು

  ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಜಗಪತಿ ಬಾಬು. ನಿನ್ನೆ ಹೈದರಾಬಾದ್‌ನಲ್ಲಿ 'ರಾಬರ್ಟ್' ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ನಟ ಜಗಪತಿ ಬಾಬು ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಬಹು ಅಭಿಮಾನದಿಂದ ಮಾತನಾಡಿದ್ದಾರೆ.

  ಗೆಳೆಯ ವಿನೋದ್ ಪ್ರಭಾಕರ್ ಬಗ್ಗೆ ದರ್ಶನ್ ಭಾವುಕ ಮಾತು

  ಕನ್ನಡಿದವರು ಮನಸ್ಸಿನಿಂದ ಮಾತನಾಡುತ್ತಾರೆ: ಜಗಪತಿ ಬಾಬು

  ಕನ್ನಡಿದವರು ಮನಸ್ಸಿನಿಂದ ಮಾತನಾಡುತ್ತಾರೆ: ಜಗಪತಿ ಬಾಬು

  'ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಮಾತನಾಡಬೇಕು. ಅವರು ಏನೇ ಮಾತನಾಡಿದರು ಅದು ಮನಸ್ಸಿನಿಂದ ಬರುವ ಮಾತಾಗಿರುತ್ತದೆ. ನಾನು ಸಿನಿಮಾ ಕಾರ್ಯಕ್ರಮಗಳಿಗೆ ಬರುವುದು ಬಿಟ್ಟಿದ್ದೆನೆ. ಆದರೆ ಈ ತಂಡದ ಜೊತೆ ಬೆರೆಯಲು, ಅವರೊಟ್ಟಿಗೆ ಮಾತನಾಡಲು ಇಲ್ಲಿಗೆ ಬಂದಿದ್ದೇನೆ' ಎಂದರು ಜಗಪತಿ ಬಾಬು.

  'ಕನ್ನಡದವರು ನೀಡಿದ ಗೌರವ, ತೆಲುಗಿನವರೂ ನೀಡಿರಲಿಲ್ಲ'

  'ಕನ್ನಡದವರು ನೀಡಿದ ಗೌರವ, ತೆಲುಗಿನವರೂ ನೀಡಿರಲಿಲ್ಲ'

  'ನಾನು ಕರ್ನಾಟಕಕ್ಕೆ ಹೋಗಿ ಅಲ್ಲಿ ಸಿನಿಮಾ ಮಾಡುವಾಗ ನನಗೆ ಅವರು ನೀಡಿದ ಗೌರವವನ್ನು ತೆಲುಗಿನವರು ಸಹ ಕೊಟ್ಟಿಲ್ಲ. 'ನೀವು ನಮಗೆ ಅತಿಥಿ, ಎಂದು ಹೇಳಿ ನಿರ್ದೇಶಕ, ನಿರ್ಮಾಪಕ, ನಟ-ನಟಿಯರು ಬಹಳ ಚೆನ್ನಾಗಿ ನಮ್ಮನ್ನು ನೋಡಿಕೊಂಡರು' ಎಂದು ಹೇಳಿದರು ಜಗಪತಿ ಬಾಬು.

  ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್

  ಕನ್ನಡ ಸಿನಿಉದ್ಯಮ ಬಹುದೊಡ್ಡದಾಗಿ ಬೆಳೆದಿದೆ: ಜಗಪತಿ ಬಾಬು

  ಕನ್ನಡ ಸಿನಿಉದ್ಯಮ ಬಹುದೊಡ್ಡದಾಗಿ ಬೆಳೆದಿದೆ: ಜಗಪತಿ ಬಾಬು

  'ರಾಬರ್ಟ್‌ ಸಿನಿಮಾಕ್ಕಾಗಿ ತೆಲುಗು ರಾಜ್ಯಗಳ ಚಿತ್ರಮಂದಿರಗಳು ಕೇಳುತ್ತಿವೆ, ಕನ್ನಡ ಸಿನಿಮಾ ಬಹಳ ವರ್ಷಗಳ ಹಿಂದೆ ಸಣ್ಣ ಉದ್ಯಮ. ಆದರೆ ಈಗ ಹಾಗಿಲ್ಲ, ಅದು ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ. ಈ ಕಾರ್ಯಕ್ರಮ ನೋಡಿದರೆ ಗೊತ್ತಾಗುತ್ತದೆ, ಎಷ್ಟು ಅದ್ಧೂರಿಯಾಗಿ ಕಾರ್ಯಕ್ರಮ ಮಾಡಿದ್ದಾರೆಂದು' ಎಂದರು ಜಗಪತಿ ಬಾಬು.

  ರೆಡಿಯಾಗ್ತಿದೆ ಬೃಹತ್ ಡಿ ಬಾಸ್ ವೇದಿಕೆ | Roberrt Pre-Release Event Hubli | Filmibeat Kannada
  ನಮ್ಮ ಎದೆಯಲ್ಲಿಟ್ಟು ನೋಡಿಕೊಳ್ಳಬೇಕು: ಜಗಪತಿ ಬಾಬು

  ನಮ್ಮ ಎದೆಯಲ್ಲಿಟ್ಟು ನೋಡಿಕೊಳ್ಳಬೇಕು: ಜಗಪತಿ ಬಾಬು

  ಈಗ ಅವರು ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರನ್ನು ನಮ್ಮ ಅತಿಥಿಗಳಂತೆ ನೋಡಿಕೊಳ್ಳಬೇಕು. ಅವರನ್ನು ನಮ್ಮ ಎದೆಯಲ್ಲಿಟ್ಟು ಕಾಪಾಡಿಕೊಳ್ಳಬೇಕು. ಅವರಿಗೆ ದೊಡ್ಡ ಹಿಟ್ ಒಂದನ್ನು ನಾವು ನೀಡಬೇಕು. ತೆಲುಗು ಹಾಗೂ ಕನ್ನಡ ಸಿನಿಮಾ ಉದ್ಯಮಗಳು ಜೊತೆ-ಜೊತೆಯಲ್ಲಿ ಸಾಗಬೇಕು' ಎಂದಿದ್ದಾರೆ ಜಗಪತಿ ಬಾಬು.

  English summary
  Telugu actor Jagapathi Babu praised Karnataka and Kannada people in Roberrt pre-release event which happened in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X