»   » ಚಿತ್ರಗಳು: ಶಬರಿಮಲೈ ಯಾತ್ರೆಗೆ ಹೊರಟ ಶಿವರಾಜ್ ಕುಮಾರ್

ಚಿತ್ರಗಳು: ಶಬರಿಮಲೈ ಯಾತ್ರೆಗೆ ಹೊರಟ ಶಿವರಾಜ್ ಕುಮಾರ್

Posted By:
Subscribe to Filmibeat Kannada

ಪ್ರತಿ ವರ್ಷದಂತೆ ಈ ವರ್ಷವೂ ಅಣ್ಣಾವ್ರ ಮಗ ಶಿವರಾಜ್ ಕುಮಾರ್, ಮತ್ತು ಡಾ.ರಾಜ್ ಮೊಮ್ಮಕ್ಕಳು ಶಬರಿಮಲೈ ಯಾತ್ರೆಗೆ ಹೊರಟಿದ್ದಾರೆ. ಡಾ.ರಾಜ್ ಮನೆಯಲ್ಲಿ ಸುಮಾರು ವರ್ಷಗಳಿಂದ ಈ ಸಂಸ್ಕೃತಿ ಆಚರಿಸಿಕೊಂಡು ಬರುತ್ತಿದ್ದು, ಇಂದಿಗೂ ಅಣ್ಣಾವ್ರ ಮಕ್ಕಳು, ಮೊಮ್ಮಕ್ಕಳು ಮುಂದುವರೆಸುತ್ತಿದ್ದಾರೆ.[ಅಣ್ಣಾವ್ರ ಮಕ್ಕಳ ಶಬರಿಮಲೈ ಯಾತ್ರೆ ಆರಂಭ]

ಅಯ್ಯಪ್ಪನ ದರ್ಶನಕ್ಕೆ ಹೋಗುವ ಮುಂಚೆ, ನಾಗವಾರದಲ್ಲಿರುವ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಸಕಲ ಪೂಜಾ ಕಾರ್ಯಗಳನ್ನ ಕೈಗೊಂಡು, ಸಂಜೆ ಹೊತ್ತಿಗೆ ಸೆಂಚುರಿ ಸ್ಟಾರ್ ಮತ್ತು ತಂಡ ಯಾತ್ರೆ ಆರಂಭಿಸಿದರು. ಶಿವಣ್ಣನ ಶಬರಿಮಲೈ ಯಾತ್ರೆ ಹೇಗಿತ್ತು ಎಂಬುದನ್ನ ಚಿತ್ರಗಳ ಸಮೇತ ನೋಡಿ. ಮುಂದೆ ಓದಿ....

ಅಯ್ಯಪ್ಪನ ದರ್ಶನಕ್ಕೆ ಹೊರಟ ಶಿವಣ್ಣ!

9ನೇ ವರ್ಷ ಮಾಲೆ ಧರಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿವರ್ಷದಂತೆ ಈ ವರ್ಷವೂ ಶಬರಿಮಲೈ ಯಾತ್ರೆಗೆ ಹೊರಟಿದ್ದಾರೆ. ನಟ ಶಿವಣ್ಣನಿಗೆ ನಟ ವಿನಯ್ ರಾಜ್ ಕುಮಾರ್, ಗುರುರಾಜ್ ಕುಮಾರ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಹಲವರು ಸಾಥ್ ಕೊಟ್ಟಿದ್ದಾರೆ.

ನಾಗವಾರದ ಮನೆಯಲ್ಲಿ ಇರುಮುಡಿ!

ಶಬರಿಮಲೈ ಯಾತ್ರೆಗೂ ಹೋಗುವ ಮುಂಚೆ, ನಾಗವಾರದಲ್ಲಿರುವ ಶಿವಣ್ಣ ಅವರ ಮನೆಯಲ್ಲಿ ಇರುಮುಡಿ ಕಾರ್ಯಕ್ರಮ ಜರುಗಿತು. ಡಾ.ಶಿವರಾಜ್ ಕುಮಾರ್ ಸೇರಿದಂತೆ ಹಲವರು ಅಯ್ಯಪ್ಪನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಹಿರಿಯ ನಟ ಶಿವರಾಂ ನೇತೃತ್ವ

ಹಿರಿಯ ನಟ ಶಿವರಾಂ ಅವರು ನೇತೃತ್ವದಲ್ಲಿ ಶಿವಣ್ಣ ಮತ್ತು ತಂಡದ ಶಬರಿಮಲೈ ಯಾತ್ರೆ ಕೈಗೊಂಡರು. ಶಿವರಾಂ ಅವರು ಗುರುಸ್ವಾಮಿ ಆಗಿದ್ದಾರೆ.

ವಿನಯ ರಾಜ್ ಕುಮಾರ್

ಪ್ರತಿ ವರ್ಷದಂತೆ ಈ ವರ್ಷವೂ ರಾಘವೇಂದ್ರ ರಾಜ್ ಕುಮಾರ್ ಅವರ ದೊಡ್ಡ ಮಗ ವಿನಯ್ ರಾಜ್ ಕುಮಾರ್ ಕೂಡ ಮಾಲೆ ಧರಿಸಿ, ಶಿವಣ್ಣನಿಗೆ ಸಾಥ್ ಕೊಟ್ಟರು.

