»   » ಏಪ್ರಿಲ್ ನಲ್ಲಿ ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ

ಏಪ್ರಿಲ್ ನಲ್ಲಿ ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಇದೊಂದು ದೊಡ್ಡ ಸುದ್ದಿ. ಹ್ಯಾಟ್ರಿಕ್ ಹೀರೋ, ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅವರ ಹಿರಿಯ ಪುತ್ರಿ ನಿರುಪಮಾ ಈಗ ಮದುಮಗಳಾಗುತ್ತಿದ್ದಾರೆ. ಇದೇ ಏಪ್ರಿಲ್ 21ರಂದು ನಿಶ್ಚಿತಾರ್ಥ ನಡೆಯಲಿದೆ.

ವರನಟ ಡಾ.ರಾಜ್ ಕುಮಾರ್ ಮೊಮ್ಮಗಳ ಮದುವೆ ಎಂದರೆ ಕೇಳಬೇಕೆ. ಇಡೀ ಸ್ಯಾಂಡಲ್ ವುಡ್ ನಲ್ಲೇ ಸಂಭ್ರಮದ ವಾತಾವರಣ ನೆಲಸಲಿದೆ. ಅದ್ದೂರಿತನಕ್ಕೂ ಕೊರತೆಯಿರಲ್ಲ. ವೃತ್ತಿಯಲ್ಲಿ ವೈದ್ಯೆಯಾಗಿರುವ ನಿರುಪಮಾ ಅವರು ಹಸೆಮಣೆ ಏರುತ್ತಿದ್ದಾರೆ.

Actor Shivrajkumar daughter Dr Nirupama engagement

ಡಾ.ನಿರುಪಮಾ ಅವರು ಕೈಹಿಡಿಯುತ್ತಿರುವ ವರ ದಿಲೀಪ್ ಸಹ ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ನಿವಾಸಿ. ಪ್ರಸ್ತುತ ರಾಘವೇಂದ್ರ ರಾಜ್ ಕುಮಾರ್ ಅವರು ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಬೆಂಗಳೂರಿಗೆ ಹಿಂತಿರುಗಿದ ಬಳಿಕ ಪಾರ್ವತಮ್ಮನವರ ಸಮ್ಮುಖದಲ್ಲಿ ಗುರುಹಿರಿಯರ ಆಶೀರ್ವಾದದೊಂದಿಗೆ ನಿಶ್ಚಿತಾರ್ಥ ನೆರವೇರಲಿದೆ ಎಂದು ಸ್ವತಃ ಶಿವರಾಜ್ ಕುಮಾರ್ ಅವರು ತಿಳಿಸಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲೇ ಒಂಥರಾ ಮದುವೆ ಮೂಡ್ ಬಂದಿದೆ.

ಸದ್ಯಕ್ಕೆ ಶಿವಣ್ಣ ಅವರು ಸಿಂಗಪುರದಲ್ಲಿದ್ದಾರೆ. ರಾಘಣ್ಣನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ. ಜೊತೆಗೆ 'ಆರ್ಯನ್' ಚಿತ್ರದ ಹಾಡುಗಳ ಚಿತ್ರೀಕರಣವೂ ಜನವರಿ 2ರಿಂದ ಸಿಂಗಪುರದಲ್ಲಿ ಆರಂಭವಾಗಲಿದೆ. ರಮ್ಯಾ ನಾಯಕಿಯಾಗಿರುವ ಚಿತ್ರವನ್ನು ಚಿ.ಗುರುದತ್ ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್)

English summary
Century Star Shivarajkumar's (52) daughter Dr. Nirupama is getting engaged in 21st April next year 2014. Shivrajkumar himself confirmed that the marriage of his daughter has been fixed.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada