Don't Miss!
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- News
ಜಾರ್ಖಂಡ್: ಆಸ್ಪತ್ರೆಯಲ್ಲಿ ಅಗ್ನಿ ದುರಂತ- ವೈದ್ಯ ದಂಪತಿ ಸೇರಿ 6 ಮಂದಿ ಸಾವು!
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಟೋ ಚಾಲಕರ ಜೊತೆ ಕನ್ನಡ ರಾಜ್ಯೋತ್ಸವ ಆಚರಿಸಿದ ಸತೀಶ್ ನೀನಾಸಂ
ಆಟೋ ಚಾಲಕರು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಗೂ ಒಂದು ರೀತಿ ಅವಿನಾಭಾವ ಸಂಬಂಧ. ಸ್ಯಾಂಡಲ್ ವುಡ್ ಚಿತ್ರಗಳನ್ನು ಮೊದಲ ದಿನ ಮೊದಲ ಶೋ ನೋಡುವ ಪ್ರೇಕ್ಷಕರಲ್ಲಿ ಆಟೋ ಚಾಲಕರೇ ಹೆಚ್ಚಿರ್ತಾರೆ ಎನ್ನುವುದನ್ನು ಮರೆಯುವಂತಿಲ್ಲ.
ಶಂಕರ್ ನಾಗ್, ವಿಷ್ಣುವರ್ಧನ್, ದರ್ಶನ್, ಸುದೀಪ್, ಗಣೇಶ್ ಸೇರಿದಂತೆ ಅನೇಕ ಕಲಾವಿದರು ಆಟೋ ಡ್ರೈವರ್‌ಗಳ ಪಾತ್ರ ಮಾಡಿದ್ದಾರೆ. ಅದೇಷ್ಟೋ ಆಟೋ ಚಾಲಕರ ಪಾಲಿಗೆ ಈ ಕಲಾವಿದರು ಆರಾಧ್ಯ ದೈವವೇ ಆಗಿದ್ದಾರೆ.
ಸತೀಶ್
ನೀನಾಸಂ
ವೃತ್ತಿ
ಜೀವನದಲ್ಲಿ
ಇಂದು
ಮರೆಯಲಾಗದ
ದಿನ
ಇಂತಹ ಆಟೋ ಚಾಲಕರ ಜೊತೆ ನಟ ಸತೀಶ್ ನೀನಾಸಂ ಅವರು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಪೀಸ್ ಆಟೋ ಸಂಘದ ವತಿಯಿಂದ ಆಯೋಜಿಸಲಾಗಿದ್ದ, ಆಟೋ ಚಾಲಕರ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸತೀಶ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
ಈ ಕುರಿತು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ಸತೀಶ್ ''ನಮ್ಮ ಆಟೋ ಚಾಲಕರಿಂದ ಕನ್ನಡದ ಸಿನಿಮಾ, ಭಾಷೆ, ಎಲ್ಲದಕ್ಕು ದೊಡ್ಡ ಕೊಡುಗೆ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಅತ್ಯಂತ ಸಂತಸದ ಕ್ಷಣ, ಜೈ ಕರ್ನಾಟಕ. ಜೈ ಆಟೋ ಚಾಲಕ...'' ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
Recommended Video
ಅಂದ್ಹಾಗೆ, ಸತೀಶ್ ನೀನಾಸಂ ಅವರು ಸತತ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸದ್ಯ, ಪೆಟ್ರೋಮ್ಯಾಕ್ಸ್, ದಸರಾ ಹಾಗೂ ಮ್ಯಾಟ್ನಿ ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಮೂರು ಸಿನಿಮಾ ಚಿತ್ರೀಕರಣ ಮಾಡ್ತಿವೆ.