ಗುರುರಾಜ್ ಕುಮಾರ್

ಇನ್ನೂ ಶಿವರಾಜ್ ಕುಮಾರ್, ಮತ್ತು ವಿನಯ್ ರಾಜ್ ಕುಮಾರ್ ಅವರ ಜೊತೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಗುರು ರಾಜ್ ಕುಮಾರ್ ಕೂಡ ಅಯ್ಯಪ್ಪನ ದರ್ಶನಕ್ಕೆ ತೆರಳಿದರು.

ಕೆಪಿ ಶ್ರೀಕಾಂತ್, ವಸಿಷ್ಠ ಸಿಂಹ

ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮತ್ತು ಯುವ ನಟ ವಸಿಷ್ಠ ಸಿಂಹ ಕೂಡ ಶಬರಿಮಲೈ ಯಾತ್ರೆಗೆ ಶಿವಣ್ಣನ ಜೊತೆಯಲ್ಲಿ ಸಾಗಿದರು.

ವಿಜಯ ರಾಘವೇಂದ್ರ ಭಾಗಿ

ಶಿವಣ್ಣನ ಮನೆಯಲ್ಲಿ ನಡೆದ ಇರುಮುಡಿ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ ಅವರು ಭಾಗಿಯಾಗಿ, ಶಬರಿಮಲೈ ಯಾತ್ರೆಗೆ ಶುಭ ಕೋರಿದರು.

ಭಕ್ತರಿಗೆ ಊಟದ ವ್ಯವಸ್ಥೆ

ಅಯ್ಯಪ್ಪನ ಪೂಜೆಯ ನಂತರ ಭಕ್ತರಿಗೆ ಊಟದ ವ್ಯವಷ್ಥೆಯನ್ನ ಕೂಡ ಮಾಡಲಾಗಿತ್ತು.

ಪುನೀತ್, ರಾಘಣ್ಣ ಹೋಗಿಲ್ಲ

ಆರೋಗ್ಯ ಸಮಸ್ಯೆಯಿಂದ ಈ ಬಾರಿ ರಾಘವೇಂದ್ರ ರಾಜ್ ಕುಮಾರ್ ಶಬರಿಮಲೈ ಯಾತ್ರೆಗೆ ಹೋಗಲಿಲ್ಲ. ಬದಲಾಗಿ ತಮ್ಮ ಇಬ್ಬರು ಮಕ್ಕಳನ್ನ ಕಳುಹಿಸಿದ್ದಾರೆ. ಇನ್ನೂ ಕಾರಣಾಂತರಗಳಿಂದ ಪುನೀತ್ ರಾಜ್ ಕುಮಾರ್ ಕೂಡ ಈ ಭಾರಿ ಅಯ್ಯಪ್ಪನ ದರ್ಶನಕ್ಕೆ ಹೋಗಲು ಸಾಧ್ಯವಾಗಲಿಲ್ಲ.

ಮಾರ್ಚ್ 18 ರಂದು ಅಯ್ಯಪ್ಪನ ದರ್ಶನ

ಮಾರ್ಚ್ 18 ರಂದು ನಟ ಶಿವರಾಜ್ ಕುಮಾರ್ ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಶಬರಿಮಲೈಯಲ್ಲಿ ಸ್ವಾಮಿ ಅಯ್ಯಪ್ಪನ ದರ್ಶನವನ್ನ ಮಾಡಲಿದ್ದಾರಂತೆ.

ಅಣ್ಣಾವ್ರ ಕಾಲದಿಂದಲೂ ದೊಡ್ಮನೆಯಲ್ಲಿದೆ ಸಂಪ್ರದಾಯ!

ಡಾ.ರಾಜ್ ಕುಮಾರ್ ಕಾಲದಿಂದಲೂ ದೊಡ್ಮನೆಯಲ್ಲಿ ಶಬರಿಮಲೈಗೆ ಯಾತ್ರೆ ಮಾಡುವ ಸಂಪ್ರದಾಯವಿದ್ದು, ಅಣ್ಣಾವ್ರ ನಂತರೂ ಮಕ್ಕಳು ಈ ಸಫ್ರದಾಯವನ್ನ ಮುಂದುವರಿಸುತ್ತಿದ್ದಾರೆ.

ಶಿವಣ್ಣನ ಮನೆಯಲ್ಲಿ ಹಬ್ಬದ ಸಂಭ್ರಮ

ಶಿವರಾಜ್ ಕುಮಾರ್ ಅವರ ಶಬರಿಮಲೈ ಯಾತ್ರೆ ಹಿನ್ನಲೆ, ತಮ್ಮ ಮನೆಯಲ್ಲಿ ಹಬ್ಬದ ವಾತವರಣವೇ ಸೃಷ್ಟಿಯಾಗಿತ್ತು.

English summary
Actor Shivarajkumar along with Vinay Rajkumar, Guru Rajkumar, and others have started Sabarimala Yatra Yesterday (March 15th) Evening. After offering Prayers to Lord Ayyappa, the team will be back To Banglore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada